ಸ್ವದೇಶಿ ಉತ್ಪನ್ನದಿಂದ ಭಾರತ ಶಕ್ತಿಶಾಲಿ: ಪೂಂಜ
Team Udayavani, Feb 10, 2021, 3:31 PM IST
ಬೆಳ್ತಂಗಡಿ: ಪಾರಂಪರಿಕ ಕೃಷಿ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿ ದೇಶೀಯ ಉತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಆ ಮೂಲಕ ಸ್ವದೇಶಿ ಉತ್ಪನ್ನಗಳಿಂದ ಶಕ್ತಿಶಾಲಿ ಭಾರತವನ್ನಾಗಿ ಮಾಡಲು ಹೊರಟ್ಟಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ. ಜಿಲ್ಲಾ ಕೃಷಿಕ ಸಮಾಜ, ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ, ಆತ್ಮಯೋಜನೆ ಆಶ್ರಯದಲ್ಲಿ ಕೃಷಿ ಇಲಾಖೆ ವಠಾರದಲ್ಲಿ ನಡೆದ ಕಿಸಾನ್ ಗೋಷ್ಠಿ ಹಾಗೂ ರೈತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಕೃಷಿಕರ ಕುರಿತು ಪ್ರಶ್ನಾರ್ಥಕ ಚಿಹ್ನೆಗಳಿದ್ದವು. ಅವರ ಬದುಕಿಗೆ ಪುರಕವಾಗಿ ಇಸ್ರೇಲ್ ಕೃಷಿ ಪದ್ಧತಿಯನ್ನು ಬೆರಳು ಮಾಡಿ ತೋರಿಸುವಂತಾಗಿತ್ತು. ಆದರೆ ಇಂದು ದೇಶದ ರೈತರಿಗೆಯಂತ್ರೋಪಕರಣ, ಕೃಷಿಗೆ ಪೂರಕ ಯೋಜನೆಗಳನ್ನು ರೂಪಿಸಿ ರುವುದರಿಂದ ಆತ್ಮಸ್ಥೈರ್ಯ ಹೆಚ್ಚಿದೆ ಮತ್ತು ಆಧುನಿಕ ಕೃಷಿಯೆಡೆಗೆ ಉತ್ಸಾಹ ಮೂಡಿದೆ. ಆದರೂ ಕೆಲವೊಂದು ಪರಿಸ್ಥಿತಿಯಲ್ಲಿ ಕೃಷಿಯಿಂದ ಲಾಭವಿಲ್ಲ ಎಂಬ ಮಾತಿನಿಂದ ಯುವಕರು ವಿಚಲಿತರಾಗುತ್ತಿದ್ದಾರೆ. ಇದರಿಂದ ರೈತರು ಹೊರಬಂದು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಮಿಶ್ರಕೃಷಿ ಪದ್ಧತಿಯನ್ನ ಅನುಸರಿಸಬೇಕು ಎಂದರು.
ಏತ ನೀರಾವರಿಗೆ ಅಗತ್ಯ ಯೋಜನೆ
ದ.ಕ. ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಸಲುವಾಗಿ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. 125 ಕೋ. ರೂ. ವೆಚ್ಚದಲ್ಲಿ 27 ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಕರ ಅಭಿವೃದ್ಧಿಯ ದೃಷ್ಟಿಯಿಂದ ಜಿ.ಪಂ. ವ್ಯಾಪ್ತಿಯಲ್ಲಿ ಏತ ನೀರಾವರಿಗೆ ಅಗತ್ಯ ಯೋಜನೆ ರೂಪಿಸಲಾಗುತ್ತಿದೆ.
-ಹರೀಶ್ ಪೂಂಜ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪುತ್ತೂರು: ಮಹಿಳಾ ಎಸ್.ಐ ಮೇಲೆ ಹಲ್ಲೆ ನಡೆಸಿದ ಸಹೋದರಿಯರು; ಆರೋಪಿಗಳ ಬಂಧನ
ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಯ ನಿರೀಕ್ಷೆ: ಪುತ್ತೂರು ಜಿಲ್ಲೆಯಾದರೆ ಕಡಬಕ್ಕೂ ಅನುಕೂಲ
ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ
ಸಂಪಾಜೆ ಗೇಟ್ ನಲ್ಲಿ ಸಾಲುಗಟ್ಟಿ ನಿಂತಿದೆ ಕೇರಳದ ವಾಹನಗಳು
ಬಂಟ್ವಾಳದ ಮೂಲ ಸೌಕರ್ಯಕ್ಕೆ ಒತ್ತು : ಗ್ರಾಮಾಂತರ ಜಿಲ್ಲೆಯಾಗಿ ಪುತ್ತೂರು