ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದ ನಾಲ್ವರ ಬಂಧನ
Team Udayavani, Jun 2, 2021, 2:54 PM IST
ಮಂಗಳೂರು : ದುರ್ಗಾ ವಾಹಿನಿ ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಶರಣ್ ಪಂಪುವೆಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಸಮುದಾಯದ ರಕ್ಕಸರಿಂದ ನಿಮ್ಮ ಮನೆಯ ಹುಡುಗಿಯರನ್ನು ರಕ್ಷಿಸಿ ಎಂಬಿತ್ಯಾದಿ ಬರಹವುಳ್ಳ ಸಂದೇಶಗಳನ್ನು ವಾಟ್ಸಾಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಶಂಕರ್(32), ನೌಶದ್ (27), ರವಿ (38), ಜಯ ಕುಮಾರ್(33) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರುಗಳನ್ನು ನಿನ್ನೆ (ಜೂನ್ 1) ದಸ್ತಗಿರಿ ಮಾಡಲಾಗಿದೆ.
ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ
ಜೂ. 1: ಮೂಡುಬಿದಿರೆಗೆ ಮುಖ್ಯಮಂತ್ರಿ ಬೊಮ್ಮಾಯಿ; ವಿದ್ಯಾರ್ಥಿಗಳ ಜತೆಗೆ ಸಂವಾದ
5 ಬಸ್ ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ