ದೇವಾಲಯ-ಹೋಟೆಲ್‌ ಪುನಾರಂಭ

ದುರ್ಗಾಂಬಿಕಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಸಿ

Team Udayavani, Jun 9, 2020, 3:14 PM IST

ದೇವಾಲಯ-ಹೋಟೆಲ್‌ ಪುನಾರಂಭ

ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸೋಮವಾರದಿಂದ ಪುನಾರಂಭಗೊಂಡಿದ್ದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಪೂಜೆ ಸಲ್ಲಿಸಿದರು.

ದಾವಣಗೆರೆ: ಕೋವಿಡ್ ವೈರಸ್‌ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ 5.0 ನಡುವೆ ಸೋಮವಾರದಿಂದ ದೇವಸ್ಥಾನ, ಹೋಟೆಲ್‌, ರೆಸ್ಟೋರೆಂಟ್‌
ಪುನಾರಂಭಗೊಂಡವು. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ದೊಡ್ಡಪೇಟೆಯ ಐತಿಹಾಸಿಕ ವಿರಕ್ತ ಮಠ, ನಿಟುವಳ್ಳಿ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಕೆ.ಬಿ. ಬಡಾವಣೆ, ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿನ ಶ್ರೀ ಗಣೇಶ ದೇವಸ್ಥಾನ ಒಳಗೊಂಡಂತೆ ಅನೇಕ ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಸಜ್ಜಾಗಿವೆ. ದುಗ್ಗಮ್ಮನ ದೇವಸ್ಥಾನದಲ್ಲಿ ಬೆಳಗ್ಗೆ ಪಂಚಾಮೃತಾಭಿಷೇಕ, ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ವಿಶೇಷ ಪೂಜೆ ಸಲ್ಲಿಸಿ, ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌ ಒಳಗೊಂಡಂತೆ ಅನೇಕರು ದೇವಿಯ ದರ್ಶನ ಪಡೆದರು.

ಕೊರೊನಾ ವೈರಸ್‌ ವ್ಯಾಪಿಸುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸಿದವರಿಗೆ ಮಾತ್ರವೇ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮಾಸ್ಕ್ ಇಲ್ಲದವರಿಗೆ ಅವಕಾಶ
ನೀಡದೆ ವಾಪಸ್‌ ಕಳುಹಿಸಲಾಯಿತು. ದಾವಣಗೆರೆಯಲ್ಲಿ ಬಹು ದಿನಗಳ ನಂತರ ಹೋಟೆಲ್‌, ರೆಸ್ಟೋರೆಂಟ್‌ ಪುನಾರಂಭಗೊಂಡವು. ಶರಭೇಶ್ವರ ಊಟದ  ಹೋಟೆಲ್‌ ಒಳಗೊಂಡಂತೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿತ್ತು. ಬಂದಂತಹ ಗ್ರಾಹಕರ ಟೆಂಪರೇಚರ್‌ ಚೆಕ್‌ ಮಾಡಿ, ಹೆಸರು, ವಿಳಾಸ, ಮೊಬೈಲ್‌ ನಂಬರ್‌ ಮಾಹಿತಿ ಬರೆದುಕೊಂಡ ನಂತರವೇ ಹೋಟೆಲ್‌ ಒಳಗೆ ಬಿಡಲಾಯಿತು. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಶರಭೇಶ್ವರ ಹೋಟೆಲ್‌ನಲ್ಲಿ ಗಾಜಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರ ಆರೋಗ್ಯ, ಸುರಕ್ಷತೆಯೇ ಮುಖ್ಯ. ಸಾಮಾಜಿಕ ಅಂತರ ಒಳಗೊಂಡಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಲೀಕ ಬಸವರಾಜಯ್ಯ ಮಾಹಿತಿ ನೀಡಿದರು.

ದೇವಿ ದರ್ಶನ ನಿಂತ ನಿದರ್ಶನ ಇರಲಿಲ್ಲ
ತಮ್ಮ ಅನುಭವದಲ್ಲೇ 76 ದಿನಗಳಷ್ಟು ದೀರ್ಘ‌ಕಾಲ ದೇವಿಯ ದರ್ಶನ ನಿಂತಿದ್ದ ಉದಾಹರಣೆಯೇ ಇರಲಿಲ್ಲ. ಇದೇ ಮೊದಲ ಬಾರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಅನಿವಾರ್ಯ. ಮುಂದೆ ಹೊಂದಿಕೊಂಡೇ ಹೋಗಬೇಕಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಮಹಾಮಾರಿ ಕೋವಿಡ್ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ, ಪೂಜೆ ನೆರವೇರಿಸಲಾಯಿತು ಎಂದು ಅರ್ಚಕರಾದ ಜೀವನ್‌, ಚನ್ನೇಶ್‌, ವಿಶ್ವನಾಥ್‌ ಶಾಸ್ತ್ರಿ ತಿಳಿಸಿದರು.

ಟಾಪ್ ನ್ಯೂಸ್

ಉಗ್ರರ ಹಿಮ್ಮೆಟ್ಟಿಸಲು 50 ಕಮಾಂಡೋಗಳು ರೆಡಿ

ಉಗ್ರರ ಹಿಮ್ಮೆಟ್ಟಿಸಲು 50 ಕಮಾಂಡೋಗಳು ರೆಡಿ

ಗಣರಾಜ್ಯೋತ್ಸವಕ್ಕೂ ಕೋವಿಡ್‌ ಛಾಯೆ;ಕೇಂದ್ರ ಏಷ್ಯಾದ ನಾಯಕರ ಪಾಲ್ಗೊಳ್ಳುವಿಕೆ ಇಲ್ಲ

ಗಣರಾಜ್ಯೋತ್ಸವಕ್ಕೂ ಕೋವಿಡ್‌ ಛಾಯೆ;ಕೇಂದ್ರ ಏಷ್ಯಾದ ನಾಯಕರ ಪಾಲ್ಗೊಳ್ಳುವಿಕೆ ಇಲ್ಲ

ಕಾಶ್ಮೀರ: ಹಿಮದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

ಕಾಶ್ಮೀರ: ಹಿಮದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ನಡೆಯುತ್ತಿದೆ ಲೆಕ್ಕಾಚಾರ

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ನಡೆಯುತ್ತಿದೆ ಲೆಕ್ಕಾಚಾರ

ಬೀಜಿಂಗ್‌ ಒಲಿಂಪಿಕ್ಸ್‌ : ಟಿಕೆಟ್‌ ಮಾರಾಟ ನಿಷೇಧ

ಬೀಜಿಂಗ್‌ ಒಲಿಂಪಿಕ್ಸ್‌ : ಟಿಕೆಟ್‌ ಮಾರಾಟ ನಿಷೇಧ

ಲಂಡನ್‌ ಬಂಗಲೆ ಬಿಡಿ ಉದ್ಯಮಿ ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ ತಾಕೀತು

ಲಂಡನ್‌ ಬಂಗಲೆ ಬಿಡಿ ಉದ್ಯಮಿ ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ ತಾಕೀತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagaluru

ಕರ್ಫ್ಯೂ ನಡುವೆಯೂ ಜಗಳೂರು ಶಾಸಕನ ಜನ್ಮದಿನಾಚರಣೆ : ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ

ಸದ್ಗಹಜಕಜಹಗ್ದಸಅ

ಸಂಕ್ರಾಂತಿ ನೆನೆಸಿಕೊಳ್ಳೋಕೇ ಭಯ

shivamogga news

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿ

davanagere news

ತಿಂಗಳಾಂತ್ಯದವರೆಗೆ ವಾರಾಂತ್ಯ ಕರ್ಫ್ಯೂ ವಿಸ್ತರಣೆ

davanagere news

ಕೊರೊನಾ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಹಿಸಲ್ಲ

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಉಗ್ರರ ಹಿಮ್ಮೆಟ್ಟಿಸಲು 50 ಕಮಾಂಡೋಗಳು ರೆಡಿ

ಉಗ್ರರ ಹಿಮ್ಮೆಟ್ಟಿಸಲು 50 ಕಮಾಂಡೋಗಳು ರೆಡಿ

ಗಣರಾಜ್ಯೋತ್ಸವಕ್ಕೂ ಕೋವಿಡ್‌ ಛಾಯೆ;ಕೇಂದ್ರ ಏಷ್ಯಾದ ನಾಯಕರ ಪಾಲ್ಗೊಳ್ಳುವಿಕೆ ಇಲ್ಲ

ಗಣರಾಜ್ಯೋತ್ಸವಕ್ಕೂ ಕೋವಿಡ್‌ ಛಾಯೆ;ಕೇಂದ್ರ ಏಷ್ಯಾದ ನಾಯಕರ ಪಾಲ್ಗೊಳ್ಳುವಿಕೆ ಇಲ್ಲ

ಕಾಶ್ಮೀರ: ಹಿಮದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

ಕಾಶ್ಮೀರ: ಹಿಮದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ನಡೆಯುತ್ತಿದೆ ಲೆಕ್ಕಾಚಾರ

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ನಡೆಯುತ್ತಿದೆ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.