ಗಂಗೊಳ್ಳಿ: ಮೀನುಗಾರಿಕಾ ಬಂದರು ಜೆಟ್ಟಿ ಪುನರ್‌ ನಿರ್ಮಾಣ ಸ್ಥಗಿತ


Team Udayavani, Jan 24, 2022, 7:35 PM IST

ಗಂಗೊಳ್ಳಿ: ಮೀನುಗಾರಿಕಾ ಬಂದರು ಜೆಟ್ಟಿ ಪುನರ್‌ ನಿರ್ಮಾಣ ಸ್ಥಗಿತ

ಗಂಗೊಳ್ಳಿ: ಇಲ್ಲಿನ ಮೀನುಗಾರಿಕೆ ಬಂದರಿನ ಜೆಟ್ಟಿಯ ಪುನರ್‌ ನಿರ್ಮಾಣ ಕಾರ್ಯ ಕಳೆದ ಸುಮಾರು 22
ದಿನಗಳಿಂದ ಸ್ಥಗಿತಗೊಂಡಿದೆ. ಈ ಮೂಲಕಸುಮಾರು 12 ಕೋ.ರೂ. ವೆಚ್ಚದ ಕಾಮಗಾರಿಗೆ ಮೊದಲ ವಿಘ್ನ ಉಂಟಾಗಿದೆ.

ಬಾಕಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಜೆಟ್ಟಿಯ ಪುನರ್‌ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎನ್ನಲಾಗಿದೆ. ಕಳೆದ ವರ್ಷಎಪ್ರಿಲ್‌ ತಿಂಗಳಿನಲ್ಲಿ ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರ ಕಂಪೆನಿ ಈವರೆಗೆ ಸುಮಾರು 50-60 ಮೀ. ಉದ್ದದ ಜೆಟ್ಟಿ ಕಾಮಗಾರಿ ನಿರ್ವಹಿಸಿದೆ. ಇದೀಗ ಹಠಾತ್ತನೆ ಕಾಮಗಾರಿ ಸ್ಥಗಿತಗೊಳಿಸಿ ಸ್ಥಳದಲ್ಲಿದ್ದ ಬಹುತೇಕ ಎಲ್ಲ ಯಂತ್ರೋಪಕರಣಗಳನ್ನು ಬೇರೆಡೆ ಸಾಗಿಸ ಲಾಗಿದೆ. ಇದು ಸ್ಥಳೀಯ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

ಪ್ರತಿಭಟನೆ ಎಚ್ಚರಿಕೆ
ಮುಂದಿನ ಒಂದು ವಾರದೊಳಗೆ ಕಾಮಗಾರಿ ಪುನರಾರಂಭಿಸದಿದ್ದಲ್ಲಿ ಪ್ರತಿಭಟನೆ ನಡೆಸಲು ಮೀನುಗಾರರು ಸಿದ್ಧತೆ
ನಡೆಸುತ್ತಿದ್ದಾರೆ. ಸರಕಾರ ಹಾಗೂ ಗುತ್ತಿಗೆದಾರರ ನಡುವಿನ ತಿಕ್ಕಾಟದಲ್ಲಿ ಇಲ್ಲಿನ ಮೀನುಗಾರರು ಹೈರಾಣಾಗಿದ್ದಾರೆ. ಕಾಮಗಾರಿ ಪ್ರಾರಂಭವಾಯಿತೆಂಬ ಖುಷಿಯಲ್ಲಿದ್ದ ಮೀನುಗಾರರಲ್ಲಿ ಮತ್ತೆ ಆತಂಕ ಮೂಡಿದೆ.

ಎರಡು ವರ್ಷಗಳಿಂದ
2018ರ ಅ. 13ರಂದು ಕುಸಿದು ಬಿದ್ದ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಜೆಟ್ಟಿಯು ಕಳೆದ ಮೂರು ವರ್ಷಗಳಿಂದ ಮೀನುಗಾರರ ಪ್ರಯೋಜನಕ್ಕೆ ಸಿಕ್ಕಿಲ್ಲ. ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲಾÂಬ್‌ ಕುಸಿದು ಬರೋಬ್ಬರಿ ಎರಡು ವರ್ಷಗಳ ಬಳಿಕ ಜೆಟ್ಟಿ ಪುನರ್‌ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 2021ರ ಫೆ.26ರಂದು ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿಗೆ ಬೆ„ಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಚಾಲನೆ ನೀಡಿದ್ದರು.

ಅನುಮೋದನೆ
ಇದರ ಸಂಪೂರ್ಣ ಪುನರ್‌ ನಿರ್ಮಿಸಲು ಸಂಸದ ಬಿ. ವೈ. ರಾಘವೇಂದ್ರ, ಶಾಸಕಬಿ.ಎಂ. ಸುಕುಮಾರ್‌ ಶೆಟ್ಟಿ ಮನವಿ
ಯಂತೆ ಅಂದಿನ ಮೀನುಗಾರಿಕಾ ಸಚಿವಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ 12 ಕೋ.ರೂ. ಮಂಜೂ
ರಾತಿಗೆ 2020ರ ಫೆ. 16 ರಂದು ನಡೆದ ರಾಜ್ಯ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಬರೀ 150 ಮೀ.
300ಕ್ಕೂ ಅಧಿಕ ಪರ್ಸಿನ್‌ ಬೋಟುಗಳು, 600ಕ್ಕೂ ಮಿಕ್ಕಿ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿದ್ದು, ಸಾವಿರಾರು ಮೀನುಗಾರರು ಅವಲಂಬಿಸಿರುವ ಬಂದರು ಇದಾಗಿದೆ. ಆದರೆ ಸುಮಾರು 405 ಮೀ. ಉದ್ದದ ಮೀನುಗಾರಿಕಾ ಜೆಟ್ಟಿಯಲ್ಲಿ ಈಗ ಕೇವಲ 150ಮೀ. ಮಾತ್ರ ಮೀನುಗಾರರ ಉಪಯೋಗಕ್ಕೆ ಸಿಗುತ್ತಿದೆ. ಇದರಿಂದ ಬೋಟ್‌, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ.

ಮುತುವರ್ಜಿ ವಹಿಸಲಿ
ಗಂಗೊಳ್ಳಿ ಮೀನುಗಾರರ ಬಹುನಿರೀಕ್ಷಿತ ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿ ಪುನರಾರಂಭಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ. ಕಾಮಗಾರಿ ಪುನರಾರಂಭಿಸಲು ಸರಕಾರದ ಮಟ್ಟದಲ್ಲಿ ಇರುವ ಅಡೆ ತಡೆ ನಿವಾರಿಸಲು ಈ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ.

ವಾರದೊಳಗೆ ಕಾಮಗಾರಿ
ಜೆಟ್ಟಿ ಪುನರ್‌ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಇದರ ಯಂತ್ರೋಪಕರಣ ಕೆಟ್ಟು ಹೋಗಿರು ವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಒಂದು ವಾರದೊಳಗೆ ಕಾಮಗಾರಿ ಪುನರಾರಂಭಗೊಳ್ಳಲಿದೆ.
-ಉದಯ ಕುಮಾರ್‌,
ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ

ಟಾಪ್ ನ್ಯೂಸ್

1-fgdfg

ಹೊರಟ್ಟಿಗೆ ಮಣೆ: ಬಿಜೆಪಿ ಟಿಕೆಟ್ ವಂಚಿತ ಮೋಹನ ಲಿಂಬಿಕಾಯಿ ತೀವ್ರ ಅಸಮಾಧಾನ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

ಮೂರು ದಿನಗಳ ಬಳಿಕ ಮತ್ತೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 503 ಅಂಕ ಜಿಗಿತ; ನಿಫ್ಟಿಯೂ ಏರಿಕೆ

19arrest

ಕ್ಷುಲ್ಲಕ ಕಾರಣಕ್ಕೆ ಕೊಲೆಗೈದ ಸೈಕೋ ಕಿಲ್ಲರ್‌ ಬಂಧನ

army

ಕಾಶ್ಮೀರದಲ್ಲಿ ಈ ವರ್ಷ 26 ವಿದೇಶಿ ಭಯೋತ್ಪಾದಕರ ಸಂಹಾರ

1hh

ಸಿಕ್ಕ ಸಿಕ್ಕವರನ್ನು ಬೈಯುವ,ಭಿಕ್ಷೆ ಬೇಡುವ ಆದಿವಾಸಿಗಳ ವಿಶಿಷ್ಟವಾದ ಹಬ್ಬ!!

ನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು

1-f-ffs

ಬಿಬಿಎಂಪಿ ಚುನಾವಣೆ : ಮೇ 28ಕ್ಕೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕಾರಿಣಿ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12kaup

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

udupi1

ಬ್ಯಾರಿಕೇಡ್‌ ರಹಿತ ವೈಜ್ಞಾನಿಕ ಜಂಕ್ಷನ್‌ ಅಗತ್ಯ

dredge

ಮಲ್ಪೆ ಬಂದರಿನಲ್ಲಿ ಹೂಳು: ಡ್ರಜ್ಜಿಂಗ್‌ ಬೇಡಿಕೆಗೆ ಇನ್ನೂ ಸಿಗಲಿಲ್ಲ ಮನ್ನಣೆ

bus-facility

ಅಂಡಾರು: ತಾ| ಕೇಂದ್ರ ಹೆಬ್ರಿ ಸಂಪರ್ಕಿಸಲು ಬಸ್‌ ವ್ಯವಸ್ಥೆಯೇ ಇಲ್ಲ

hector

14 ಸಾವಿರ ಹೆಕ್ಟೇರ್‌ ಗುರಿ; ಬಿತ್ತನೆ ಬೀಜ ವಿತರಣೆ ಆರಂಭ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

24

ಮೇಲ್ಸೇತುವೆಯೂ ಇಲ್ಲ -ಚತುಷ್ಪಥವೂ ಇಲ್ಲ!

22appeal

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಜೆಡಿಎಸ್‌ ಮನವಿ

21releft

ಜಲಕ್ಷಾಮ: ಪರಿಹಾರಕ್ಕೆ ಆಗ್ರಹಿಸಿ ಸಭೆ ಬಹಿಷ್ಕಾರ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

ಆಡಂಬರದ ಮದುವೆಗೆ ಕಡಿವಾಣ ಹಾಕಿ; ಸಚಿವ ಎಂಟಿಬಿ

1-fgdfg

ಹೊರಟ್ಟಿಗೆ ಮಣೆ: ಬಿಜೆಪಿ ಟಿಕೆಟ್ ವಂಚಿತ ಮೋಹನ ಲಿಂಬಿಕಾಯಿ ತೀವ್ರ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.