75,000 ಅಮೆರಿಕನ್ನರು ಸಾವಿನ ಸಂಕಷ್ಟದಲ್ಲಿ

Team Udayavani, May 14, 2020, 1:29 PM IST

75,000 ಅಮೆರಿಕನ್ನರು ಸಾವಿನ ಸಂಕಷ್ಟದಲ್ಲಿ

ಮಣಿಪಾಲ: ಕೋವಿಡ್ ವೈರಸ್‌ ಕಾಟದ ಪರಿಣಾಮವಾಗಿ ಸುಮಾರು 75,000 ಅಮೆರಿಕನ್ನರು ಔಷಧ ಅಥವಾ ಆಲ್ಕೊಹಾಲ್‌ ಅನ್ನು ದುರುಪಯೋಗಪಡಿಸಿ ಆತ್ಮಹತ್ಯೆಯಂತಹ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ ಎಂದು ಅಮೆರಿಕದ ಪಬ್ಲಿಕ್‌ ಹೆಲ್ತ್‌ ಗ್ರೂಪ್‌ ನಡೆಸಿದ ಅಧ್ಯಯನ ಹೇಳಿದೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತಗಳು ಮತ್ತು ಪ್ರತ್ಯೇಕತೆಯಿಂದ ಉಂಟಾಗುವ ಒತ್ತಡ ಮತ್ತು ಸಾಂಕ್ರಾಮಿಕ ರೋಗದಿಂದ ನೊಂದು ಹತಾಶೆಯ ಸಾವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಈ ಕೋವಿಡೇತರ ಬಿಕ್ಕಟ್ಟಿನ ಕುರಿತು ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರಕಾರ ಕ್ರಮ ಕೈಗೊಳ್ಳದೇ ಇದ್ದರೆ ಸಾವುಗಳ ಪ್ರಮಾಣ ಅಂದಾಜನ್ನು ದಾಟಬಹುದು ಎಂದಿದೆ.

ನಾಳೆಯ ದಿನಗಳಲ್ಲಿ ಸಂಭವಿಸಬಹುದಾದ ಇಂತಹ ಘಟನೆಗಳನ್ನು ತಡೆಯಲು ಸರಕಾರ ಗುಣಮಟ್ಟದ ಮಾನಸಿಕ ಆರೋಗ್ಯ ಚಿಕಿತ್ಸೆಗಳನ್ನು ನೀಡಬೇಕು ಎಂದು ಸಲಹೆ ನೀಡಲಾಗಿದೆ. ಮಾದಕವಸ್ತುಗಳ ದುರುಪಯೋಗವನ್ನು ತಡೆಯ ಬೇಕಾಗಿದೆ ಎಂದು ವೆಲ್‌ ಬೀಯಿಂಗ್‌ ಟ್ರಸ್ಟ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಬೆಂಜಮಿನ್‌ ಎಫ್. ಮಿಲ್ಲರ್‌ ತಿಳಿಸಿದ್ದಾರೆ.

ಕೋವಿಡ್‌ -19 ರ ಪ್ರಭಾವದಿಂದಾಗಿ ನಿರುದ್ಯೋಗದ ಜತೆಗೆ ಪ್ರತ್ಯೇಕತೆ ಮತ್ತು ಅನಿಶ್ಚಿತತೆಯ ಭಾವ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಸಾಂಕ್ರಾಮಿಕ ರೋಗದಿಂದಾಗಿ ಉದ್ಯೋಗ ಕಳೆದುಕೊಳ್ಳುವವರಿಗೆ ಮತ್ತೆ ಕೆಲಸ ಸಿಗುವ ಕುರಿತು ಸರಕಾರ ಭರವಸೆ ನೀಡಬೇಕು. 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ನಿರುದ್ಯೋಗದ ಜತೆಗೆ ಆತ್ಮಹತ್ಯೆ ಪ್ರಮಾಣವೂ ಏರಿಕೆಯಾಗಿತ್ತು ಎಂದು ವೆಲ್‌ ಬೀಯಿಂಗ್‌ ಟ್ರಸ್ಟ್‌ ಹೇಳಿದೆ.

ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದೀಗ ಹೊಸ ಅಂಕಿಅಂಶ ದೊರೆತಿದ್ದು, 20.5 ಮಿಲಿಯನ್‌ ಉದ್ಯೋಗಗಳಿಗೆ ಹೊಡೆತಬಿದ್ದಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಇತ್ತೀಚೆಗೆ ಹೇಳಿತ್ತು.

ಈ ಉದ್ಯೋಗ ಕುಸಿತವು ನಿರುದ್ಯೋಗ ದರ ಶೇ. 14.7ರಷ್ಟು ಏರಿಕೆಗೆ ಕಾರಣವಾಗಿದೆ. ಇದಕ್ಕೂ ಮೊದಲು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶೇ. 4.4ರಷ್ಟು ನಿರುದ್ಯೋಗಕ್ಕೆ ಕಾರಣವಾಗಿತ್ತು. ಮಾರ್ಚ್‌ ತಿಂಗಳಿನಲ್ಲಿ ಅತೀ ಹೆಚ್ಚಿನ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗವು ತೀವ್ರವಾಗಿ ಕುಸಿದಿದ್ದು, ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ ಶೇ.70.64 ದಾಖಲೆ ಮತದಾನ; 14 ಕ್ಷೇತ್ರಗಳ ಅಂತಿಮ ಮತದಾನ ಪ್ರಮಾಣ ಪ್ರಕಟ

ರಾಜ್ಯದಲ್ಲಿ ಶೇ.70.64 ದಾಖಲೆ ಮತದಾನ; 14 ಕ್ಷೇತ್ರಗಳ ಅಂತಿಮ ಮತದಾನ ಪ್ರಮಾಣ ಪ್ರಕಟ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ರಾಜ್ಯದಲ್ಲಿ ಶೇ.70.64 ದಾಖಲೆ ಮತದಾನ; 14 ಕ್ಷೇತ್ರಗಳ ಅಂತಿಮ ಮತದಾನ ಪ್ರಮಾಣ ಪ್ರಕಟ

ರಾಜ್ಯದಲ್ಲಿ ಶೇ.70.64 ದಾಖಲೆ ಮತದಾನ; 14 ಕ್ಷೇತ್ರಗಳ ಅಂತಿಮ ಮತದಾನ ಪ್ರಮಾಣ ಪ್ರಕಟ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.