Fraud Case ಹಣ ಗಳಿಸುವ ಆಸೆ ತೋರಿಸಿ ವಂಚನೆ 9 ಲಕ್ಷ ರೂ. ಕಳೆದುಕೊಂಡ ಯುವಕ
Team Udayavani, Jan 13, 2024, 10:15 PM IST
ಬಂಟ್ವಾಳ: ಆ್ಯಪ್ ಮೂಲಕ ಹಣ ಗಳಿಸುವ ಆಸೆ ತೋರಿಸಿ ಮೋಸದ ಜಾಲಕ್ಕೆ ಸಿಲುಕಿ ಗೋಳ್ತಮಜಲಿನ ಯುವಕನೋರ್ವ ಒಟ್ಟು ಸುಮಾರು 9.09 ಲಕ್ಷ ರೂ. ಕಳೆದುಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಉಮೈರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರಿಗೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಕಳೆದ ನವೆಂಬರ್ 10ರಂದು ಅಪರಿಚಿತ ಸಂಖ್ಯೆಯೊಂದರಿಂದ ಸಂದೇಶ ಬಂದಿದ್ದು, ನಿಮಗೆ ದಿನನಿತ್ಯ ಹಣ ಮಾಡುವ ಉದ್ದೇಶವಿದ್ದಲ್ಲಿ ನಮ್ಮ ಗ್ರೂಪಿಗೆ ಸೇರುವಂತೆ ತಿಳಿಸಿದ್ದರು.
ಅದರಂತೆ ಅವರು ಸೇರಿ ಗ್ರೂಪಿನ ಟಾಸ್ಕ್ ಗಳನ್ನು ಪೂರ್ತಿ ಮಾಡಿದ್ದರು. ಬಳಿಕ ಅವರು 7 ಸಾವಿರ ರೂ.ಗಳ ಟಾಸ್ಕ್ ಆಯ್ಕೆ ಮಾಡಿದಾಗ 25 ಸಾವಿರ ರೂ. ಪಾವತಿಸುವಂತೆ ಹೇಳಿದ್ದರು. ಹೀಗೆ ಉಮೈರ್ ಹಂತ ಹಂತವಾಗಿ 9.09 ಲಕ್ಷ ರೂ. ಪಾವತಿ ಮಾಡಿದ್ದರು.
ಆದರೆ ಅಪರಿಚಿತ ಹಣವನ್ನು ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ