“ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ; ಜನರು ನಿರ್ಲಕ್ಷಿಸುವಂತಿಲ್ಲ: ಜಿಲ್ಲಾಧಿಕಾರಿ

Team Udayavani, Nov 3, 2020, 6:33 PM IST

“ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ; ಜನರು ನಿರ್ಲಕ್ಷಿಸುವಂತಿಲ್ಲ: ಜಿಲ್ಲಾಧಿಕಾರಿ

ಮೂಲ್ಕಿ: ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ ಆದರೆ ಜನರು ನಿರ್ಲಕ್ಷಿಸುವುದು ಸರಿಯಲ್ಲ. ಹಬ್ಬ ಹರಿದಿನಗಳು ಸಾಲು ಸಾಲಗಿ ನಮ್ಮ ಮುಂದೆ ಬಂದಿರುವುದರಿಂದ ಮತ್ತೆ ಕೊರೊನಾ ದಾಳಿ ನಡೆಸುವ ಸಾಧ್ಯತೆ ಇದೆ. ಆದುದರಿಂದ ಸರಕಾರದ ಇಲಾಖೆಗಳ ಅಧಿಕಾರಿಗಳು, ಜನರು ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

ಮಂಗಳವಾರ ನಗರ ಪಂಚಾಯತ್‌ ಸಮುದಾಯ ಭವನದಲ್ಲಿ ನಡೆದ ಮೂಲ್ಕಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

ಜನ ಹಿತಕ್ಕೆ ಆದ್ಯತೆ ನೀಡಿ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ಯೋಜನೆಗಳು ಸಕಾಲದಲ್ಲಿ ಜನರನ್ನು ತಲುಪಬೇಕು ಮತ್ತು ಅವರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೇವೆ ಸಲ್ಲಿಸಬೇಕು. ಜನ ಹಿತದ ಕೆಲಸಗಳಿಗೆ ಒತ್ತು ಕೊಟ್ಟು ಅಭಿವೃದ್ಧಿ ಕಾರ್ಯಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

300 ರೂ.ಗಳಿಗೆ ಅಗತ್ಯ ಮರಳು
ಮರಳು ನೀತಿಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿ ತನ್ನ ಅಗತ್ಯ ಕೆಲಸಕ್ಕೆ ಬೇಕಾದ ಮರಳನ್ನು ಪಂಚಾಯತ್‌ ಆಡಳಿತಕ್ಕೆ ರೂ. 300 ರೂ. ಭರಿಸಿ ಅರ್ಜಿ ಸಲ್ಲಿ ಸ್ಥಳೀಯವಾಗಿರುವ ತೋಡು, ಕೊಳ ಮತ್ತು ಸಣ್ಣ ನದಿ ಪಾತ್ರಗಳಲ್ಲಿ ಆತನೇ ಲಘು ವಾಹನದಲ್ಲಿ ಮರಳು ಸಾಗಿಸುವ ವ್ಯವಸ್ಥೆಗೆ ಇರುವ ಅವಕಾಶವನ್ನು ಪಂಚಾಯತ್‌ ಮಟ್ಟದಲ್ಲಿ ಪಿಡಿಒಗಳು ಜನರಿಗೆ ಮಾಡಿಕೊಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ:ಅಂತಿಮ ಸುತ್ತಿನ ಮತದಾನ ಶುರು: ಮಹಾಸಮರ-ಅಮೆರಿಕದ ಗದ್ದುಗೆ ಯಾರಿಗೆ? ಸಮೀಕ್ಷೆಯಲ್ಲೇನಿದೆ

ಶಾಸಕ ಉಮಾನಾಥ ಕೋಟ್ಯಾನ್‌ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳು ತಾನು ಅಧಿಕಾರ ವಹಿಸಿಕೊಂಡಕ್ಷಣ ಜಿಲ್ಲೆಯ ಎಲ್ಲ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಾಕಿಕೊಂಡು ತಮ್ಮ ಆಸಕ್ತಿಯಿಂದಲೇ ಇಲ್ಲಿಗೂ ಬಂದು ಈ ಸಭೆ ನಡೆಸಲಾಗುತ್ತಿದೆ. ಇಲಾಖೆಗಳ ಅಧಿಕಾರಿಗಳು ಜನರ ಸಹಾಯಕ್ಕೆ ಬೇಕಾದ ಕೆಲಸಗಳನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಮಕ್ಷಮಲ್ಲಿ ತಿಳಿಸಿ ಪರಿಹಾರ ಪಡೆಕೊಳ್ಳಿ ಎಂದರು.

ಮೂಲ್ಕಿ ತಾಲೂಕು ತಹಶಿಲ್ದಾರ್‌ ಎನ್‌. ಮಾಣಿಕ್ಯ, ನಗರ ಪಂಚಾಯತ್‌ ಮುಖ್ಯಾಧಿಕಾರಿ ಪಿ. ಚಂದ್ರಪೂಜಾರಿ, ಮೂಲ್ಕಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಜಯರಾಮ ಗೌಡ ಅಲ್ಲದೆ ಆರೋಗ್ಯ, ಕಂದಾಯ, ಪೊಲೀಸ್‌, ಹೆದ್ದರಿ, ಪಿಡಬ್ಲ್ಯುಡಿ, ಜಲ ಮಂಡಳಿ, ಕೃಷಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು.

ಸಿ.ಸಿ. ಕೆಮರಾ ವ್ಯವಸ್ಥೆ
ಮರಳು ಅಕ್ರಮ ಗಣಿಗಾರಿಕೆ, ಮಾದಕ ವಸ್ತುಗಳ ಸಾಗಾಟ, ವ್ಯವಹಾರಗಳು ನಡೆಯದಂತೆ ಪಂಚಾಯತ್‌ ಮಟ್ಟದ ಅಧಿಕಾರಿಗಳು, ಪೊಲೀಸ್‌ ಇಲಾಖೆಯ ಅಧಿಕಾರಿಗಳ ಕಚೇರಿಗೆ 5ರಿಂದ 6 ಸಿ.ಸಿ. ಕೆಮರಾ ಅಳವಡಿಸುವುದು ಹಾಗೂ ಅದನ್ನು ತಮ್ಮ ಕಚೇರಿಯಿಂದಲೇ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ ಬೊಳ್ಳೂರು ಅವರು ಹಳೆಯಂಗಡಿಯ ಹೆದ್ದಾರಿ, ತನ್ನ ವ್ಯಾಪ್ತಿಯ ಇತರ ಪಂಚಾಯತ್‌ಗಳ ಕುಡಿಯುವ ನೀರಿನ ಸಮಸ್ಯೆ ಮತ್ತು ಇತರ ಇಲಾಖೆಗಳ ಬಗ್ಗೆ ವಿವರಿಸಿದರು.
ಮೂಲ್ಕಿ ನ. ಪಂ.ಮಾಜಿ ಅಧ್ಯಕ್ಷ ಸುನಿಲ್‌ ಆಳ್ವ , ನ.ಪಂ. ಬಸ್‌ ನಿಲ್ದಾಣದ ಯೋಜನೆ, ರಾಷ್ಟ್ರೀಯಾ ಹೆದ್ದಾರಿಯ ಹಿನ್ನಡೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ನಗರ ಪಂಚಾಯತ್‌ನ ಗುತ್ತಿಗೆ ಆಧಾರದ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವ ಪ್ರಸ್ತಾವನೆಯನ್ನು ತತ್‌ಕಕ್ಷಣ ಕಳುಹಿಸಿಕೊಡಿ. ಸರಕಾರದ ವತಿಯಿಂದ ಲಭಿಸುವ ಬೀದಿ ವ್ಯಾಪಾರಿಗಳ ಸಾಲದ ಯೋಜನೆಗಳನ್ನು ಎಲ್ಲರಿಗೂ ಕೊಡಿಸುವಂತೆ ನ.ಪಂ.ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಯೋಜನೆ, ವಿಳಂಬ
ಕುಡಿಯುವ ನೀರಿನ ಯೋಜನೆ ನಳ್ಳಿ ಸಂಪರ್ಕದ ಕೆಲಸ ಪೂರ್ತಿಗೊಂಡಿದ್ದರೂ ನೀರಿನ ಸಂಪರ್ಕ ಪಾಲಿಕೆಯಿಂದ ಸಿಗದೇ ವಿಳಂಬವಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಪಾಲಿಕೆಯ ಅಧಿಕಾರಿ ಉತ್ತರಿಸಿ, ನಾವು ನೀರು ಸರಬರಾಜು ಮಾಡುತ್ತಿದ್ದೇವೆ ಆದರೆ ನಗರ ಪಾಲಿಕೆಗೆ ನಗರ ಪಂಚಾಯತ್‌ 75 ಲಕ್ಷ ರೂ. ಗಳಷ್ಟು ಬಿಲ್ಲು ಪಾವತಿಗೆ ಬಾಕಿ ಇದೆ ಎಂದರು. ವಿವರ ನೀಡಿದ ಸುನಿಲ್‌ ಆಳ್ವ, ಈ ನೀರಿನ ಬಿಲ್ಲನಲ್ಲಿ ಹಳೆಯಂಗಡಿ ಪಂಚಾಯತ್‌ ಟ್ಯಾಪಿಂಗ್‌ ಮಾಡಿ ನಗರ ಪಂಚಾಯತ್‌ನೊಂದಿಗೆ ಮಾತುಕತೆ ನಡೆಸಿದ್ದರೂ ಪಾವತಿಸದಿರುವುದರಿಂದ ತೊಂದರೆಯಾಗಿದೆ. ಹಳೆಯಂಗಡಿ ಪಂಚಾಯತ್‌ ನೀರು ಟ್ಯಾಪಿಂಗ್‌ ಮಾಡುತ್ತಿರುವುದನ್ನು ಅಧಿಕೃತಗೊಳಿಸಿ ಪಾವತಿಗೆ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆಗೆ ಸೂಚನೆಯನ್ನು ನೀಡುವುದಾಗಿ ಡಿಸಿ ಹೇಳಿದರು.

ಮೂಲ್ಕಿ ಹಳೆಕೋಟೆ ಆನೆಕೆರೆ ಯೋಜನೆಗೆ ತಾಂತ್ರಿಕ ತೊಂದರೆ ಇರುವುದನ್ನು ಸ್ಪಷ್ಟ ಪಡಿಸಿ, ಈ ಯೋಜನೆಯನ್ನು ಶೀಘ್ರ ಮುಗಿಸಿದಲ್ಲಿ ಮೂಲ್ಕಿಯ ನೀರಿನ ಸಮಸ್ಯೆ ಪರಿಹರಿಸಲು ಸಹಾಯವಾಗುತ್ತದೆ. ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಯೋಜನೆಯ ಕಾರ್ಯಗತಕ್ಕೆ ಪೂರಕವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.
ಶೈಲೇಶ್‌ ಕುಮಾರ್‌ ನಿರ್ವಹಿಸಿದರು. ಸುನಿಲ್‌ ಆಳ್ವ ವಂದಿಸಿದರು.

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.