30 ಎಕರೆ ಅಕ್ರಮ ಲೇಔಟ್‌ ತೆರವು

Team Udayavani, Jan 14, 2022, 10:17 AM IST

30 ಎಕರೆ ಅಕ್ರಮ ಲೇಔಟ್‌ ತೆರವು

ಕಲಬುರಗಿ: ಅಕ್ರಮವಾಗಿ ನಿರ್ಮಿಸಿದ್ದ ವಿವಿಧ ಲೇಔಟ್‌ಗಳ ಮೇಲೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದ ಅಧಿಕಾರಿಗಳು ಗುರುವಾರ ಮಿಂಚಿನ ದಾಳಿ ನಡೆಸಿ, ಸುಮಾರು 30 ಎಕರೆ ಪ್ರದೇಶದಲ್ಲಿನ ಲೇಔಟ್‌ಗಳನ್ನು ತೆರವುಗೊಳಿಸಿದ್ದಾರೆ.

ಇಲ್ಲಿನ ಹಾಗರಗಾ ಗ್ರಾಮದ ಸುತ್ತಮುತ್ತಲಿನ ಜಾಗದಲ್ಲಿ ಕುಡಾದಿಂದ ಅನುಮೋದನೆ ಪಡೆಯದೇ ಅನಧಿ ಕೃತವಾಗಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಹೀಗಾಗಿ ಆಯುಕ್ತ ರಾಚಪ್ಪ ನೇತೃತೃದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ವಿವಿಧೆಡೆ ಅಭಿವೃದ್ಧಿಪಡಿಸಿದ್ದ ಅಕ್ರಮ ಲೇಔಟ್‌ ಗಳನ್ನು ತೆರವುಗೊಳಿಸಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಮೊಹ್ಮದ್‌ ಸುಫಿಯಾನ್‌ ಮತ್ತು ಮೊಹ್ಮದ್‌ ಆಸೀಫ್‌ ಎಂಬುವರು ಸರ್ವೇ ನಂ.213ರ ಆರು ಎಕರೆಯಲ್ಲಿ ಬಡಾವಣೆ ನಿರ್ಮಿಸಿ ಕಲ್ಲುಗಳನ್ನು ಅಳಡಿಸಿದ್ದರು. ಅದೇ ರೀತಿ, ಮೊಹ್ಮದ್‌ ವಾಹೀದ್‌ ಅಲಿ ಸರ್ವೇ ನಂ.203-204ರ 10 ಎಕರೆಯಲ್ಲಿ ಅಕ್ರಮವಾಗಿ ಬಡಾವಣೆ ಅಭಿವೃದ್ಧಿಪಡಿಸಿದ್ದರು. ರಾಜಶೇಖರಯ್ಯ ಮತ್ತು ಚನ್ನಬಸವಣ್ಣ ಎಂಬುವರು ಸೇರಿ ಸರ್ವೇ ನಂ. 197ರ 5.30 ಎಕರೆ ಪ್ರದೇಶ ಹಾಗೂ ಶೇಕ್‌ ಇಮ್ರಾನೋದ್ದೀನ್‌, ಮೊಹ್ಮದ್‌ ಬೇಗಂ ಹಾಗೂ ಅಮರ ಗೌಳಿ, ಆನಂದ ಗೌಳಿ ಎಂಬುವವರು ಕೂಡಿಕೊಂಡು ಸರ್ವೇ ನಂ.199ರ ಎರಡು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮಾಡಿದ್ದ ಬಡಾವಣೆಗಳನ್ನು ತೆರವು ಮಾಡಿ, ಅಭಿವೃದ್ಧಿ ಮಾಡುವ ಪ್ರಾಧಿಕಾರದ ಪೂರ್ವ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಲ್ಲ ಭೂ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಾಲಗತ್ತಿ ಗ್ರಾಮದ ರಸ್ತೆಯಿಂದ ಸೇಡಂ ಮುಖ್ಯ ರಸ್ತೆಯವರೆಗೆ 80 ಅಡಿ ರಸ್ತೆ ಪ್ರದೇಶದಲ್ಲಿ ಅನಧಿಕೃತವಾಗಿ ಟಿನ್‌ ಶೆಡ್‌ ಅಂಗಡಿಗಳನ್ನು ನಿರ್ಮಿಸಿದವರಿಗೂ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸ್ವಯಂ ಪ್ರೇರಣೆಯಿಂದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವಂತೆ ಜಮೀನಿನ ಮಾಲೀಕರ ಎಂ.ಎ.ರೌಫ್‌ ಗೆ ಅಧಿಕಾರಿಗಳು ಸೂಚಿಸಿದ್ದು, ಇದಕ್ಕೆ ಒಂದು ವಾರದ ಗಡುವು ನೀಡಿ ಬಂದಿದ್ದಾರೆ. ತೆರವು ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಭೂ ಮಾಲೀಕರು ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಈ ಕುರಿತು ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಯಾವುದೇ ಜಮೀನುಗಳಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೇ ಬಡಾವಣೆಗಳನ್ನು ಅಭಿವೃದ್ಧಿ ಮಾಡುವಂತಿಲ್ಲ. ಒಂದು ವೇಳೆ ಪ್ರಾಧಿಕಾರದ ಸೂಚನೆ ಉಲ್ಲಂಘಿಸಿ ಅಭಿವೃದ್ಧಿ ಪಡಿಸಿದರೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿಯಾಗಿ ಸಾರ್ವಜನಿಕರು ಬಡಾವಣೆಗಳಲ್ಲಿ ನಿವೇಶನ ಖರೀದಿಸುವ ಮೂಲಕ ಪ್ರಾಧಿಕಾರದ ವಿನ್ಯಾಸದ ಅನುಮೋದನೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಂಡು ಖರೀದಿ ಮಾಡಬೇಕು. -ರಾಚಪ್ಪ, ಆಯುಕ್ತ, ಕುಡಾ

ಟಾಪ್ ನ್ಯೂಸ್

ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ

ರಾಜ್ಯಾದ್ಯಂತ ಆರಂಭವಾದ ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ

ಟೆಂಪೋ ಟ್ರಾವೆಲರ್- ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ

ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ

ಗುಜರಾತ್: ಬಿಜೆಪಿಯ ಪೇಜ್‌ ಕಮಿಟಿಯ ಸದಸ್ಯರಾಗಲು ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರ ಸೂಚನೆ

ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್‌ ಆಕ್ಷೇಪ

ಜೆಟ್‌ಏರ್‌ ವೇಸ್‌ಗೆ ವಿಮಾನ ಯಾರು ಕೊಡ್ತಾರೆ?

ಜೆಟ್‌ಏರ್‌ ವೇಸ್‌ಗೆ ವಿಮಾನ ಯಾರು ಕೊಡ್ತಾರೆ?

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

ಮಹೀಂದ್ರಾ ಸ್ಕಾರ್ಪಿಯೋ-ಎನ್‌ ಬಿಡುಗಡೆ: ಜು.30ರಿಂದ ಮುಂಗಡ ಬುಕಿಂಗ್‌ ಆರಂಭ

ಮಹೀಂದ್ರಾ ಸ್ಕಾರ್ಪಿಯೋ-ಎನ್‌ ಬಿಡುಗಡೆ: ಜು.30ರಿಂದ ಮುಂಗಡ ಬುಕಿಂಗ್‌ ಆರಂಭ

ಕುಂದಾಪುರ : ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 20 ವರ್ಷ ಜೈಲುಶಿಕ್ಷೆ

ಕುಂದಾಪುರ : ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 20 ವರ್ಷ ಜೈಲುಶಿಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ

ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ

tdy-22

ಕಲಬುರ್ಗಿಯಲ್ಲಿ 74.50 ಲಕ್ಷ ರೂ. ಮೌಲ್ಯದ  745.410 ಕೆಜಿ ಗಾಂಜಾ ದಹನ

ಬೆನ್ನಟ್ಟಿದ ಬೀದಿನಾಯಿಗಳ ಹಿಂಡು : ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಪತ್ರಕರ್ತನಿಗೆ ಗಾಯ

ಬೆನ್ನಟ್ಟಿದ ಬೀದಿನಾಯಿಗಳ ಹಿಂಡು : ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಪತ್ರಕರ್ತನಿಗೆ ಗಾಯ

1-ffsf

ಗಾಣಗಾಪುರ ದೇವರ ಹೆಸರಿನಲ್ಲಿ ವಂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ನಿರಾಣಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಸಂದೇಹವಿಲ್ಲ: ಮುರುಗೇಶ್ ನಿರಾಣಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಸಂದೇಹವಿಲ್ಲ: ಮುರುಗೇಶ್ ನಿರಾಣಿ

MUST WATCH

udayavani youtube

ತನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಖಾದರ್

udayavani youtube

ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್

udayavani youtube

ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

udayavani youtube

ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್‌ ಬುಕ್

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

ಹೊಸ ಸೇರ್ಪಡೆ

ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ

ರಾಜ್ಯಾದ್ಯಂತ ಆರಂಭವಾದ ಎಸೆಸೆಲ್ಸಿ ಪೂರಕ ಪರೀಕ್ಷೆ: ಮೊದಲ ದಿನ ಯಶಸ್ವಿ

ಟೆಂಪೋ ಟ್ರಾವೆಲರ್- ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ

ಟೆಂಪೋ ಟ್ರಾವೆಲರ್ – ಸರಕಾರಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರು ಗಂಭೀರ

ಗುಜರಾತ್: ಬಿಜೆಪಿಯ ಪೇಜ್‌ ಕಮಿಟಿಯ ಸದಸ್ಯರಾಗಲು ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರ ಸೂಚನೆ

ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್‌ ಆಕ್ಷೇಪ

ಜೆಟ್‌ಏರ್‌ ವೇಸ್‌ಗೆ ವಿಮಾನ ಯಾರು ಕೊಡ್ತಾರೆ?

ಜೆಟ್‌ಏರ್‌ ವೇಸ್‌ಗೆ ವಿಮಾನ ಯಾರು ಕೊಡ್ತಾರೆ?

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.