ಡಿ.13 ರಂದು ಶಿರ್ವ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕರೆ ಕಂಬಳ
Team Udayavani, Oct 21, 2022, 2:36 PM IST
ಶಿರ್ವ: ಇತಿಹಾಸ ಪ್ರಸಿದ್ದ ಶಿರ್ವ ನಡಿಬೆಟ್ಟು ಸೂರ್ಯ ಚಂದ್ರ ಜೋಡುಕರೆ ಕಂಬಳವು 2022ರ ಡಿಸೆಂಬರ್ 13 ರಂದು ನಡೆಯಲಿದೆ.
ಡಿಸೆಂಬರ್ 13 ರ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ಸಂಪ್ರದಾಯಬದ್ದವಾಗಿ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ವ್ಯವಸ್ಥಾಪಕರುಗಳಾದ ಶಿರ್ವ ನಡಿಬೆಟ್ಟು ಯಜಮಾನ ದಾಮೋದರ ಚೌಟ, ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ ತಿಳಿಸಿದ್ದಾರೆ.