ಆಸ್ಟ್ರೇಲಿಯನ್ ಓಪನ್: ಮೆಡ್ವೆಡೇವ್, ಸಿಸಿಪಸ್ ಪಾಸ್; ಹಾಲೆಪ್ ಔಟ್
Team Udayavani, Jan 24, 2022, 11:15 PM IST
ಪೋಲೆಂಡ್‌ನ ಐಗಾ ಸ್ವಿಯಾಟೆಕ್
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಕ್ವಾರ್ಟರ್ ಫೈನಲ್‌ನತ್ತ ಮುಖ ಮಾಡಿದೆ. ಸೋಮವಾರ ಎರಡೂ ವಿಭಾಗಗಳ 8 ಪ್ರಿ-ಕ್ವಾರ್ಟರ್ ಫೈನಲ್ಸ್ ನಡೆದಿದ್ದು, ಕೆವಲವು ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ.
ಪುರುಷರ ವಿಭಾಗದಿಂದ ಡ್ಯಾನಿಲ್ ಮೆಡ್ವೆಡೇವ್, ಸ್ಟೆಫನಸ್ ಸಿಸಿಪಸ್, ಜಾನಿಕ್ ಸಿನ್ನರ್, ಫೆಲಿಕ್ಸ್ ಔಗರ್ ಅಲಿಯಾಸಿಮ್ ಅಂತಿಮ ಎಂಟರ ಸುತ್ತು ತಲುಪಿದ್ದಾರೆ. ವನಿತಾ ವಿಭಾಗದಿಂದ ಮುನ್ನಡೆದವರೆಂದರೆ ಡೇನಿಯಲ್ ಕಾಲಿನ್ಸ್, ಅಲೈಜ್ ಕಾರ್ನೆಟ್, ಐಗಾ ಸ್ವಿಯಾಟೆಕ್ ಮತ್ತು ಕಯಾ ಕನೆಪಿ.
ಕ್ರೇಸಿ, ಸಿಲಿಕ್ ಪರಾಭವ
ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಮೇಲೆ ಕಣ್ಣಿಟ್ಟಿರುವ ಡ್ಯಾನಿಲ್ ಮೆಡ್ವೆಡೇವ್ 4 ಸೆಟ್‌ಗಳ ಥ್ರಿಲ್ಲರ್‌ನಲ್ಲಿ ಅಮೆರಿಕದ ಮ್ಯಾಕ್ಸಿಮ್ ಕ್ರೇಸಿ ಅವರನ್ನು ಮಣಿಸಿದರು. ಅಂತರ 6-2, 7-6 (7-4), 6-7 (4-7), 7-5. ಅಮೆರಿಕನ್ ಟೆನಿಸಿಗನ ಸರ್ವ್ ಮತ್ತು ವ್ಯಾಲಿ ರಶ್ಯನ್ ಆಟಗಾರನಿಗೆ ಸವಾಲಾಗಿ ಪರಿಣಮಿಸಿತು.
ಮೆಡ್ವೆಡೇವ್ ಅವರ ಕ್ವಾರ್ಟರ್ ಫೈನಲ್‌ಎದುರಾಳಿ ಕೆನಡಾದ ಫೆಲಿಕ್ಸ್ ಔಗರ್ ಅಲಿಯಾಸಿಮ್. ಅವರು ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಭಾರೀ ಹೋರಾಟ ನಡೆಸಿ 2-6, 7-6 (9-7), 6-2, 7-6 (7-4) ಅಂತರದಿಂದ ಗೆದ್ದು ಬಂದರು.
ಆತಿಥೇಯ ಆಸ್ಟ್ರೇಲಿಯದ ಅಂತಿಮ ಭರವಸೆಯಾಗಿದ್ದ ಅಲೆಕ್ಸ್ ಡಿ ಮಿನೌರ್ ಅವರನ್ನು ಇಟಲಿಯ ಜಾನಿಕ್ ಸಿನ್ನರ್ 7-6 (7-3), 6-3, 6-4ರಿಂದ ಮಣಿಸಿದರು. ಸಿನ್ನರ್ ಅವರಿನ್ನು ಗ್ರೀಕ್‌ನ ದೈತ್ಯ ಆಟಗಾರ ಸ್ಟೆಫನಸ್ ಸಿಸಿಪಸ್ ಸವಾಲು ಎದುರಿಸಬೇಕಿದೆ.
4ನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್ ಮತ್ತು ಅಮೆರಿಕದ ಟೇಲರ್ ಫ್ರಿಟ್ಜ್ ನಡುವಿನ ಕಾದಾಟ 5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಅಂತಿಮ 2 ಸೆಟ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಸಿಸಿಪಸ್ ಅಮೋಘ ಪರಾಕ್ರಮ ತೋರಿದರು. ಗೆಲುವಿನ ಅಂತರ 4-6, 6-4, 4-6, 6-3, 6-4.
ಇದನ್ನೂ ಓದಿ:ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್
ಕಾರ್ನೆಟ್-ಕಾಲಿನ್ಸ್ ಕಾದಾಟ
ವನಿತಾ ವಿಭಾಗದಲ್ಲಿ ಮಾಜಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ ಅವರನ್ನು ಫ್ರಾನ್ಸ್‌ನ ಅಲೈಜ್ ಕಾರ್ನೆಟ್ ಮನೆಗೆ ಕಳುಹಿಸಿದರು. 3 ಸೆಟ್‌ಗಳ ಸೆಣಸಾಟದಲ್ಲಿ ಕಾರ್ನೆಟ್ 6-4, 3-6, 6-4 ಅಂತರದ ಜಯ ಸಾಧಿಸಿದರು. ಇವರ ಕ್ವಾರ್ಟರ್ ಫೈನಲ್‌ಎದುರಾಳಿ ಅಮೆರಿಕದ ಡೇನಿಯಲ್ ಕಾಲಿನ್ಸ್. ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್ ವಿರುದ್ಧ ಕಾಲಿನ್ಸ್ ಮೊದಲ ಸೆಟ್ ಕಳೆದುಕೊಂಡೂ 4-6, 6-4, 6-4 ಅಂತರದ ಗೆಲುವು ಕಂಡರು. ಕಾಲಿನ್ಸ್ ಗೆಲುವಿನೊಂದಿಗೆ ಒಟ್ಟು ಮೂವರು ಅಮೆರಿಕನ್ನರು ಕ್ವಾರ್ಟರ್ ಫೈನಲ್ ತಲುಪಿದಂತಾಯಿತು. ಉಳಿದಿಬ್ಬರೆಂದರೆ ಮ್ಯಾಡಿಸನ್ ಕೀಸ್ ಮತ್ತು ಜೆಸ್ಸಿಕಾ ಪೆಗುಲಾ.
ಪೋಲೆಂಡ್‌ನ ಐಗಾ ಸ್ವಿಯಾಟೆಕ್ ರೊಮೇನಿಯಾದ ಸೊರಾನಾ ವಿರುದ್ಧ 5-7, 6-3, 6-3 ಮೇಲುಗೈ ಕಂಡರು. ಇವರ ಎದುರಾಳಿ ಎಸ್ತೋನಿಯಾದ ಕಯಾ ಕನೆಪಿ. ಇವರು ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಆಟವನ್ನು 5-7, 6-2, 7-6 (10-7) ಅಂತರದಿಂದ ಕೊನೆಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ