ಇನ್ನೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯದ ಬಸ್‌ಗಳು

 ದೊರೆಯದ ಜನಸ್ಪಂದನ, ಏರಿದ ಇಂಧನ ದರ, ಏರದ ಪ್ರಯಾಣಿಕರ ಸಂಖ್ಯೆ

Team Udayavani, Feb 10, 2021, 12:15 PM IST

ಇನ್ನೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯದ ಬಸ್‌ಗಳು

ಜನಜೀವನ ಸಹಜ ಸ್ಥಿತಿಯತ್ತ ಬಂದರೂ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಆದಾಯದಲ್ಲಿ ಹೊಡೆತ ಬೀಳುವುದು ತಪ್ಪಲಿಲ್ಲ. ಬೆಳಗಿನ ಹಾಗೂ ಸಂಜೆಯ ವೇಳೆ ಹೊರತಾಗಿ ಬಹುತೇಕ ಬಸ್‌ಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ.

ಕುಂದಾಪುರ:  ಲಾಕ್‌ಡೌನ್‌ ಅನಂತರ  ಆಗಸ್ಟ್‌ ತಿಂಗಳಲ್ಲಿ  ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಓಡಾಟ ಆರಂಭಿಸಿದ್ದು, ಅಕ್ಟೋಬರ್‌ನಿಂದ ಇನ್ನಷ್ಟು ಖಾಸಗಿ ಬಸ್‌ಗಳು ರಸ್ತೆಗಿಳಿದವು. ಅನಂತರ ಹಬ್ಬ ಹರಿದಿನ ಎಂದು ಒಂದೊಂದಾಗಿ ಬಸ್‌ಗಳು ಸಂಚರಿಸು ತ್ತಿದ್ದರೂ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ.  ಈಗಾಗಲೇ ಓಡಾಡುತ್ತಿರುವ ಬಸ್‌ಗಳಲ್ಲಿ  ಆದಾಯ ಖೋತಾ ಉಂಟಾಗಿದೆ.

ಶೇ.80 ಬಸ್‌ :

ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಆದಾಯಕ್ಕೆ ನಿತ್ಯವೂ ಶೇ. 30ರಷ್ಟು ಹೊಡೆತ ಬೀಳುತ್ತಿದೆ.  ಘಟಕದಲ್ಲಿ ಮಾರ್ಗಸೂಚಿ ಪ್ರಕಾರ ಮೊದಲು 97 ಶೆಡ್ನೂಲ್ಡ್‌ಗಳಲ್ಲಿ ಓಡಾಟ ನಡೆಸುತ್ತಿದ್ದವು. ಅವುಗಳಲ್ಲಿ ಪ್ರಸ್ತುತ 78 ರೂಟ್‌ಗಳಲ್ಲಷ್ಟೇ  ಬಸ್‌ಗಳು ಸಂಚಾರ ನಡೆಸುತ್ತಿವೆ. ಬಹುತೇಕ ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಿದರೂ, ಪ್ರಯಾಣಿಕರಿಲ್ಲ , ಆದಾಯವೂ ಇಲ್ಲ.

ಬಸ್ಸಿಲ್ಲ :

ಬೆಂಗಳೂರಿಗೆ ಕೆಲವು ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಓಡಾಟ ನಡೆಸುತ್ತಿರುವ ಬಸ್‌ಗಳಲ್ಲಿನ ಆದಾಯ ಅದರ ಇಂಧನಕ್ಕೂ ಸಾಲುತ್ತಿಲ್ಲ. ಈಗಾಗಲೇ ಇರುವ ಬಸ್‌ಗಳ ಆದಾಯ ಸರಿದೂಗದ ಹೊರತು ಇನ್ನಷ್ಟು ನಷ್ಟ ಮಾಡಿಕೊಳ್ಳಲು ನಿಗಮ ಸಿದ್ಧವಿಲ್ಲ. ವಂಡ್ಸೆ, ಜಡ್ಕಲ್‌, ಅರೆಹೊಳೆ ಭಾಗದಲ್ಲಿ ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಇಲ್ಲ. ಸರಕಾರಿ ಗ್ರಾಮಾಂತರ ಸಾರಿಗೆಯೂ ಇಲ್ಲ. ಬೈಂದೂರು ತಾಲೂಕಿನ ತಾರಾಪತಿ, ದೊಂಬೆ, ಕಾಲ್ತೋಡು, ಬೊಳಂಬಳ್ಳಿ, ಹೇನಬೇರು, ಕುಂದಾಪುರ ತಾಲೂಕಿನ ಕೋಡಿ, ಗಂಗೊಳ್ಳಿ, ಶೇಡಿಮನೆ, ವಾಲೂ¤ರು ಮೊದಲಾದೆಡೆಗೆ ಸರಕಾರಿ ಬಸ್‌ಗಳಿಲ್ಲ. ಬೈಂದೂರು ಹಾಗೂ ಗಂಗೊಳ್ಳಿಗೆ ವಿರಳವಾಗಿದೆ.

ಬಾಡಿಗೆ  ಮಾಡಿ  ಒಟ್ಟಾಗಿ  ಹೋಗುವ  ಪರಿಪಾಠ :ಖಾಸಗಿ ಬಸ್‌ಗಳು ಕೂಡ ಬೆಂಗಳೂರಿನಂತಹ ದೂರ ಪ್ರಯಾಣಕ್ಕೆ ಇನ್ನೂ ಎಲ್ಲವೂ ತೆರೆದುಕೊಳ್ಳಲಿಲ್ಲ. ಶೇ.20ರಷ್ಟು ದೂರ ಪ್ರಯಾಣದ ಬಸ್‌ಗಳು ನಿಲ್ಲಿಸಿದಲ್ಲೇ ಬಾಕಿಯಾಗಿವೆ. ಈಗ ಓಡಾಡುತ್ತಿರುವ ಬಸ್‌ಗಳಲ್ಲೂ ಸರಣಿ ರಜೆಯ ಹೊರತಾಗಿ ಇತರ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿದೆ. ಗ್ರಾಮಾಂತರದಿಂದ ನಗರಕ್ಕೆ ರಿಕ್ಷಾ ಬಾಡಿಗೆ ಮಾಡಿದರೆ ಸಣ್ಣ ಮೊತ್ತ ಸಾಕಾಗುವುದಿಲ್ಲ. ದೂರದೂರಿಗೆ ಐದಾರು ಮಂದಿ ಕಾರಿನಲ್ಲಿ ಬಾಡಿಗೆ ಮಾಡಿ ಒಟ್ಟಾಗಿ ಹೋಗುವ ಪರಿಪಾಠ ಆರಂಭವಾಗಿದೆ.

ಶಾಲೆ, ಕಾಲೇಜಿಗೆ ತೊಂದರೆ :

ಕಾಲೇಜುಗಳ ಆರಂಭ ನವೆಂಬರ್‌ನಿಂದಲೇ ಆಗಿ ವಿದ್ಯಾರ್ಥಿಗಳ ಓಡಾಟ ಆರಂಭವಾಗಿದೆ. ಈಗಂತೂ ಪದವಿ ಹಾಗೂ ಪಿಯು ಕಾಲೇಜುಗಳೆಲ್ಲವೂ ತೆರೆದಿವೆ. ಆದರೆ ಬಸ್‌ಗಳ ಕೊರತೆಯಿಂದ ಹಕ್ಲಾಡಿ, ನೂಜಾಡಿ, ಬಂಟ್ವಾಡಿ, ಹಕೂìರು, ಕುಂದಬಾರಂದಾಡಿ, ಅಮಾಸೆಬೈಲು, ಕೊಲ್ಲೂರು, ಶಂಕರನಾರಾಯಣ, ಜಡ್ಕಲ್‌, ವಂಡ್ಸೆ ಮೊದಲಾದ ಭಾಗದಿಂದ ವಿದ್ಯಾರ್ಥಿಗಳಿಗೆ ಬೈಂದೂರು, ಕುಂದಾಪುರ, ಉಡುಪಿ ಕಾಲೇಜಿಗೆ ಬರಲು ತೊಂದರೆಯಾಗಿದೆ. ಇರುವ ಬೆರಳೆಣಿಕೆ ಬಸ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ.

ರಿಯಾಯಿತಿ :

ನಿತ್ಯ ಪ್ರಯಾಣಿಕರಿಗೆ ಹೊರೆಯಾಗ ದಂತೆ ಒಂದೇ ಬಾರಿಗೆ ಪಾವತಿಸಿ ಹೋಗಿಬರುವ ಟಿಕೆಟ್‌ ಪಡೆಯುವ ಸೌಲಭ್ಯ ನೀಡಲಾಗುತ್ತಿದೆ. ಕುಂದಾಪುರದಿಂದ ಉಡುಪಿಗೆ ಹೋಗಿಬರಲು 100 ರೂ. ಆಗುತ್ತದೆ. 70 ರೂ.ಗೆ ನಿತ್ಯ ಪಾಸ್‌ ಇದೆ. ಉಡುಪಿಯಿಂದ ಮಂಗಳೂರಿಗೆ 140 ರೂ. ವೆಚ್ಚವಾಗುತ್ತದೆ. 100 ರೂ.ಗೆ ನಿತ್ಯದ ಪಾಸ್‌ ಇದೆ. ಕುಂದಾಪುರ, ಉಡುಪಿ, ಮಂಗಳೂರು ಬಸ್‌ನಿಲ್ದಾಣದಲ್ಲಿ ಹಾಗೂ ಈ ಮೂರು ಡಿಪೋದ ಬಸ್‌ಗಳಲ್ಲೂ ಟಿಕೆಟ್‌ ಲಭ್ಯವಿರುತ್ತದೆ. ಕೆಎಸ್‌ಆರ್‌ಟಿಸಿ ಟಿಕೆಟ್‌ ಆದರೂ ಈಶಾನ್ಯ ವಾಯವ್ಯ ಬಸ್‌ಗಳಲ್ಲೂ ಈ ಟಿಕೆಟ್‌ ಮೂಲಕ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಜನರಿಂದ ಅಂತಹ ಉತ್ತಮ ಸ್ಪಂದನೆ ಬಂದಿಲ್ಲ.

ಭಟ್ಕಳ- ಮಂಗಳೂರು ವೋಲ್ವೋ ಬಸ್‌ಗಳ ಓಡಾಟ ಈ ಹಿಂದಿನಂತೆ ಆರಂಭಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದು ಅವರು ನನ್ನ ಮನವಿಯನ್ನು ಉಲ್ಲೇಖೀಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಸರಕಾರ ಲಾಭ ನಷ್ಟ ಕ್ಕಿಂತ ಹೆಚ್ಚು ಪ್ರಯಾಣಿಕರ ಹಿತ ಗಮನದಲ್ಲಿರಿಸಿ ಗ್ರಾಮಾಂತರದಲ್ಲೂ  ಬಸ್‌ಗಳ ಓಡಾಟಕ್ಕೆ ಕ್ರಮಕೈಗೊಳ್ಳಬೇಕು.-ರಾಜೇಶ್‌ ಕಾವೇರಿ ಮಾಜಿ ಉಪಾಧ್ಯಕ್ಷರು, ಪುರಸಭೆ

ಶೇ.80ರಷ್ಟು ಬಸ್‌ಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಕೊರತೆಯಿದೆ.  ಆದಾಯ ಕಡಿಮೆಯಿದ್ದರೂ ಇಷ್ಟನ್ನು ಓಡಿಸಲಾಗುತ್ತಿದೆ. ಶೂನ್ಯ ಆದಾಯದ ಮಾರ್ಗದಲ್ಲಿ ಮಾತ್ರ ಓಡಿಸುತ್ತಿಲ್ಲ. ಇನ್ನಷ್ಟು ಜನ ಓಡಾಟ ಆರಂಭವಾದ ಬಳಿಕ ಉಳಿದ ಮಾರ್ಗಗಳಲ್ಲೂ ಬಸ್‌ಗಳ ಓಡಾಟ ನಡೆಯಲಿದೆ. -ರಾಜೇಶ್‌ ಮೊಗವೀರಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಕುಂದಾಪುರ

ಟಾಪ್ ನ್ಯೂಸ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

hdk

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

1-sdsads

ಗೋವಾದಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರ: ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18halappa

ಗಣಿಗಾರಿಕೆ ನಿಲ್ಲಿಸಲು ಕ್ರಮಕೈಗೊಳ್ಳಿ: ಸಚಿವ ಹಾಲಪ್ಪ ಆಚಾರ್ ಗೆ ಪೇಜಾವರ ಶ್ರೀ ಅಹವಾಲು

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಬೀದಿ ನಾಯಿಗಳು

ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಬೀದಿ ನಾಯಿಗಳು

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

MUST WATCH

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

ಹೊಸ ಸೇರ್ಪಡೆ

ಶಿಕ್ಷಣ ಪಡೆಯಬೇಕೆಂಬ ಛಲ ಇರಲಿ: ನ್ಯಾಮಗೌಡ

ಶಿಕ್ಷಣ ಪಡೆಯಬೇಕೆಂಬ ಛಲ ಇರಲಿ: ನ್ಯಾಮಗೌಡ

25protest

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

5.60 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡನೆ

5.60 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡನೆ

ತ್ಯಾಜ್ಯ ನಿರ್ವಹಣೆ: ಅನುಮೋದನೆ ಬಾಕಿ

ತ್ಯಾಜ್ಯ ನಿರ್ವಹಣೆ: ಅನುಮೋದನೆ ಬಾಕಿ

24corn

ಜೋಳ ಖರೀದಿಗೆ ಆಗ್ರಹಿಸಿ ಹೋರಾಟ: ಬಾದರ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.