ಭೀಭತ್ಸ ಘಟನೆ : ಇದ್ದ ಒಬ್ಬ ಕರುಳ ಕುಡಿಯನ್ನೇ ಕೊಚ್ಚಿ ಕೊಂದ ಮಾನಸಿಕ ಅಸ್ವಸ್ಥೆ

Team Udayavani, Jan 10, 2022, 4:28 PM IST

ಇದ್ದ ಒಬ್ಬ ಕರುಳ ಕುಡಿಯನ್ನೇ ಕೊಚ್ಚಿ ಕೊಂದ ಮಾನಸಿಕ ಅಸ್ವಸ್ಥೆ

ಎಚ್‌.ಡಿ.ಕೋಟೆ:  ಒಂದೆಡೆ ಮಕ್ಕಳನ್ನು ಪಡೆಯಲು ಪುಣ್ಯ ಮಾಡಿರಬೇಕು ಎನ್ನುತ್ತಾರೆ, ಮತ್ತೂಂದೆಡೆ ಉತ್ತಮ ತಂದೆ-ತಾಯಿಯನ್ನು ಪಡೆಯುವುದು ಪೂರ್ವಜನ್ಮದ ಪುಣ್ಯ ಎನ್ನುತ್ತಾರೆ. ಆದರೆ, ಹೆತ್ತಮ್ಮನೇ ಮಗುವನ್ನು ಮಚ್ಚಿನಿಂದ ಭೀಕರವಾಗಿ ಕೊಚ್ಚಿದಾಗ ಪರಿಸ್ಥಿತಿ ಹೇಗಿರಬೇಡ!.

ಹೀಗೆ ಮಚ್ಚಿನೇಟು ತಿಂದ ಬಾಲಕನನ್ನು ಸಂಬಂಧಿಕರು ಆಸ್ಪತ್ರೆಗೆ ಸೇರಿಸುವ ವೇಳೆ ಅಸುನೀಗಿದ್ದಾನೆ. ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದ್ದು ಮಾನಸಿಕವಾಗಿ ಅಸ್ವಸ್ಥಳಾಗಿರುವ ತಾಯಿ ಪರಾರಿಯಾಗಿದ್ದಾಳೆ. ಬೂದನೂರು ಗ್ರಾಮದ ಶಂಕರ್‌ ಮತ್ತು ಭವಾನಿ ಎಂಬ ದಂಪತಿಯ ಏಕೈಕ ಪುತ್ರ ಶ್ರೀನಿವಾಸ್‌ (4) ಮೃತಪಟ್ಟ ಬಾಲಕ. ಘಟನೆ ವೇಳೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ವೈದ್ಯರ ಸಲಹೆಯಂತೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಗೊಳಿಸಲಾಗುತ್ತಿತ್ತು.

ಏನಿದು ಘಟನೆ?: ಭವಾನಿ ಎಚ್‌.ಡಿ.ಕೋಟೆ ತಾಲೂಕಿನ ಕೆ.ಯಡತೊರೆ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದಿನಿಂದ ತವರು ಮನೆಯಲ್ಲಿಯೇ ವಾಸವಾಗಿದ್ದರು. ಕಳೆದ ಸುಮಾರು 15ದಿನಗಳ ಹಿಂದೆಯಷ್ಟೇ ಪತಿಯ ಗ್ರಾಮ ಬೂದನೂರಿಗೆ ತನ್ನ ಏಕಮಾತ್ರ ಪುತ್ರ ಶ್ರೀನಿವಾಸ್‌ ಜತೆ ಆಗಮಿಸಿದ್ದರು. ಹಲವು ದಿನಗಳ ಹಿಂದಿನಿಂದ ನನ್ನ ಮೈ ಮೇಲೆ ದೇವರು ಬರುತ್ತದೆ ಎಂದು ಮಾನಸಿಕವಾಗಿ ಅಸ್ವಸ್ಥರಾಗಿದ್ದಳೆಂದು ಗ್ರಾಮದ ಹಲವರು ಹೇಳುತ್ತಿದ್ದಾರೆ. ಘಟನೆ ಕುರಿತು ಎಚ್‌.ಡಿ.ಕೋಟೆ ಪೊಲೀಸರಿಗೆ ಸಾರ್ವಜನಿಕ ಆಸ್ಪತ್ರೆಯಿಂದ ಮಾಹಿತಿ ನೀಡಿದ್ದಾರೆ. ಎಚ್‌.ಡಿ.ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕನ ಮೇಲೆ ಮನ ಬಂದಂತೆ ಮಚ್ಚಿನಿಂದ ಹಲ್ಲೆ
ಭಾನುವಾರ ಮಧ್ಯಾಹ್ನದ ತನಕ ಶಂಕರ್‌ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಅಗತ್ಯ ವಸ್ತು ಖರೀದಿಗಾಗಿ ಮನೆಯಿಂದ ಸಮೀಪದ ಅಂಗಡಿಯತ್ತ ಧಾವಿಸಿದ್ದರು. ಅಂಗಡಿಯಿಂದ ಮರಳಿ ಮನೆಗೆ ಹಿಂದಿರುಗುವಷ್ಟರಲ್ಲಿ ಭವಾನಿ ಮಚ್ಚಿನಿಂದ ಮಗುವಿನ ತಲೆ ಭಾಗಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರಿಂದ ಬಾಲಕನ ಇಡೀ ತಲೆಯ ಭಾಗದಲ್ಲಿ ಸಾಕಷ್ಟು ಬಲವಾದ ಮಚ್ಚೇಟು ಬಿದ್ದು ನೋಡುಗರು ಭಯಭೀತರಾಗುವಂತೆ ರಕ್ತ ಸಿಕ್ತ ಗಾಯಗಳಾಗಿದ್ದವು. ಮನೆಗೆ ಬಂದ ಶಂಕರ್‌ ಘಟನೆ ಕಂಡು ಭಯಭೀತನಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಮಗುವನ್ನು ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ ಹಿನ್ನೆಲೆ ಮಗುವನ್ನು
ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರು.

ಟಾಪ್ ನ್ಯೂಸ್

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

vitlaವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

ಕೋಟ : ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟ : ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ರಾಜಸ್ಥಾನದಲ್ಲಿ ನಡೆದ ಪೈಶಾಚಿಕ ಘಟನೆಗೆ ಆರ್‌. ಅಶೋಕ್‌ ತೀವ್ರ ಆಕ್ರೋಶ

ರಾಜಸ್ಥಾನದಲ್ಲಿ ನಡೆದ ಪೈಶಾಚಿಕ ಘಟನೆಗೆ ಆರ್‌. ಅಶೋಕ್‌ ತೀವ್ರ ಆಕ್ರೋಶ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಆಕ್ಸಿಜನ್‌ ಜನರೇಟರ್‌ ಸ್ಥಾಪನೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಆಕ್ಸಿಜನ್‌ ಜನರೇಟರ್‌ ಸ್ಥಾಪನೆ

MUST WATCH

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

udayavani youtube

ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

udayavani youtube

ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಹೊಸ ಸೇರ್ಪಡೆ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.