ಸಚಿವ ಕೋಟ ಹುಟ್ಟೂರು, ಮನೆಯಲ್ಲಿ ಸಂಭ್ರಮಾಚರಣೆ
Team Udayavani, Aug 4, 2021, 8:39 PM IST
ಕೋಟ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭ ಹುಟ್ಟೂರು ಕೋಟದಲ್ಲಿ ಸಂಭ್ರಮ ಮನೆಮಾಡಿತ್ತು.
ಕಾರ್ಯಕರ್ತರು ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಪೂಜಾರಿಯವರ ಪತ್ನಿ ಶಾಂತ ಶ್ರೀನಿವಾಸ ಪೂಜಾರಿ ಅವರು ಕೋಟದ ತನ್ನ ಮನೆಯಲ್ಲಿ ಪುತ್ರಿಯರಾದ ಸ್ವಾತಿ, ಶ್ರುತಿಯೊಂದಿಗೆ ಟಿವಿ ಮೂಲಕ ಪ್ರಮಾಣವಚನ ಸ್ವೀಕಾರ ಕ್ಷಣವನ್ನು ಕಣ್ತುಂಬಿಕೊಂಡರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಪತಿ ಈಗಾಗಲೇ ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರ ಕಾರ್ಯಾವೈಖರಿಯನ್ನು ಗುರುತಿಸಿ ಪಕ್ಷ ಮತ್ತೊಮ್ಮೆ ಜವಬ್ದಾರಿ ನೀಡಿದೆ ಹಾಗೂ ಈ ಬಾರಿ ಕೂಡ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂದರು.
ಶ್ರೀನಿವಾಸ ಪೂಜಾರಿಯವರ ತಾಯಿ 94 ವರ್ಷದ ಲಚ್ಚಿ ಪೂಜಾರಿ ಅವರು ಬಾರಿಕೆರೆಯಲ್ಲಿರುವ ಮೂಲಮನೆಯಲ್ಲಿ ವಾಸವಾಗಿದ್ದು, ತನ್ನ ಪುತ್ರಿ ಕಮಲ ಹಾಗೂ ಮೊಮ್ಮಗ ರಾಘವೇಂದ್ರ ಪೂಜಾರಿಯವರೊಂದಿಗೆ ಟಿವಿ ಮೂಲಕ ಪ್ರಮಾಣವಚನ ಸ್ವೀಕಾರ ಕ್ಷಣವನ್ನು ಕಣ್ತುಂಬಿಕೊಂಡರು. “ನನ್ನ ಮಗ ಮೂರನೇ ಸಲ ಮಂತ್ರಿ ಆದ್ ಭಾರೀ ಖುಷಿಯಾಯ್ತ್; ದೇವ್ರ್ ಅವನಿಗೆ ಇನ್ನೂ ಒಳ್ಳೆದ್ ಮಾಡ್ಲಿ; ಇನ್ನೂ ಹೆಚ್ಚಿನ ಕೆಲಸ ಮಾಡು ತಾಕತ್ ಕೊಡ್ಲಿ” ಎಂದು ಲಚ್ಚಿ ಅಜ್ಜಿ ಹಾರೈಸಿದರು. ಅಭಿಮಾನಿಗಳು ಕೋಟ ಪೇಟೆಯಲ್ಲಿ ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಾಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ