Congress: ಚುನಾವಣೆಗೆ ಖರ್ಗೆ ಟೀಂ ಸಿದ್ಧ: ಐದು ವಿಧಾನಸಭೆ, ಲೋಕಸಭೆ ಚುನಾವಣೆಯೇ ಪ್ರಧಾನ


Team Udayavani, Aug 20, 2023, 8:32 PM IST

KHARGE

ನವದೆಹಲಿ: ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಿದ ಹುಮ್ಮಸ್ಸಿನಲ್ಲಿಯೇ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಲು ಸಿದ್ಧತೆ ನಡೆಸುತ್ತಿದೆ. ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಪೂರ್ವ ಮತ್ತು ಪಶ್ಚಿಮದಂತೆ ವ್ಯವಹರಿಸುತ್ತಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಶಾಸಕ ಸಚಿನ್‌ ಪೈಲಟ್‌ ನಡುವೆ ಹಾಗೂ ಹೀಗೂ ಹೊಂದಾಣಿಕೆ ಮಾಡುವಲ್ಲಿ ವರಿಷ್ಠರು ಸದ್ಯಕ್ಕೆ ಸಫ‌ಲಗೊಂಡಿದ್ದಾರೆ. ಹೀಗಾಗಿ, ವರ್ಷಾಂತ್ಯದಿಂದ ಮುಂದಿನ ವರ್ಷದ ಏಪ್ರಿಲ್‌-ಮೇ ವರೆಗೆ ನಡೆಯಲಿರುವ ಚುನಾವಣೆಗಾಗಿ ಖರ್ಗೆ ಮತ್ತು ತಂಡ ಸಿದ್ಧಗೊಂಡಂತಾಗಿದೆ.

ಅದಕ್ಕೆ ಪೂರಕವಾಗಿ ಭಾನುವಾರ ಪುನಾರಚಿಸಲಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಯಲ್ಲಿ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ಗೆ ವಿಶೇಷ ಸ್ಥಾನವನ್ನೂ ಕಲ್ಪಿಸಿಕೊಡಲಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಂಭತ್ತನಾಲ್ಕು ಮಂದಿಯ ಪೈಕಿ ಮತ್ತೂಬ್ಬ ಪ್ರಮುಖರೆಂದರೆ ಹತ್ತು ತಿಂಗಳ ಹಿಂದೆ ನಡೆದಿದ್ದ ಎಐಸಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಬಗ್ಗೆ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದ ತಿರುವನಂತಪುರ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್‌. ಖರ್ಗೆಯವರು ಮುಂದಿನ ಚುನಾವಣೆಗಳನ್ನು ದೃಷ್ಟಿಯನ್ನು ಇರಿಸಿಕೊಂಡು ಹೊಸ ತಂಡ ರಚಿಸಿದ್ದಾರೆ ಎನ್ನುವುದು ಸ್ಪಷ್ಟ. ರಾಜಸ್ಥಾನದಲ್ಲಿ ಪೈಲಟ್‌ ಅವರಿಗೆ ಮಾಧ್ಯಮ ವಿಭಾಗದ ದೊಡ್ಡ ಹೊಣೆಯನ್ನೇ ನೀಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಸಚಿನ್‌ ಪೈಲಟ್‌ ಅವರನ್ನು ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಗೆದ್ದರೆ ಪೈಲಟ್‌ ಅವರೇ ಸಿಎಂ ಆಗಲಿದ್ದಾರೆ ಎಂಬ ಖಾತರಿ ಆಗಿಲ್ಲವೆನ್ನುವುದು ಸ್ಪಷ್ಟ.

2 ಸವಾಲುಗಳು:
ಸಿಡಬ್ಲೂಸಿಯಲ್ಲಿರುವ ಹೊಸ ತಂಡಕ್ಕೆ ಎರಡು ಪ್ರಮುಖ ಸವಾಲುಗಳಿವೆ. ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ತೆಲಂಗಾಣ ವಿಧಾನಸಭೆ ಚುನಾವಣೆಗಳಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು, ಎರಡನೇಯದಾಗಿ ಪ್ರತಿಪಕ್ಷಗಳ ಮೈತ್ರಿಕೂಟ ಐ.ಎನ್‌.ಡಿ.ಐ.ಎ ರಚನೆ ಮಾಡುವಲ್ಲಿ ಕಾಂಗ್ರೆಸ್‌ನ ಮೂಲ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ. ಇಷ್ಟು ಮಾತ್ರವಲ್ಲದೆ ಆಪ್‌ ಮತ್ತು ಟಿಎಂಸಿ ಜತೆಗೆ ಇರುವ ಬಾಂಧವ್ಯ ಇನ್ನೂ ಸುಧಾರಿಸಬೇಕಾಗಿದೆ.

ಕಾಂಗ್ರೆಸ್‌ನ ಭಿನ್ನಮತೀಯ ಗುಂಪಿನ ಸದಸ್ಯರಾಗಿರುವ ಶಶಿ ತರೂರ್‌, ಆನಂದ ಶರ್ಮಾ, ಮುಕುಲ್‌ ವಾಸ್ನಿಕ್‌ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮಹತ್ವಪಡೆದುಕೊಂಡಿದೆ.

ಗೌರವ ತಂದಿದೆ:
ಪಕ್ಷದ ಮಹತ್ವದ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡ ಬಗ್ಗೆ ಮೈಕ್ರೋಬ್ಲಾಗಿಂಗ್‌ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡ ತರೂರ್‌ “ವಿನೀತನಾಗಿದ್ದೇನೆ ಮತ್ತು ಎಐಸಿಸಿ ಅಧ್ಯಕ್ಷ ಖರ್ಗೆಯವರ ನಿರ್ಧಾರವನ್ನು ಸ್ವೀಕರಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. 138 ವರ್ಷಗಳ ಪಕ್ಷಕ್ಕೆ ಸಿಡಬ್ಲೂéಸಿ ದಾರಿದೀಪ ತೋರಿಸುತ್ತದೆ ಎಂದೂ ಬರೆದುಕೊಂಡಿದ್ದಾರೆ.

ಮೂವರು ಮಾತ್ರ:
ಇದೇ ವೇಳೆ, ಹೊಸಬರಿಗೆ ಮತ್ತು ಯುವಕರಿಗೆ ಅವಕಾಶ ನೀಡಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದ್ದರೂ, 39 ಮಂದಿ ಸದಸ್ಯರು ಇರುವ ಸಿಡಬ್ಲೂéಸಿಯಲ್ಲಿ 50 ವರ್ಷಕ್ಕಿಂತ ಕೆಳಗೆ ಇರುವ ಮುಖಂಡರು ಮೂವರು ಮಾತ್ರ. ಅವರೆಂದರೆ ಸಚಿನ್‌ ಪೈಲಟ್‌, ಗೌರವ್‌ ಗೊಗೊಯ್‌ ಮತ್ತು ಕಮಲೇಶ್ವರ ಪಟೇಲ್‌. ಮತ್ತೂಂದೆಡೆ, ಉತ್ತರ ಪ್ರದೇಶದ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ಅವರನ್ನು ಬೇರೆ ರಾಜ್ಯದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಲು ನಿಯೋಜನೆ ಮಾಡುವ ಸಾಧ್ಯತೆಗಳು ಕಡಿಮೆ ಎಂದು ಕಾಂಗ್ರೆಸ್‌ನ ಮೂಲಗಳ ಹೇಳಿಕೆ.

ಟಾಪ್ ನ್ಯೂಸ್

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

HD Revanna granted bail in domestic worker abuse case

HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

A person who voted for a BJP candidate eight times; The video went viral

Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-aaaaa

Shirva: ಭದ್ರಾವತಿ ಮೂಲದ ವೃದ್ಧೆ ನಾಪತ್ತೆ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-wewewqe

Madikeri; ಕಾಡುಕೋಣ ಬೇಟೆ: 549 ಕೆ.ಜಿ ಮಾಂಸ ಸೇರಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.