ಕೊಡಗಿನ ವರುಣ್ ಗಣಪತಿ ಭಾರತ ಸೇನೆಯ ಲೆಫ್ಟಿನೆಂಟ್
Team Udayavani, Nov 24, 2020, 11:58 AM IST
ಮಡಿಕೇರಿ, ನ. 23: ಭಾರತೀಯ ಭೂ ಸೇನೆಯಲ್ಲಿ ಒಂದು ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ “ಸೋರ್ಡ್ ಆಫ್ ಹಾನರ್’ ಮತ್ತು “ರಾಷ್ಟ್ರಪತಿಗಳ ಚಿನ್ನದ ಪದಕ’ದೊಂದಿಗೆ ಲೆಫ್ಟಿನೆಂಟ್ ಆಗಿ ಕೊಡಗಿನ ಕುವರ ಚೋಳಂಡ ವರುಣ್ ಗಣಪತಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಚೆನ್ನೈಯ ಆಫೀಸರ್ ಟ್ರೈನಿಂಗ್ ಅಕಾಡೆಮಿಯ ಆವರಣದಲ್ಲಿ ನಡೆದ “ಪಾಸಿಂಗ್ ಔಟ್ ಪರೇಡ್’ನಲ್ಲಿ ಈ ಗೌರವಕ್ಕೆ ಭಾಜನರಾದ ವರುಣ್ ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ ಸ್ಕೂಲ್, ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲೆ, ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. ಜನವರಿಯಲ್ಲಿ ನಡೆದ ವಾಯುಪಡೆಯ ತರಬೇತಿ ಪರೀಕ್ಷೆಗಳಲ್ಲಿ ಕೂಡ ಉತ್ತೀರ್ಣರಾಗಿ ವಾಯುಪಡೆಗೆ ಆಯ್ಕೆಯಾಗಿದ್ದರು.
ವರುಣ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಆಗಿರುವ ಚೋಳಂಡ ಪೂವಯ್ಯ ಮತ್ತು ಧರಣಿ ಪೂವಯ್ಯ (ತಾಮನೆ ಮಣವಟ್ಟೀರ) ದಂಪತಿಯ ಹಿರಿಯ ಪುತ್ರ.
ವರುಣ್ ಅವರು ಈ ಹಿಂದೆ “ಖಡ್ಗ ಗೌರವಕ್ಕೆ’ ಪಾತ್ರರಾದ ಕರ್ನಲ್ ಪಟ್ಟಡ ಎನ್. ತಿಮ್ಮಯ್ಯ, ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ. ತಿಮ್ಮಯ್ಯ, ಸ್ಕ್ವಾ.ಲೀ. ಮಲ್ಲೇಂಗಡ ಬಿ. ಚಿಟ್ಟಿಯಪ್ಪ ಮತ್ತು ಲೆ| ಕಮಾಂಡರ್ ಮುಕ್ಕಾಟೀರ ಸೂರಜ್ ಅಯ್ಯಪ್ಪ ಅವರ ವಿಶೇಷ ಸಾಧನೆಯ ಪಟ್ಟಿಯಲ್ಲಿ ಸೇರಿದ್ದಾರೆ. ವರುಣ್ ಅವರು ಲೆ| ಕಮಾಂಡರ್ ಮುಕ್ಕಾಟೀರ ಸೂರಜ್ ಅಯ್ಯಪ್ಪ ಅವರಂತೆ “ಖಡ್ಗ ಗೌರವ’ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದ ಸಾಧನೆಯಲ್ಲಿ ಎರಡನೇಯವರಾಗಿ ಹೊರಹೊಮ್ಮಿದ್ದು ಮತ್ತೂಂದು ವಿಶೇಷ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಚಿವರುಗಳ ಸಹಾನುಭೂತಿ ಬೇಕಿಲ್ಲ: ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿ ವಚನ ಪಾಲಿಸಿದ್ದ ಸಿಂದಗಿಯ ಮನಗೂಳಿ ಮುತ್ಯಾ!
ಶಿವಮೊಗ್ಗ: ಯುವಕರಿಬ್ಬರಿಗೆ ಚಾಕು ಇರಿತ, ಓರ್ವ ಸಾವು- ಇನ್ನೊಬ್ಬನ ಸ್ಥಿತಿ ಗಂಭೀರ
ಸರಳವಾಗಿ ಸೆಟ್ಟೇರಿದ ಬೆಲ್ಬಾಟಂ-2: ರಿಷಭ್ ಗೆ ಹರಿಪ್ರಿಯಾ, ತಾನ್ಯ ಹೋಪ್ ಸಾಥ್