Exam: ಪರೀಕ್ಷೆ ಅಕ್ರಮಕ್ಕೆ 10 ಕೋಟಿ ರೂ. ವರೆಗೆ ದಂಡ !

Team Udayavani, Dec 14, 2023, 12:59 AM IST

EXAM QR

ಬೆಳಗಾವಿ: ಪರೀಕ್ಷಾ ಅಕ್ರಮ ತಡೆಯವುದಕ್ಕೆ ರಾಜ್ಯ ಸರಕಾರ ತಂದಿರುವ “ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ನಿರ್ಬಂಧ” ಮಸೂದೆಯು ವಿಧಾನ
ಸಭೆಯಲ್ಲಿ ಅಂಗೀಕಾರಗೊಂಡಿದೆ. ನೇಮಕ ಹಗರಣದ ಸಂಚುಕೋರರಿಗೆ 15 ಲಕ್ಷದಿಂದ 10 ಕೋಟಿ ರೂ.ವರೆಗೆ ದಂಡ ವಿಧಿಸುವ ಜತೆಗೆ 8ರಿಂದ 12 ವರ್ಷಗಳ ಕಠಿನ ಶಿಕ್ಷೆ ವಿಧಿಸಲು ಸರಕಾರ ಮುಂದಾಗಿದೆ.

ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದರು. ಪಿಎಸ್‌ಐ ನೇಮಕದ ಜತೆಗೆ ತೀರಾ ಇತ್ತೀಚೆಗೆ ಪರೀಕ್ಷಾ ಪ್ರಾಧಿಕಾರ ನಡೆಸಿದ ನೇಮಕದಲ್ಲೂ ಅಕ್ರಮವಾಗಿದೆ. ಬ್ಲೂಟೂತ್‌ ಇತ್ಯಾದಿ ವೈಜ್ಞಾನಿಕ ಉಪಕರಣಗಳ ಬಳಕೆ ಜತೆಗೆ ಒಎಂಆರ್‌ ಶೀಟ್‌ಗಳ ದುರ್ಬಳಕೆ ಯಾಗಿದೆ. ಇದರಿಂದ ಲಕ್ಷಾಂತರ ಯುವಕರಿಗೆ ಅನ್ಯಾಯವಾಗಿದೆ.

ಸರ್ವರಿಗೂ ಸಮಾನ ಅವಕಾಶ ನೀಡಬೇಕೆಂಬ ಆಶಯಕ್ಕೆ ಧಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಚುಕೋರರು ಹಾಗೂ ಆರೋಪಿಗಳಿಗೆ ತಕ್ಕಶಿಕ್ಷೆ ನೀಡುವ ಉದ್ದೇಶದಿಂದ ಈ ಮಸೂದೆ ಜಾರಿಗೆ ತರಲಾಗುತ್ತದೆ. ಈ ಕಾಯ್ದೆಯಾಗಿ ಜಾರಿಗೊಂಡರೆ ಅಕ್ರಮ ಎಸಗುವ ಪರೀûಾರ್ಥಿಗಳಿಗೆ ಹಾಗೂ ಈ ಸಂಚನ್ನು ರೂಪಿಸುವ ವ್ಯಕ್ತಿಗಳಿಗೆ ಜಾಮೀನು ಹಾಗೂ ರಾಜಿ ಸಂಧಾನಕ್ಕೆ ಅವಕಾಶ ಸಿಗದಂತೆ ಕಲಂಗಳನ್ನು ರಚಿಸಿದ್ದೇವೆ. ಇದನ್ನು ಸಗ್ನೇಯ ಅಪರಾಧ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಾಯ್ದೆ ಸ್ವರೂಪವೇನು?

– ಯಾವುದೇ ಪರೀಕ್ಷಾರ್ಥಿ ಅಕ್ರಮ ಎಸಗಿರುವುದು ಸಾಬೀತಾದರೆ ಐದು ವರ್ಷ ಸಜೆ ಹಾಗೂ 10 ಲಕ್ಷ ರೂ.ವರೆಗೆ ದಂಡ. ದಂಡ ಕಟ್ಟಲು ತಪ್ಪಿದರೆ ಮತ್ತೆ ಹದಿನೈದು ತಿಂಗಳು ಅವಧಿಯ ಕಾರಾಗೃಹವಾಸ.
– ಅಕ್ರಮಕ್ಕೆ ಒಳಸಂಚು ನಡೆಸುವ ಅಥವಾ ಸಹಕಾರ ನೀಡುವವರ ಮೇಲಿನ ಆರೋಪ ಸಾಬೀತಾದರೆ 8ರಿಂದ 12 ವರ್ಷ ಕಠಿನ ಸಜೆ. 15 ಲಕ್ಷ ರೂ.ನಿಂದ 10 ಕೋಟಿ ರೂ.ವರೆಗೆ ದಂಡ. ದಂಡ ಕಟ್ಟಲು ತಪ್ಪಿದರೆ ಮತ್ತೆ ಎರಡು ವರ್ಷ ಸಜೆ.
– ನಕಲಿ ದಾಖಲೆ ಅಥವಾ ಒಬ್ಬರ ಪರವಾಗಿ ಇನ್ನೊಬ್ಬರು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಆರೋಪಿಗಳಿಗೆ ಕ್ರಿಮಿನಲ್‌ ವಿಚಾರಣೆಗೆ ಒಳಪಡಿಸುವುದು.
– ಸಿಕ್ಕಿಬಿದ್ದ ಪರೀಕ್ಷಾರ್ಥಿ ಎರಡು ವರ್ಷದವರೆಗೆ ಇನ್ಯಾವುದೇ ಪರೀಕ್ಷೆ ಬರೆಯದಂತೆ ನಿರ್ಬಂಧಿಸುವುದು.
– ಪರೀಕ್ಷಾ ಅಕ್ರಮದ ಮೂಲಕ ಗಳಿಸಿದ ಉದ್ಯೋಗದಿಂದ ಸಂಪಾದಿಸಿದ ಎಲ್ಲ ಬಗೆಯ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು.
– ಹೆಚ್ಚುವರಿ ಪೊಲೀಸ್‌ ಅಧೀಕ್ಷಕ (ಎಎಸ್‌ಪಿ) ದರ್ಜೆ ಅಧಿಕಾರಿಯಿಂದ ಪ್ರಕರಣದ ತನಿಖೆ.
– ಈ ಪ್ರಕರಣವನ್ನು ಸಜ್ನೆàಯ, ಜಾಮೀನು ರಹಿತ ಹಾಗೂ ರಾಜಿ ಸಂಧಾನ ಮಾಡಿಕೊಳ್ಳಲಾಗದ ಪ್ರಕರಣ ಎಂದು ಪರಿಗಣಿಸುವುದು.

ಯಾವ್ಯಾವ ಪರೀಕ್ಷೆ ಅನ್ವಯ ? :
-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)
-ಪರೀಕ್ಷಾ ಪ್ರಾಧಿಕಾರ (ಕೆಇಎ)
-ರಾಜ್ಯ ಸರಕಾರದ ಎಲ್ಲ ಪ್ರಾಧಿಕಾರ ಹಾಗೂ ಏಜೆನ್ಸಿ ಮೂಲಕ ನಡೆಯುವ ನೇಮಕ.
-ರಾಜ್ಯ ಧನಸಹಾಯ ಪಡೆದ ವಿಶ್ವವಿದ್ಯಾನಿಲಯಗಳು.
-ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ.
-ಪೊಲೀಸ್‌ ನೇಮಕ ಮತ್ತು ಮುಂಭಡ್ತಿ.
-ಸರಕಾರಿ ಒಡೆತನದ ಸಾರ್ವಜನಿಕ ಉದ್ಯಮ.
-ಎಲ್ಲ ಸೊಸೈಟಿ, ನಿಗಮ, ಸ್ಥಳೀಯ ಸಂಸ್ಥೆ, ರಾಜ್ಯ ಸರಕಾರದ ಸಾರ್ವಜನಿಕ – ವಲಯದ ಉದ್ಯಮ ನಡೆಸುವ ಪರೀಕ್ಷೆಗಳಿಗೆ ಈ ನಿಯಮ ಅನ್ವಯವಾಗಲಿದೆ.

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.