ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

Team Udayavani, Mar 28, 2024, 8:00 AM IST

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕುಂದಾಪುರ: ಕನ್ನಡಕುದ್ರು, ಮೂವತ್ತುಮುಡಿ ಪರಿಸರದಲ್ಲಿ ಕೀಟ ಬಾಧೆಯಿಂದ ತೆಂಗಿನ ಮರಗಳು ಸಾಯುವ ಸ್ಥಿತಿಗೆ ತಲುಪಿ ಬೆಳೆಗಾರರು ಕಂಗಾಲಾಗಿರುವ ಬಗೆಗಿನ ಉದಯವಾಣಿ ವರದಿಗೆ ಸ್ಪಂದಿಸಿರುವ ಕೃಷಿ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

“ಉದಯವಾಣಿ’ಯು ಮಾ. 25 ರಂದು ಈ ಸಂಬಂಧ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.

ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿಗಳಾದ ಡಾ| ರೇವಣ್ಣ ರೇವಣ್ಣನವರ್‌, ಡಾ| ಮೋಹನ್‌ ಕುಮಾರ್‌ ವಿ. ಹಾಗೂ ತೋಟಗಾರಿಕಾ ಇಲಾಖೆಯ ಕುಂದಾಪುರದ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್‌ ಕೆ.ಜಿ. ಅವರ ತಂಡವು ಪರಿಶೀಲಿಸಿ, ಗರಿಗಳನ್ನು ತಿನ್ನುವ ಕಪ್ಪು ತಲೆ ಹುಳ ಹಾಗೂ ಕೆಲ ಮರಗಳಿಗೆ ಬಿಳಿ ನೊಣಗಳ ಬಾಧೆಯಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀರು, ಗೊಬ್ಬರ ಕೊರತೆ ಕಾರಣ
ಕನ್ನಡಕುದ್ರು ಸುತ್ತಮುತ್ತ ಎರಡು ವರ್ಷಗಳಿಂದ ಬೇಸಗೆಯಲ್ಲಿ ಶೇ. 80-95 ರಷ್ಟು ತೆಂಗಿನ ಗರಿಗಳಿಗೆ ಈ ಹುಳುಗಳು ಹಾನಿ ಮಾಡಿವೆ. ಇವುಗಳು ತಮಗೆ ಪೂರಕವಾದ ವಾತಾವರಣವಿದ್ದರೆ ವರ್ಷದಲ್ಲಿ 5-6 ಸಂತತಿ ಪೂರ್ಣಗೊಳಿಸುವ ಸಾಮರ್ಥ್ಯವಿದೆ. ಹೆಚ್ಚು ಬಿಸಿಲು, ಸೆಕೆ, ನೀರು ಹಾಗೂ ಪೋಷಕಾಂಶದ (ಪ್ರಮುಖವಾಗಿ ಪೊಟ್ಯಾಷ್‌)ಕೊರತೆಯಿಂದ ಬಳಲುತ್ತಿರುವ ತೆಂಗಿನ ಮರಗಳಿಗೆ ಈ ಹುಳದ ಬಾಧೆ ಹೆಚ್ಚು. ಈ ಹುಳಗಳು ಎಲೆಗಳ ಪತ್ರಹರಿತ್ತನ್ನು ಕೆದರಿ ತಿನ್ನುತ್ತವೆ. ಇದರಿಂದ ಗರಿಗಳು ಸುಟ್ಟಂತಾಗಿ ಒಣಗುತ್ತವೆ. ಇಲ್ಲಿ ಈ ಹುಳು ಗೂಡು ಹಾಗೂ ಚಿಟ್ಟೆಯ ಹಂತದಲ್ಲಿದೆ. ಈಗಾಗಲೇ ಬಾಧೆಗೊಳಪಟ್ಟ ಗರಿಗಳಲ್ಲಿ ಮರಿ-ಹುಳುಗಳಿಗೆ ಆಹಾರದ ಕೊರತೆಯಿದೆ. ಆದ್ದರಿಂದ ಪೋಷಕಾಂಶಗಳಿಲ್ಲದೇ ಸೊರಗಿದ ತೆಂಗಿನ ತೋಟಗಳಿಗೆ ಈ ಹುಳಗಳು ರಾತ್ರಿ ಹಾರಿ ಹೋಗಿ ಮೊಟ್ಟೆಯಿಟ್ಟು ದಾಳಿ ಮಾಡುತ್ತವೆ ಎಂದಿದ್ದಾರೆ.

ರೈತರಿಗೆ ಪ್ರಾತ್ಯಕ್ಷಿಕೆ
ಕನ್ನಡಕುದ್ರು ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಿಹಿ ನೀರು ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ತೆಂಗಿನ ಮರಗಳಿಗೆ ಹಬ್ಬಿಲ್ಲ. ಆದರೆ ಮೂವತ್ತು ಮುಡಿ ಪರಿಸರದಲ್ಲಿ ಉಪ್ಪು ನೀರಿನಾಂಶವೇ ಹೆಚ್ಚಿರುವ ಕಾರಣ ಬಾಧೆ ಹೆಚ್ಚಿದೆ. ಇದರ ನಿಯಂತ್ರಣದ ಬಗ್ಗೆ ರೈತರಿಗೆ ಶೀಘ್ರವೇ ತೋಟಗಾರಿಕಾ ಇಲಾಖೆ ನೇತೃತ್ವದಲ್ಲಿ ಕೃಷಿ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದು ನಿಧೀಶ್‌ ಕೆ.ಜಿ. ತಿಳಿಸಿದ್ದಾರೆ.

ಟಾಪ್ ನ್ಯೂಸ್

Special Train: ಸಂಸದರ ಮನವಿ ಬೆನ್ನಲ್ಲೇ ಮಂಗಳೂರು ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ

Special Train: ಸಂಸದರ ಮನವಿ ಬೆನ್ನಲ್ಲೇ ಮಂಗಳೂರು – ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ

Mysore; ಗ್ಯಾಸ್ ಟ್ಯಾಂಕರ್- ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ದಂಪತಿ ಸಾವು

Mysore; ಗ್ಯಾಸ್ ಟ್ಯಾಂಕರ್- ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ದಂಪತಿ ಸಾವು

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Madikeri: ಕೆಲಸ ಕೂಲಿ… ಗಾಂಜಾ ಮಾರಾಟದ ಆರೋಪ, ಬಯಲಾಗಿದ್ದು ಅಂತರ್ ಜಿಲ್ಲಾ ಕಳ್ಳತನ ಪ್ರಕರಣ

Madikeri: ಕೆಲಸ ಕೂಲಿ… ಗಾಂಜಾ ಮಾರಾಟದ ಆರೋಪ, ಬಯಲಾಗಿದ್ದು ಅಂತರ್ ಜಿಲ್ಲಾ ಕಳ್ಳತನ ಪ್ರಕರಣ

Mangaluru: ಬೆಂಗ್ರೆಯಲ್ಲಿ ಕೃತಕ ನೆರೆ… ಮುಳುಗುವ ಆತಂಕ, ಜಿಲ್ಲಾಡಳಿತ ನೆರವಿಗೆ ಆಗ್ರಹ

Mangaluru: ಬೆಂಗ್ರೆಯಲ್ಲಿ ಕೃತಕ ನೆರೆ… ಮುಳುಗುವ ಆತಂಕ, ಜಿಲ್ಲಾಡಳಿತ ನೆರವಿಗೆ ಆಗ್ರಹ

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಯುವತಿ ಸಾವು

Gurupura; ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಸಿಎ ವಿದ್ಯಾರ್ಥಿನಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-kaup

Kaup: ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಹೊಳೆ ತೀರದ ಜನರಲ್ಲಿ ನೆರೆ ಭೀತಿ

Election ಸದ್ಯದಲ್ಲೇ ನಗರ, ಸ್ಥಳೀಯ ಸಂಸ್ಥೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ

Election ಸದ್ಯದಲ್ಲೇ ನಗರ, ಸ್ಥಳೀಯ ಸಂಸ್ಥೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ

ಕಳತ್ತೂರು ದಿವಾಕರ ಬಿ. ಶೆಟ್ಟರಿಗೆ “ಮಾಧ್ಯಮ ದತ್ತಿ ನಿಧಿ ಪ್ರಶಸ್ತಿ’ ಪ್ರದಾನ

Udupi ಕಳತ್ತೂರು ದಿವಾಕರ ಬಿ. ಶೆಟ್ಟರಿಗೆ “ಮಾಧ್ಯಮ ದತ್ತಿ ನಿಧಿ ಪ್ರಶಸ್ತಿ’ ಪ್ರದಾನ

Manipal ಪ್ರೊ| ವಲಿಯತ್ತಾನ್‌ ನಿಧನಕ್ಕೆ ಮಾಹೆ ಸಂತಾಪ

Manipal “ವೈದ್ಯ ಜಗತ್ತಿಗೆ ವಲಿಯತ್ತಾನ್‌ ಕೊಡುಗೆ ಅಪಾರ’

Kundapura ಬೆದರಿಕೆ ಹಾಕಿ ಸುಳ್ಳು ಕೇಸು: ಎಡಿಜಿಪಿಗೆ ದೂರು

Kundapura ಬೆದರಿಕೆ ಹಾಕಿ ಸುಳ್ಳು ಕೇಸು: ಎಡಿಜಿಪಿಗೆ ದೂರು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Special Train: ಸಂಸದರ ಮನವಿ ಬೆನ್ನಲ್ಲೇ ಮಂಗಳೂರು ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ

Special Train: ಸಂಸದರ ಮನವಿ ಬೆನ್ನಲ್ಲೇ ಮಂಗಳೂರು – ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ

Mysore; ಗ್ಯಾಸ್ ಟ್ಯಾಂಕರ್- ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ದಂಪತಿ ಸಾವು

Mysore; ಗ್ಯಾಸ್ ಟ್ಯಾಂಕರ್- ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ದಂಪತಿ ಸಾವು

Microsoft Global Outage: ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ…ಜಾಗತಿಕವಾಗಿ ಬಳಕೆದಾರರ ಪರದಾಟ

Microsoft Global Outage: ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ…ಜಾಗತಿಕವಾಗಿ ಬಳಕೆದಾರರ ಪರದಾಟ

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

11-vitla

Vitla: ಭಾರೀ ಗಾಳಿ-ಮಳೆಗೆ ಕೋಳಿ ಸಾಕಣೆಯ ಶೆಡ್ ಕುಸಿದು ಬಿದ್ದು ಸಾವಿರಾರು ರೂ. ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.