ಜಿ ಪ್ಲಸ್‌-3 ಮನೆಗಳೇ ನಿರ್ಮಿಸಿ: ಸಂಸದ


Team Udayavani, Jun 27, 2020, 4:56 AM IST

houses constru

ಮೈಸೂರು: ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಸಂಬಂಧ ಶಾಸಕ ರಾಮದಾಸ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ನಡುವೆ ನಡೆದಿದ್ದ ಜಟಾಪಟಿ ಮಾಸುವ ಮುನ್ನವೇ, ಸಂಸದರು ಮತ್ತೆ ಕೆ.ಆರ್‌.  ಕ್ಷೇತ್ರದಲ್ಲಿ ರಾಮದಾಸ್‌ ರೂಪಿಸಿರುವ  ಹೊಸ ವಸತಿ ಯೋಜನೆ ಕೈ ಬಿಟ್ಟು, ಹಳೆಯ ಯೋಜನೆ ಜಾರಿಗೆ ತರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಮತ್ತೂಂದು ಜಟಾಪಟಿಗೆ ಮುನ್ನುಡಿ ಬರೆದಿದೆ.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಜಿಲ್ಲಾ  ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಾಪ್‌ ಸಿಂಹ, ರಾಮದಾಸ್‌ ನಿರ್ದೇಶನ ಪ್ರಕಾರ ರೂಪಿಸಿದ ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ವಸತಿ  ಯೋಜನೆ ರೂಪಿಸಿ 3 ವರ್ಷವಾದರೂ ಬಡವರಿಗೆ ವಸತಿ ನೀಡಲು ಸಾಧ್ಯವಾಗಿಲ್ಲ. ಈ ಹಿಂದೆ ಜಿ ಪ್ಲಸ್‌-3 ಮನೆಗಳು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಇದೀಗ ಜಿ ಪ್ಲಸ್‌-9 ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ  ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿ ಪ್ಲಸ್‌-3ನೇ ನಿರ್ಮಿಸಿ: ಜಿ ಪ್ಲಸ್‌-3 ಮನೆಗಳ ಬದಲು ಜಿ ಪ್ಲಸ್‌-9 ಮನೆಗಳ ನಿರ್ಮಾಣ ಮಾಡುವಂತೆ ಶಾಸಕರ ನಿರ್ದೇಶನ ಮೇರೆಗೆ ಯೋಜನೆ ಬದಲಾಯಿಸಿರುವುದಾಗಿ  ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಜಿ ಪ್ಲಸ್‌-3 ಮನೆಗಳ ನಿರ್ಮಾಣಕ್ಕೆ 4.9 ಕೋಟಿ ರೂ. ಸಾಕಾಗುತ್ತದೆ. ಆದರೆ, ಜಿ ಪ್ಲಸ್‌-9 ಮನೆಗಳ ನಿರ್ಮಾಣಕ್ಕೆ 18 ಕೋಟಿ ರೂ. ಅವಶ್ಯಕತೆ ಇದೆ. ಅಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ತರುತ್ತೀರಾ? ಅನುಷ್ಠಾನ ಸಾಧ್ಯವೇ ಎಂಬ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಹೀಗಾಗಿ ಈ ಹಿಂದೆ ರೂಪಿಸಿದ ಯೋಜನೆ ಪ್ರಕಾರ ಜಿ ಪ್ಲಸ್‌-3 ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

ರಾಜಕೀಯ  ಹಸ್ತಕ್ಷೇಪ: ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳು ಸರಿಯಾಗಿ ಹಂಚಿಕೆಯಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಭಾವಿಗಳಿಗೆ ಕೆಳ ಭಾಗದಲ್ಲಿ ಮನೆ ನೀಡಲಾಗಿದೆ. ಬಹಿರಂಗವಾಗಿ ಮನೆ ಹಂಚಿಕೆ   ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಶಾಸಕರಾದ ಎಚ್‌ .ಪಿ.ಮಂಜುನಾಥ್‌, ಹರ್ಷವರ್ಧನ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು  ಇದ್ದರು.

ಯುಜಿ ಕೇಬಲ್‌ ಅಳವಡಿಕೆಗೆ ಹಸ್ತಕ್ಷೇಪ: ನಗರದಲ್ಲಿ ಸೆಸ್ಕ್ ಕೈಗೊಂಡಿರುವ ಯುಜಿ ಕೇಬಲ್‌ ಅಳವಡಿಕೆ ಕಾಮಗಾರಿಗೆ ಕೆಲ ಪಾಲಿಕೆ ಸದಸ್ಯರು ಅಡ್ಡಿ ಪಡಿಸುತ್ತಿದ್ದಾರೆ. ತಪ್ಪುಗಳಾಗಿದ್ದರೆ ಪ್ರಶ್ನಿಸಲಿ. ವಿನಾಕಾರಣ ಕಾಮಗಾರಿಗೆ ಅಡ್ಡಿ ಪಡಿಸಿ  ಪಾಲಿಕೆ ಸದಸ್ಯರು ವಸೂಲಾತಿಗೆ ಮುಂದಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಪಾಲಿಕೆ ಸದಸ್ಯರಿಂದ ಯುಜಿ ಕೇಬಲ್‌ ಅಳವಡಿಕೆಗೆ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತರುವಂತೆ ಸೆಸ್ಕ್ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು

ಟಾಪ್ ನ್ಯೂಸ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

Untitled-1

ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರು

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

baby

ಬೆಳಗಾವಿ: ಚುಚ್ಚುಮದ್ದು ಪಡೆದ ಬಳಿಕ ಮೂರು ಶಿಶುಗಳ ನಿಗೂಢ ಸಾವು; ತನಿಖೆ ಆರಂಭ

1wer

ಭಯಗೊಳ್ಳದೆ ಚುನಾವಣೆ ಎದುರಿಸಿ: ಅರ್ಚನಾಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ವಾರಾಂತ್ಯ ಕರ್ಫ್ಯೂಗೆ ಮೈಸೂರು ಸಂಪೂರ್ಣ ಸ್ತಬ್ಧ 

7temple

ದೊಡ್ಡಹೆಜ್ಜೂರು ವೀರಾಂಜನೇಯ ಸ್ವಾಮಿ ಜಾತ್ರೆ ರದ್ದು

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ

ನಾಡ ಕಚೇರಿಯಲ್ಲೇ ಸೌಲಭ್ಯ ಪಡೆಯಿರಿ

ನಾಡ ಕಚೇರಿಯಲ್ಲೇ ಸೌಲಭ್ಯ ಪಡೆಯಿರಿ

MUST WATCH

udayavani youtube

ನಾವು ಬದಲಾಗೋಣ ಪ್ರಕೃತಿಯನ್ನು ಘೋಷಿಸೋಣಭೂಮಿ ಸುಪೋಷನ ಆಂದೋಲನ

udayavani youtube

ಒಂದು ಕೆ.ಜಿ. ಬಾಳೆ ಹಣ್ಣಿಗೆ 2 ರೂ. : ಸಂಕಷ್ಟದಲ್ಲಿ ಬಾಳೆ ಬೆಳೆದ ರೈತ

udayavani youtube

3-IN-ONE ಮಾದರಿ ವಾಕಿಂಗ್‌ ಸ್ಟಿಕ್‌ ! ಗ್ರಾಮೀಣ ಭಾಗದ ವಿದ್ಯಾರ್ಥಿಯ ಆವಿಷ್ಕಾರ

udayavani youtube

ಉಡುಪಿಯ ರಸ್ತೆಗಳಲ್ಲಿ ಓಡಾಡಿದ Corona Virus !! ವಿಶಿಷ್ಟ ರೀತಿಯಲ್ಲಿ ಜನಜಾಗೃತಿ

udayavani youtube

ಉಡುಪಿ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಕೊರೊನಾ ವೈರಸ್ !

ಹೊಸ ಸೇರ್ಪಡೆ

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

18tipper

ಮರಳು ಸಾಗಾಟ: ಟಿಪ್ಪರ್‌ ವಶ

17women

ಹೆಣ‍್ಣನ್ನು ದೈವತ್ವಕ್ಕೇರಿಸಿದ್ದು 12ನೇ ಶತಮಾನದ ಬಸವಾದಿ ಶರಣರು

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.