ಕಾರಿನೊಳಗೆ ಹೊಕ್ಕಿದ ಅಲ್ಯುಮಿನಿಯಂ ಪಟ್ಟಿಗಳು: ಚಾಲಕ ಪವಾಡ ಸದೃಶ ಪಾರು
Team Udayavani, Feb 23, 2023, 6:47 AM IST
ಮಂಗಳೂರು: ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಗರದ ನಂತೂರು ಜಂಕ್ಷನ್ನಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಕೆಪಿಟಿ ಕಡೆಯಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದ ಕಾರಿನ ಹಿಂಭಾಗದಲ್ಲಿ ಅಲ್ಯುಮಿನಿಯಂ ಪಟ್ಟಿಗಳನ್ನು ಹೊತ್ತಿದ್ದ ಪಿಕಪ್ ಇತ್ತು. ನಂತೂರು ಜಂಕ್ಷನ್ನಲ್ಲಿ ಕಾರು ಚಾಲಕ ಬ್ರೇಕ್ ಹಾಕಿದಾಗ ಪಿಕ್ಅಪ್ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ. ಕಾರಿನಲ್ಲಿ ಚಾಲಕ ಮಾತ್ರವಿದ್ದರು. ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತಿವೆ. ಕಾರಿಗೆ ಹಾನಿಯಾಗಿದೆ. ಪಿಕ್ಅಪ್ ವಾಹನದ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ