ವಿರಾಜಪೇಟೆ: ಕಾಡಾನೆ ತುಳಿತಕ್ಕೆ ತಲೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ!
Team Udayavani, Feb 26, 2021, 8:38 AM IST
Representative Image
ಮಡಿಕೇರಿ: ಕಾಡಾನೆ ತುಳಿದ ಪರಿಣಾಮ ತಲೆ ಛಿದ್ರಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ.
ಮೃತಪಟ್ಟ ಕಾರ್ಮಿಕನನ್ನು ಸಂದೀಪ್ (22 ವ) ಎಂದು ಗುರುತಿಸಲಾಗಿದೆ.
ಸಿದ್ದಾಪುರ ಸಮೀಪ ಬಿಬಿಟಿಸಿ ಬೀಟಿಕಾಡು ತೋಟದಲ್ಲಿಈ ಘಟನೆ ನಡೆದಿದ್ದು, ಕಾಫಿ ಪಲ್ಪಿಂಗ್ ಕಣದಲ್ಲಿ ಸಂದೀಪ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ:ಹಸುಗಳನ್ನೇ ಮಾರಾಟ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರು!
ಕಳೆದ ರಾತ್ರಿ ಸಂದೀಪ್ ನಿದ್ರೆಯಲ್ಲಿದ್ದ ಸಂದರ್ಭ ಹಠಾತ್ತನೆ ಬಂದ ಕಾಡಾನೆ ದಾಳಿ ಮಾಡಿದೆ. ಕಾಡಾನೆ ತುಳಿತಕ್ಕೆ ತಲೆ ಛಿದ್ರಗೊಂಡು ಸ್ಥಳದಲ್ಲೇ ಕಾರ್ಮಿಕ ಸಂದೀಪ್ ಮೃತಪಟ್ಟಿದ್ದಾನೆ.
ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ನಕ್ಷತ್ರ ಆಮೆ ಮಾರಾಟ ಯತ್ನ : ಮೂವರ ಬಂಧನ
ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. ಕಾಡಾನೆ ಹಾವಳಿ ತಡೆಗೆ ಶಾಶ್ವತವಾಗಿ ಕಾರ್ಮಿಕರು ಒತ್ತಾಯ ನಡೆಸಿದರು.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್
ಕಳತ್ಮಾಡು: ವರ್ಷದಿಂದ ಉಪಟಳ ನೀಡುತ್ತಿದ್ದ ಆನೆ ಕೊನೆಗೂ ಬಂದಿ!
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ವಿಷಯ ತಿಳಿದು ಕೊನೆಯುಸಿರೆಳೆದ ಅಜ್ಜಿ!
‘ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ!’
ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್
MUST WATCH
ಹೊಸ ಸೇರ್ಪಡೆ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು
ಕಾಂಗ್ರೆಸ್ ನಿಂದ ಹೊಸ ಚಾನೆಲ್ “ಐಎನ್ ಸಿ ಟಿವಿ” ಶುರು