ಸಂವಿಧಾನ ಉಳಿಯದಿದ್ದರೆ ಸೌರ್ಹಾದತೆಗೆ ಧಕ್ಕೆ: ಅಪ್ಪಗೇರೆ
Team Udayavani, May 18, 2022, 2:11 PM IST
ವಾಡಿ: ಬಾಬಾಸಾಹೇಬರು ಬರೆದ ಪ್ರಜಾಪ್ರಭುತ್ವದ ಸಂವಿಧಾನ ಉಳಿಯದಿದ್ದರೆ ದೇಶದಲ್ಲಿ ಕೋಮು ಸೌರ್ಹಾಧತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ| ಅಪ್ಪಗೇರೆ ಸೋಮಶೇಖರ ಹೇಳಿದರು.
ಬಳವಡಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಭಾರತದಲ್ಲೂ ಜಾತಿ ಅಸ್ಪೃಶ್ಯತೆ ಜೀವಂತವಾಗಿದೆ. ಜಾತಿ ಧರ್ಮಗಳ ಹೆಸರಿನಲ್ಲಿ ಮತ್ತೆ-ಮತ್ತೆ ಜನರ ಒಗ್ಗಟ್ಟನ್ನು ಒಡೆಯಲಾಗುತ್ತಿದೆ. ಶಿಕ್ಷಣ ಪಡೆದ ಶೋಷಿತ ಜನಾಂಗವು ಹೋರಾಟದಿಂದ ಹಿಂದೆ ಸರಿಯಬಾರದು. ಅಂಬೇಡ್ಕರರು ಮುನ್ನಡೆಸಿಕೊಂಡು ಬಂದ ಸಮಾನತೆಯ ಹಕ್ಕಿನ ಹೋರಾಟ ಮತ್ತಷ್ಟು ಪ್ರಖರವಾಗಿ ಬೆಳೆದು ಸಂವಿಧಾನ ರಕ್ಷಣೆಯಾಗಬೇಕು ಎಂದರು.
ಗ್ರಾಮದ ಹಿರಿಯ ಮುಖಂಡ ಮಲ್ಲಣಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣಾ ಕೋಮಟೆ, ಕಸಾಪ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಚನ್ನಬಸಪ್ಪ ಬಂಡೇರ, ಸಾಯಬಣ್ಣ ದೊಡ್ಡಮನಿ, ಗೋರಕನಾಥ ದೊಡ್ಡಮನಿ, ರಾಜೇಶ ಹರಳಯ್ಯ, ಕಮಲಾರಾಣಿ, ಸಾಯಬಣ್ಣ ಅಣ್ಣಿಗೇರಿ, ಮಲ್ಲಿಕಾರ್ಜುನ ರಾವೂರ, ಶ್ರೀಕಾಂತ ಇದ್ದರು.