ಕಾಗಿಣಾ ಏತ ನೀರಾವರಿಗೆ 639 ಕೋಟಿ ರೂ. ಮಂಜೂರು


Team Udayavani, Feb 14, 2022, 11:31 AM IST

5water

ಚಿಂಚೋಳಿ: ಸೇಡಂ ಮತಕ್ಷೇತ್ರದ ರೈತರಿಗೆ ನೀರಾವರಿ ಪ್ರಯೋಜನಕ್ಕಾಗಿ ಕಾಗಿಣಾ ನದಿಯಿಂದ ಏತ ನೀರಾವರಿ ಯೋಜನೆಗೆ 639 ಕೋಟಿ ರೂ. ಮಂಜೂರಿಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಸೇಡಂ ಶಾಸಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ತಾಲೂಕಿನ ಜಟ್ಟೂರ ಗ್ರಾಮದಲ್ಲಿ ರವಿವಾರ ಕಲಬುರಗಿ, ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರಿ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸುವ ಕಾರ್ಯಕ್ರಮದಲ್ಲಿ 240 ರೈತರಿಗೆ 2.68ಕೋಟಿ ರೂ. ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ಕಳೆದ ಅನೇಕ ವರ್ಷಗಳಿಂದ ದಿವಾಳಿಯಾಗಿ ತುಂಬಾ ನಷ್ಟದಲ್ಲಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಿಂದುಳಿದ ರೈತರ ಕಲ್ಯಾಣಕ್ಕಾಗಿ ಒಂದು ಸಾವಿರ ಕೋಟಿ ರೂ. ನೀಡಿರುವುದರಿಂದ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ 350ಕೋಟಿ ರೂ. ಬಡ್ಡಿ ಉಳಿತಾಯ ಆಗುತ್ತಿದೆ ಎಂದರು.

ಸೇಡಂ ಮತ್ತು ಚಿಂಚೋಳಿ ಮತಕ್ಷೇತ್ರದಲ್ಲಿ ಬರುವ 100 ಹಳ್ಳಿಗಳಲ್ಲಿ ರೈತರು ಹೊಲಗದ್ದೆಗಳಿಗೆ ಹೋಗುವುದಕ್ಕಾಗಿ ರಸ್ತೆ ನಿರ್ಮಿಸಲು 100 ಕೋಟಿ ರೂ.ಮೀಸಲು ಇಡಲಾಗಿದೆ. ಅಲ್ಲದೇ ಮಹಿಳೆಯರ ಸಾಮೂಹಿಕ ಶೌಚಾಲಯಕ್ಕಾಗಿ ಹಣ ನೀಡಲಾಗಿದೆ. ಮೈಸೂರು, ಮಂಡ್ಯ, ಹಾಸನ ಭಾಗದ ರೈತರು ಕೇವಲ ಎರಡು ಎಕರೆ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರೈತರು 10ರಿಂದ 20ಎಕರೆ ಜಮೀನು ಹೊಂದಿದ್ದರೂ ಸಾಲಕ್ಕಾಗಿ ಪರದಾಡುತ್ತಾರೆ. ರೈತರಿಗೆ ನೇರವಾಗಿ ಸಾಲ ಕೊಡುವುದಕ್ಕಾಗಿ 25ರಿಂದ 50ಸಾವಿರ ರೂ.ಶೂನ್ಯ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಆಗುವುದಿಲ್ಲ. ಹೈನುಗಾರಿಕೆ ಮತ್ತು ತೋಟಗಾರಿಕೆ ಉದ್ಯೋಗ ಮಾಡಿಕೊಳ್ಳುವುದಕ್ಕಾಗಿ 10ಲಕ್ಷ ರೂ. ಸಾಲಕ್ಕೆ ಶೇ. 3ರಂತೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊರೊನಾ ತಡೆಗಟ್ಟುವುದಕ್ಕಾಗಿ ದೇಶದ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ. ರೈತರು ದೇಶದ ಬೆನ್ನಲುಬು ಆಗಿರುವುದರಿಂದ ಅವರ ಉದ್ಧಾರಕ್ಕಾಗಿ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಅಶೋಕಕುಮಾರ ಪಾಟೀಲ, ಉಪಾಧ್ಯಕ್ಷೆ ನಾಗಮ್ಮ ಲಚಮಾರೆಡ್ಡಿ, ಉಮೇಶರಾವ್‌ ಕುಲಕರ್ಣಿ, ರಮೇಶ ಬಸಲಾ, ಬಿಚ್ಚಪ್ಪ ಹಾಸಲಿ, ಶಿವನಾಗೇಂದ್ರಪ್ಪ ಹಲಕೋಡ, ಶ್ರೀನಿವಾಸ ವೆಂಕಟಾಪುರ, ಎಪಿಎಂಸಿ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ, ಮುಕುಂದ ದೇಶಪಾಂಡೆ, ಶರಣು ಮೆಡಿಕಲ್‌, ರವೀಂದ್ರರೆಡ್ಡಿ ಮತ್ತಿತರರು ಇದ್ದರು. ಮುಕುಂದ ದೇಶಪಾಂಡೆ ಸ್ವಾಗತಿಸಿದರು, ಕಾರ್ಯದರ್ಶಿ ವೀರಭದ್ರಯ್ಯ ಮಠಪತಿ ವಂದಿಸಿದರು.

ಟಾಪ್ ನ್ಯೂಸ್

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

thumb actress dada saheb palke

ಬಾಲಿವುಡ್ ಹಿರಿಯ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಮಹಿಳಾ ಪತ್ರಕರ್ತೆಯ ಆ ಪ್ರಶ್ನೆಗೆ ಕೆರಳಿ ಅವಾಚ್ಯ ನಿಂದನೆ: ಖ್ಯಾತ ನಟನ ಬಂಧನ

ಪತ್ರಕರ್ತೆಯ “ಆ” ಪ್ರಶ್ನೆಗೆ ಕೆರಳಿ ಅವಾಚ್ಯವಾಗಿ ನಿಂದನೆ: ಖ್ಯಾತ ನಟನ ಬಂಧನ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿ

ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಅಮೇರಿಕದ ಮಹಿಳೆ : ಫೋಟೋ ವೈರಲ್

ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಯುವತಿ : ಫೋಟೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಸ್ಐ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ರಾಜೇಶ್ ಗೆ ಜಾಮೀನು

ಪಿಎಸ್ಐ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ರಾಜೇಶ್ ಗೆ ಜಾಮೀನು

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

ಚಂದ್ರಂಪಳ್ಳಿ ಅಭಿವೃದ್ಧಿಗೆ 7.50 ಕೋಟಿ ರೂ.

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

17

ಇಎಸ್‌ಐ ಆಸ್ಪತ್ರೆ ಸ್ಥಳಕ್ಕಾಗಿ ಅಲೆದಾಟ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

ಹಾಸನದಲ್ಲೂ ಶೇ.50 ಕಮೀಷನ್‌ ದಂಧೆ

ಹಾಸನದಲ್ಲೂ ಶೇ.50 ಕಮೀಷನ್‌ ದಂಧೆ

ದಸರಾಗೆ ಕೋಲಾರದ ಯೋಗಾಚಾರ್ಯ ಸ್ತಬ್ಧಚಿತ್ರ

ದಸರಾಗೆ ಕೋಲಾರದ ಯೋಗಾಚಾರ್ಯ ಸ್ತಬ್ಧಚಿತ್ರ

16

ಜಾನುವಾರು ಚರ್ಮಗಂಟು ರೋಗಕ್ಕೆ ಲಸಿಕೆ ವಿಳಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.