ಲಾಕ್ಡೌನ್ ಸಂಕಟ ಬಿಚ್ಚಿಟ್ಟ ಮೈಕಲ್ ಹೋಲ್ಡಿಂಗ್
Team Udayavani, May 4, 2020, 6:28 AM IST
ಜಾರ್ಜ್ಟೌನ್:ಇವು ತನ್ನ ಬದುಕಿನಲ್ಲೇ ಅತ್ಯಂತ ಸವಾಲಿನ ದಿನಗಳಾಗಿವೆ ಎಂಬುದಾಗಿ ವೆಸ್ಟ್ ಇಂಡೀಸಿನ ಮಾಜಿ ಘಾತಕ ವೇಗಿ ಮೈಕಲ್ ಹೋಲ್ಡಿಂಗ್ ಹೇಳಿದ್ದಾರೆ. ಕೆರಿಬಿಯನ್ನ ಕೇಮ್ಯಾನ್ ಐಲ್ಯಾಂಡ್ನಲ್ಲಿರುವ ಅವರು ಇಲ್ಲಿನ ಕಠಿನ ಲಾಕ್ಡೌನ್ ನಿಯಮಗಳ ಬಗ್ಗೆ ವಿವರಿಸಿದ್ದಾರೆ.
“ಇಲ್ಲಿನ ವಾರದ 6 ದಿನ ಎಲ್ಲವೂ ಸಿಗುತ್ತದೆ. ಬೆಳಗ್ಗೆ 7ರಿಂದ ಸಂಜೆ 5ರ ತನಕ ಬ್ಯಾಂಕಿಂಗ್, ಗ್ಯಾಸ್, ಮೆಡಿಕಲ್ಸ್, ಗ್ಯಾಸ್ ಸ್ಟೇಷನ್… ಎಲ್ಲ ಸೇವೆಯೂ ಲಭ್ಯ. ಆದರೆ ವ್ಯವಹಾರ ಮಾತ್ರ ಅಷ್ಟು ಸುಲಭವಲ್ಲ…’ ಎನ್ನುತ್ತಾರೆ ಹೋಲ್ಡಿಂಗ್.
“ಸರ್ನೇಮ್ ನ ಮೊದಲ ಅಕ್ಷರವೇ ಇಲ್ಲಿನ ಮಾನದಂಡ. “ಎ’ಯಿಂದ “ಕೆ’ ವರೆಗಿನವರಿಗೆ ಸೋಮ, ಬುಧ, ಶುಕ್ರವಾರ; “ಎಲ್’ನಿಂದ “ಝಡ್’ವರೆಗಿನ ಸರ್ನೇಮ್ ಹೊಂದಿದವರು ಮಂಗಳ, ಗುರು, ಶನಿವಾರವಷ್ಟೇ ವ್ಯವಹಾರ ಮಾಡಬೇಕು. ಸಿಕ್ಕಿಬಿದ್ದರೆ 250ರಿಂದ 750ರಷ್ಟು ಡಾಲರ್ ದಂಡವನ್ನು ಸ್ಥಳದಲ್ಲೇ ಕಟ್ಟಬೇಕು’ ಎಂಬುದಾಗಿ ಹೋಲ್ಡಿಂಗ್ ವಿವರಿಸಿದ್ದಾರೆ.
“ನಾನು ಟಿವಿ ಹೆಚ್ಚು ನೋಡುವುದಿಲ್ಲ. ಸುದ್ದಿಗಳಂತೂ ಖನ್ನತೆಗೆ ಒಯ್ಯುತ್ತವೆ. ಹೀಗಾಗಿ ದಿನದಲ್ಲಿ ಏಳೆಂಟು ಗಂಟೆಗಳ ಕಾಲ ವ್ಯಾಟ್ಸ್ಅಪ್ ಮೂಲಕ ವಿಶ್ವದೆಲ್ಲೆಡೆಯ ಸ್ನೇಹಿತರ ಸಂಪರ್ಕದಲ್ಲಿರುತ್ತೇನೆ’ ಎನ್ನುತ್ತಾರೆ ಹಾಲಿ ಕಮೆಂಟೇಟರ್ ಹೋಲ್ಡಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!