- Friday 06 Dec 2019
ಮಕ್ಕಳಿಗೆ ಹೈಸ್ಕೂಲ್‌ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ
Team Udayavani, Nov 3, 2019, 3:06 AM IST
ಮೈಸೂರು/ಮಂಗಳೂರು: ಮಕ್ಕಳಿಗೆ ಹೈಸ್ಕೂಲ್‌ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆ ಯಬೇಕು ಎಂದು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ. ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ಜರುಗಿದ 17ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಮಾತೃಭಾಷೆ ಎಂಬುದು ನಮ್ಮ ಕಣ್ಣಿನ ದೃಷ್ಟಿ ಇದ್ದಂತೆ. ಅನ್ಯಭಾಷೆಗಳು ಕನ್ನಡಕ ಇದ್ದಂತೆ. ಅದುದರಿಂದ ಮಾತೃಭಾಷೆಯನ್ನು ಪ್ರೀತಿಸಬೇಕು.
ಪೋಷಿಸಬೇಕು. ಭಾಷಾ ಔರ್ ಭಾವನಾ ಏಕ್ ಸಾಥ್ ಚಲ್ತಾ ಹೈ (ಭಾಷೆ ಮತ್ತು ಭಾವನೆ ಜತೆಯಾಗಿ ಸಾಗುತ್ತದೆ) ಎಂದರು. ಭಾರತ ಇಂದು ಜ್ಞಾನ ಆಮದು ರಾಷ್ಟ್ರದ ಬದಲಾಗಿ ಜ್ಞಾನ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ತಂತ್ರಜ್ಞಾನಗಳಿಗೆ ವಿಶ್ವ ಇಂದು ನಮ್ಮತ್ತ ಮುಖ ಮಾಡುತ್ತಿದೆ. ಭಾರತ ಹಿಂದೆ ಹೊಂದಿದ್ದ ವಿಶ್ವಗುರು ಸ್ಥಾನ ಮರಳಿ ಸ್ಥಾಪನೆಯಾಗುವ ಗುರಿ ಸಾಧನೆಯಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಬಳಿಕ, ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹತ್ತನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಯುವ ಜನತೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡಾಗ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ ಎಂದು ಸಲಹೆ ನೀಡಿದರು.
ಕರ್ನಾಟಕದ ರಾಗಿ ಮುದ್ದೆ, ನೀರ್‌ದೋಸೆ ಎಲ್ಲೆಡೆ ಫೇಮಸ್: ಇಂಥದ್ದೇ ಆಹಾರ ತಿನ್ನಿ ಎಂದು ನಾನು ಸಲಹೆ ನೀಡಲ್ಲ. ಸಸ್ಯಾಹಾರಿಗಳು ಸಸ್ಯಾಹಾರವನ್ನು, ಮಾಂಸಹಾರಿಗಳು ಮಾಂಸಾಹಾರವನ್ನು, ಎರಡನ್ನೂ ತಿನ್ನುವವರೂ ತಿನ್ನಿ. ಆದರೆ, ಆರೋಗ್ಯದ ದೃಷ್ಟಿಯಿಂದ ಪುರಾತನ ಭಾರತದ ಆಹಾರ ಪದ್ಧತಿಗೆ ಮರಳುವುದು ಸೂಕ್ತ. ಕರ್ನಾಟಕದಲ್ಲಿ ದೊರೆಯುವ ರಾಗಿ ಮುದ್ದೆ, ನೀರ್ ದೋಸೆಯಂತಹ ಆರೋಗ್ಯಕರ ಆಹಾರ ಭಾರತದಾದ್ಯಂತ ಪ್ರಸಿದ್ಧವಾಗಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿತು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದರೂ ಅಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿತು. ರಾಜ್ಯಸಭೆಯ ಸಭಾಧ್ಯಕ್ಷನಾಗಿ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿತ್ತು.
-ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ವಿಭಾಗದಿಂದ ಇನ್ನಷ್ಟು
-
ಬೆಳಗಾವಿ: ಈರುಳ್ಳಿ ದರ ಮುಗಿಲು ಮುಟ್ಟಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಗರದ ಹೊಟೇಲ್ ನಲ್ಲಿ ಬಿರ್ಯಾಣಿ ಜೊತೆಗೆ...
-
ಬೆಂಗಳೂರು: ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಗೆಲುವು- ಸೋಲಿನ ಲೆಕ್ಕಾಚಾರದಲ್ಲಿ...
-
ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆದಿದ್ದು, ಮತದಾರ ನಿಟ್ಟುಸಿರು ಬಿಟ್ಟಿದ್ದು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ಡಿಸೆಂಬರ್...
-
ಬೆಂಗಳೂರು : ಬಾದಾಮಿ ಕ್ಷೇತ್ರದ ಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ...
-
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಪ್ರಯಾಣಿಕರ ಬಳಿಗೇ ಇನ್ನು ಮುಂದೆ ಬಿಎಂಟಿಸಿ ಬಸ್ ಬರಲಿದೆ! ರೈಲ್ವೆ ನಿಲ್ದಾಣದ ಗೇಟ್-3ರ ಮಾರ್ಗವಾಗಿ...
ಹೊಸ ಸೇರ್ಪಡೆ
-
ಕುಂಬಳೆ : ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ...
-
ಕಾಸರಗೋಡು: ತಿರುವನಂತ ಪುರದ ಕಿಳಮನ್ನೂರ್ನಲ್ಲಿ ಹೂತಿದ್ದ ರಾಜ ಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆರು ಕೋಟಿ ರೂ. ಮೊತ್ತದ ಕೇರಳ ಲಾಟರಿ ಬಂಪರ್...
-
ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ. ವೃದ್ಧಾಪ್ಯ,...
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ಮುಂಗಾರು ಹಂಗಾಮಿನಲ್ಲಿ ಖಾರಿಫ್ನ ಭತ್ತದ ಇಳುವರಿಯೂ ಚೆನ್ನಾಗಿದೆ. ಅದೇ ಹುಮ್ಮಸ್ಸಿನಲ್ಲಿ ರೈತರು ಈಗ ಹಿಂಗಾರು ಹಂಗಾಮಿಗೆ...