ಮನೆಯ ಮಹಡಿಯಿಂದ ಬಿದ್ದು ಆಟೋ ಚಾಲಕ ಮೃತ್ಯು
Team Udayavani, Aug 1, 2023, 11:18 PM IST
ಬಂಟ್ವಾಳ: ನಿರ್ಮಾಣ ಹಂತದ ಹೊಸ ಮನೆಯ ಮಹಡಿಗೆ ತೆರಳಿದ್ದ ಆಟೋ ರಿಕ್ಷಾ ಚಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಮಾಣಿ ಸಮೀಪದ ಗಡಿಯಾರದಲ್ಲಿ ನಡೆದಿದೆ.
ಇಲ್ಲಿನ ಬಾನಗುಂಡಿ ನಿವಾಸಿ ಕಾಂತಪ್ಪ ಮೂಲ್ಯ (48) ಮೃತಪಟ್ಟವರು. ಅವರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಹೀಗಾಗಿ ಕಾಮಗಾರಿ ಪರಿಶೀಲನೆಗಾಗಿ ಮಹಡಿಯ ಮೇಲೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದ ಅವರನ್ನು ತತ್ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತರ ಗೌರವಾರ್ಥ ಗಡಿಯಾರ ಪಾರ್ಕಿನ ಆಟೋ ಚಾಲಕರು ಬಾಡಿಗೆ ನಡೆಸದೆ ಸಂತಾಪ ಸೂಚಿಸಿದರು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ