ಮತ್ತೆ ಮುಡೂರು-ಪಡೂರು ಕಂಬಳದ ವೈಭವ: ರಮಾನಾಥ ರೈ


Team Udayavani, Mar 20, 2019, 9:27 AM IST

20-march-12.jpg

ವೇಣೂರು : ಕಾವಳಕಟ್ಟೆಯಲ್ಲಿ ಜರಗುತ್ತಿದ್ದ ಮುಡೂರು- ಪಡೂರು ಕಂಬಳವನ್ನು ಜಾಗದ ಸಮಸ್ಯೆಯಿಂದ ಕಳೆದ 5 ವರ್ಷಗಳಿಂದ ನಿಲ್ಲಿಸಲಾಗಿತ್ತು. ಕಂಬಳ ನಡೆಸಲು ಇದೀಗ ಹೊಸ ಜಾಗ ಸಿದ್ಧಪಡಿಸಲಾಗಿದೆ. ಮುಂದಿನ ವರ್ಷದಿಂದ ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಮುಡೂರು- ಪಡೂರು ಕಂಬಳದ ವೈಭವ ಮರುಕಳಿಸಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ವೇಣೂರು ಪೆರ್ಮುಡದಲ್ಲಿ ನಡೆದ 26ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ, ಇಂದಿಗೂ ಕಂಬಳ ಕ್ರೀಡೆ ಜೀವಂತವಾಗಿದೆ ಎಂದರೆ ಅದಕ್ಕೆ ಕಂಬಳಾಭಿಮಾನಿಗಳ ಹೋರಾಟವೇ ಕಾರಣ ಎಂದರು.

ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್‌ ಜಿ. ಗೌಡ ಮಾತನಾಡಿ, 141 ಜತೆ ಕೋಣಗಳು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಮಾಜಿ ಶಾಸಕ ವಸಂತ ಬಂಗೇರ ಮತ್ತು ಸಮಿತಿ ಅಧ್ಯಕ್ಷ ನಿತೀಶ್‌ ಎಚ್‌. ಅವರ ಅವಿರತ ಶ್ರಮದ ಫಲ ಇದಾಗಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ಜಿ.ಪಂ. ಸದಸ್ಯರಾದ ಪದ್ಮಶೇಖರ ಜೈನ್‌, ಪಿ. ಧರಣೇಂದ್ರ ಕುಮಾರ್‌, ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಭರತ್‌ ಕುಮಾರ್‌ ಇಂದಬೆಟ್ಟು, ಬೇಬಿ ಕುಂದರ್‌ ಬಂಟ್ವಾಳ, ಮಾಯಿಲಪ್ಪ ಸಾಲ್ಯಾನ್‌ ಬಂಟ್ವಾಳ, ಬಂಟ್ವಾಳ ಕೆಡಿಪಿ ಸದಸ್ಯೆ ಜಯಂತಿ ಪೂಜಾರಿ, ಕಂಬಳ ಸಮಿತಿ ಮಾಜಿ ಅಧ್ಯಕ್ಷ ಜೀವಂಧರ ಕುಮಾರ್‌, ತಾ.ಪಂ. ಸದಸ್ಯರಾದ ಕೆ. ವಿಜಯ ಗೌಡ, ಪ್ರವೀಣ್‌ ಗೌಡ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ಜೈನ್‌, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್‌ ಪಾಣೂರು, ಬೆಳ್ತಂಗಡಿ ವಕೀಲರ ಸಂಘದ ಕಾರ್ಯದರ್ಶಿ ಮನೋಹರ ಕುಮಾರ್‌, ಪತ್ರಕರ್ತರಾದ ದೇವಿಪ್ರಸಾದ್‌, ಮನೋಹರ ಬಳಂಜ, ಪ್ರಮುಖರಾದ ಸೋಮಯ್ಯ ಹನೈನಡೆ, ಡೆನ್ಸಿಲ್‌ ಬಂಟ್ವಾಳ, ಕರುಣಾಕರ ಸಾಲ್ಯಾನ್‌ ಪೆರ್ಮುಡ ಹಾಗೂ ಮತ್ತಿತರರಿದ್ದರು.

ಸಮ್ಮಾನ
ಕಂಬಳ ಕೋಣಗಳ ಹಿರಿಯ ಯಜಮಾನ ಬಾಡು ಪೂಜಾರಿ, ಕಳೆದೆರಡು ವರ್ಷದಿಂದ ಕಂಬಳವನ್ನು ಅದ್ದೂರಿಯಾಗಿ ನಿರ್ವಹಿಸಿದ ಸಮಿತಿ ಅಧ್ಯಕ್ಷ ನಿತೀಶ್‌ ಎಚ್‌. ಹಾಗೂ ಕಂಟ್ರಾಕ್ಟರ್‌ ರಫಿಕ್‌ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಸ್ವಾಗತಿಸಿದರು. ಕಂಬಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್‌ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರ್ವಹಿಸಿದರು. ಅನೂಪ್‌ ಜೆ. ಪಾಯಸ್‌ ಮೂಡುಕೋಡಿ ವಂದಿಸಿದರು.

ತರಬೇತಿ ನೀಡುವ ಕೆಲಸವಾಗಲಿ
ಕೋಣಗಳನ್ನು ಓಡಿಸುವವರಿಗೆ ತರಬೇತಿ ನೀಡುವ ಕೆಲಸ ಆಗಬೇಕು. ಅದು ಮುಂದಿನ ಪೀಳಿಗೆಗೆ ಕಂಬಳ ಉಳಿಯಲು ಸಹಕಾರಿ ಆಗಲಿದೆ. ಬುದ್ಧಿವಂತರು, ಜ್ಞಾನವಂತರಿರುವ ದ.ಕ. ಜಿಲ್ಲೆಯಲ್ಲಿ ಪೇಟಾದಿಂದ ಕಂಬಳ ನಿಲ್ಲಿಸಲು ಅಸಾಧ್ಯ. ಈ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ.
– ಕೆ. ವಸಂತ ಬಂಗೇರ
ಗೌರವಾಧ್ಯಕ್ಷರು,
ವೇಣೂರು-ಪೆರ್ಮುಡ ಕಂಬಳ ಸಮಿತಿ

ಟಾಪ್ ನ್ಯೂಸ್

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.