‌ಬೆಳ್ಳಾರೆಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜೇಶ್ ನಾಪತ್ತೆ

Team Udayavani, Sep 6, 2021, 11:46 AM IST

ghgjghdgf

ಬೆಳ್ಳಾರೆ : ‌ಬೆಳ್ಳಾರೆಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ,ಉದ್ಯಮಿ ಹಾಗೂ ಕೃಷಿಕ ರಾಜೇಶ್ ಗುಂಡಿಗದ್ದೆಯವರು ಸೆ.4 ರಂದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಸೆ.5 ರಂದು ಬೆಳ್ಳಾರೆ ಠಾಣೆಯಲ್ಲಿ ಅವರ ಪತ್ನಿ ಪೊಲೀಸು ದೂರು ನೀಡಿದ ಘಟನೆ ವರದಿಯಾಗಿದೆ.

ರಾಜೇಶ್ ಗುಂಡಿಗದ್ದೆ (47) ಎಂಬವರು ಸೆ. 4 ರಂದು ಬೆಳಿಗ್ಗೆ ಮನೆಯಿಂದ ತಮ್ಮ ಇಕೋ ಸ್ಪೋರ್ಟ್ಸ್ ಕಾರು ( ಕೆಎ 21 ಪಿ 6758)ನಲ್ಲಿ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ ವಿನಯಶ್ರೀಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಗುಂಡಿಗದ್ದೆಯವರು ಸುಳ್ಯಕ್ಕೆ ಬಂದು ನಂತರ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟೀವಿಯಲ್ಲಿ ಸೆರೆಯಾಗಿರುವುದಾಗಿ ಮತ್ತು ಬಂದಡ್ಕ ಟವರ್ ನಲ್ಲಿ ಇವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ.

ಹಲವು ವರ್ಷಗಳ ಹಿಂದೆ ಬಾಳಿಲದಲ್ಲಿ ಸ್ಥಾಪನೆಯಾದ ರಬ್ಬರ್ ಉತ್ಪಾದಕರ ಸಂಘ ನಂತರದ ದಿನಗಳಲ್ಲಿ ಬೆಳ್ಳಾರೆಗೆ ಸ್ಥಳಾಂತರಗೊಂಡು ಬಳಿಕ ಬೆಳ್ಳಾರೆ ರಬ್ಬರ್ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗದಲ್ಲಿ ವ್ಯವಹಾರ ನಡೆಸುತ್ತಿತ್ತು.ರಾಜೇಶ್ ಗುಂಡಿಗದ್ದೆ ಇದರ ಅಧ್ಯಕ್ಷರಾಗಿದ್ದರು.

ಬೆಳ್ಳಾರೆ, ಪೆರುವಾಜೆ, ಬಾಳಿಲ, ಐವರ್ನಾಡು, ಕೊಡಿಯಾಲ ಸೇರಿದಂತೆ ಆಸುಪಾಸಿನ ಗ್ರಾಮಗಳ ರಬ್ಬರು ಬೆಳೆಗಾರರು ರಬ್ಬರ್ ಹಾಲನ್ನು ಸಂಘಕ್ಕೆ ನೀಡುತ್ತಿದ್ದು ತಮಗೆ ಅವಶ್ಯಕತೆ ಇರುವಾಗ ಹಣ ತೆಗೆದುಕೊಳ್ಳುತ್ತಿದ್ದರು. ವ್ಯವಹಾರದ ಅನುಕೂಲಕ್ಕಾಗಿ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಶಾಖೆಯನ್ನು ತೆರೆದಿದ್ದರು. ಇತ್ತೀಚೆಗಿನ ವರ್ಷಗಳಿಂದ ಹಾಲು ನೀಡಿದ ಗ್ರಾಹಕರಿಗೆ ಹಣ ಕೊಡಲು ಬಾಕಿ ಇರುವ ಮೊತ್ತ ಏರುತ್ತಾ ಹೋಗಿ ಕೋಟಿಗಟ್ಟಲೆ ಹಣ ಕೊಡಲು ಬಾಕಿ ಇದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಇದರೊಂದಿಗೆ ಸಂಘದ ಹೆಸರಲ್ಲಿ ಪಡೆದ ಸಾಲ ಮತ್ತು ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಾಡಿದ ಸಾಲವೂ ವಿಪರೀತ ಇದೆ ಎನ್ನಲಾಗಿದೆ. ಹಣ ಪಾವತಿ ಬಾಕಿ ಏರುತ್ತಾ ಹೋದ ಹಾಗೆ ಗ್ರಾಹಕರು ಮತ್ತು ಇತರ ಸಾಲಗಾರರು ರಾಜೇಶರಲ್ಲಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದರೆನ್ನಲಾಗಿದೆ. ರಬ್ಬರ್ ಉತ್ಪಾದಕರ ಸಂಘ ನಷ್ಟದಿಂದ ನಡೆಯುತ್ತಿದ್ದು ಬೆಂಗಳೂರು ಮೂಲದ ಕಂಪೆನಿಗೆ ಮಾರಾಟ ಮಾಡಿ ಸಂಘದ ಗ್ರಾಹಕರಿಗೆ ಹಣ ಪಾವತಿಸುವುದಾಗಿ ಇತ್ತೀಚೆಗೆ ಮಹಾಸಭೆಯಲ್ಲಿ ನಿರ್ಧಾರವಾಗಿತ್ತೆನ್ನಲಾಗಿದೆ.

ಅದರಂತೆ ಖರೀದಿದಾರರೊಬ್ಬರು ಸಂಘದ ಮೀಟಿಂಗ್‌ಗೆ ಬಂದು ಸಂಘವನ್ನು 12 ಕೋಟಿ ರೂ.ಗಳಿಗೆ ಖರೀದಿಸುವ ಭರವಸೆಯನ್ನು ನೀಡಿ ಸ್ವಲ್ಪ ಹಣವನ್ನು ನೀಡಿದ್ದರೆನ್ನಲಾಗಿದ್ದು, ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲು ಕಷ್ಟವೆಂದು ಅಭಿಪ್ರಾಯಪಟ್ಟು ವ್ಯವಹಾರದಿಂದ ಹಿಂದೆ ಸರಿದರೆನ್ನಲಾಗಿದೆ. ಸ್ಥಳೀಯ ಬ್ಯಾಂಕ್‌ನವರು ಸಂಘದ ಹೆಸರಿನಲ್ಲಿ ಸಾಲ ಮರುಪಾವತಿಸುವಂತೆ ಸಂಘದ ಕಟ್ಟಡದಲ್ಲಿ ನೋಟೀಸ್ ಅಂಟಿಸಿದ್ದಾರೆ ಎನ್ನಲಾಗಿದೆ. ಆ ಬ್ಯಾಂಕಲ್ಲಿ 1ಕೋಟಿ 3೦ ಲಕ್ಷದಷ್ಟು ರೂ. ಸಾಲವಿದೆಯೆನ್ನಲಾಗಿದೆ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.