ಬೆಂಗಳೂರು:ಯುವತಿಯರ ಅರೆಬೆತ್ತಲೆ ಫೋಟೋ ಪಡೆದು ಬ್ಲ್ಯಾಕ್ ಮೇಲ್ ; ವಿದ್ಯಾರ್ಥಿ ಸೆರೆ
Team Udayavani, Jan 12, 2022, 12:58 PM IST
ಬೆಂಗಳೂರು: ಯುವತಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದು ಪರಿಚಯವಾದ ಯುವತಿಯರಿಗೆ ರೂಪದರ್ಶಿ ಮಾಡುವುದಾಗಿ ಅರೆಬೆತ್ತಲೆ ಫೋಟೋ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಲಸೂರು ನಿವಾಸಿ ಪ್ರಪಂಚನ್ (28) ಬಂಧಿತ. ಆತನ ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿ ಯುವತಿಯೊಬ್ಬಳ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದಿದ್ದ. “ನಾನು ಮಾಡೆಲಿಂಗ್ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಬರಲು ಆಸಕ್ತಿಯಿರುವವರು ತನ್ನನ್ನು ಸಂಪರ್ಕಿಸಬಹುದು’ ಎಂದು ಪೋಸ್ಟ್ ಹಾಕಿದ್ದ. ಅದನ್ನು ಕಂಡ ಹತ್ತಾರು ಯುವತಿಯರು ಆತನ ಖಾತೆಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಅಲ್ಲದೆ, ಸಂದೇಶ ಕಳುಹಿಸುತ್ತಿದ್ದರು. ಸಂದೇಶ ಕಳಿಸಿದ ಯುವತಿಯರಿಗೆ ತನ್ನ ಮೊಬೈಲ್ ನಂಬರ್ ಕಳಿಸುತ್ತಿದ್ದ. ಯುವತಿಯರು ಸಂಪರ್ಕಿಸಿದ ಕೂಡಲೇ ಮಾಡೆಲಿಂಗ್ಗೆ ಅರೆಬೆತ್ತಲೆ ಫೋಟೋ ಬೇಕೆಂದು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.
ರೂಪದರ್ಶಿಯಾಗುವ ಆಸೆಯಿದ್ದ ಯುವತಿಯರು ಫೋಟೋ ಕಳುಹಿಸುತ್ತಿ ದ್ದರು. ಆ ಫೋಟೋಗಳಿಗೆ ಅಶ್ಲೀಲ ಫೋಟೋಗಳನ್ನು ಮಾರ್ಫ್ ಮಾಡಿ ಅದೇ ಯುವತಿಯ ವಾಟ್ಸ್ಆ್ಯಪ್ಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡ ದಿದ್ದರೆ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ. ಗಾಬರಿಗೊಂಡ ಯುವತಿ ಯರು ಆತನ ಖಾತೆಗೆ ಹಣ ಜಮೆ ಮಾಡಿ ದ್ದಾರೆ. ಆರೋಪಿ, ಇದುವರೆಗೂ 20ಕ್ಕೂ ಅಧಿಕ ಮಂದಿ ಯುವತಿಯರಿಗೆ ವಂಚಸಿ ದ್ದಾನೆ ಎಂದು ಪೊಲೀಸರು ಹೇಳಿದರು.
2021ರಲ್ಲಿ 24 ವರ್ಷದ ಯುವತಿಯೊಬ್ಬಳು ಹಲಸೂರು ಠಾಣೆಗೆ ದೂರು ನೀಡಿದ್ದರು,ಆರೋಪಿಯನ್ನು ಬಂಧಿಸಲಾಗಿದೆ ಎಂದರು.