Udayavni Special

ಮಾವಿನ ಬೆಳೆಗೆ ಅಕಾಲಿಕ ಮಳೆ ಕರಿನೆರಳು : ಭರ್ಜರಿ ಇಳುವರಿ ಕನಸು ಈಗ ನುಚ್ಚುನೂರು

Team Udayavani, Jan 18, 2021, 3:21 PM IST

ಮಾವಿನ ಬೆಳೆಗೆ ಅಕಾಲಿಕ ಮಳೆ ಕರಿನೆರಳು : ಭರ್ಜರಿ ಇಳುವರಿ ಕನಸು ಈಗ ನುಚ್ಚುನೂರು

ಹಾವೇರಿ: ಪ್ರತಿ ವರ್ಷ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ನಾಲ್ಕಾರು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ಬರೆ ಎಳೆದಿದ್ದು, ಭರ್ಜರಿ ಇಳುವರಿ ಕನಸು ಕಂಡಿದ್ದ ಮಾವು ಬೆಳೆಗಾರರು ಆತಂಕಕ್ಕೊಳಗಾಗುವಂತೆ ಮಾಡಿದೆ.

ಜಿಲ್ಲಾದ್ಯಂತ ಕಳೆದ ನಾಲ್ಕಾರು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ಮಾವು ಬೆಳೆಗಾರರ ಆತಂಕ ಹೆಚ್ಚಿಸಿದೆ. ಕೆಲ ದಿನಗಳ
ಹಿಂದೆ ಜೋರಾದ ಚಳಿ ವಾತಾವರಣದಿಂದ  ಮಾವಿನ ಮರಗಳಲ್ಲಿ ಹಸಿರೆಲೆ ಕಾಣದಷ್ಟು ಹೂಬಿಟ್ಟಿದ್ದವು. ಕೆಲ ಗಿಡಗಳಲ್ಲಿ ಕಡಲೆ ಗಾತ್ರದ ಮಿಡಿಗಾಯಿಗಳಾಗಿದ್ದವು. ಎರಡೂ¾ರು ತಿಂಗಳಲ್ಲಿ ಭಾರೀ ಇಳುವರಿ ನಿರೀಕ್ಷೆ ಹೊಂದಲಾಗಿತ್ತು. ಮುಂಗಾರು ಬೆಳೆ ಕೈಕೊಟ್ಟರೂ ಮಾವು ಕೈಹಿಡಿಯುವ ಆಶಾವಾದ ಹೊಂದಿದ್ದರು. ಆದರೆ, ಅನಿರೀಕ್ಷಿತವಾಗಿ ಸುರಿದ ಮಳೆ ಮಾವುಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕ್ರೀಡಾಂಗಣ ಮೇಲ್ಛಾವಣಿ ನಿರ್ಮಾಣ ಕಾರ್ಯ ಚುರುಕು

ರೈತರಲ್ಲಿ ನಷ್ಟದ ಆತಂಕ: ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಗರಿಷ್ಠ 3200 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಶಿಗ್ಗಾವಿ ತಾಲೂಕಿನಲ್ಲೂ 1500 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 5,700 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ಈ ಭಾಗದಲ್ಲಿ ಪ್ರತಿ ಹೆಕ್ಟೇರ್‌ಗೆ 18ರಿಂದ 20 ಟನ್‌ ಮಾವು ಉತ್ಪಾದನೆಯಾಗುತ್ತದೆ. ಜಿಲ್ಲೆಯಲ್ಲಿ ವಾರ್ಷಿಕ 1.20 ಲಕÒ‌ ಟನ್‌ಗೂ ಹೆಚ್ಚು ಮಾವಿನ ಹಣ್ಣು ಬೆಳೆದು, ರಫ್ತು ಮಾಡಲಾಗುತ್ತದೆ. ಅದು ಈ ಬಾರಿ ಮತ್ತಷ್ಟು ಹೆಚ್ಚಿ ಸುಮಾರು 1.50 ಲಕÒ‌ ಟನ್‌ ಮಾವು ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿತ್ತು.
ಕಳೆದ ವರ್ಷ ಮಾವು ಬೆಳೆ ಕಡಿಮೆಯಿದ್ದರೂ ಇದ್ದ ಬೆಳೆಯನ್ನೂ ಮಾರಾಟ ಮಾಡಲಾಗದೇ ಬೆಳೆಗಾರರು ನಷ್ಟ ಅನುಭವಿಸಿದ್ದರು. ಮಾವಿನ ಸೀಸನ್‌ ವೇಳೆಯೇ ಕೊರೊನಾ ಸೋಂಕು ಆರಂಭವಾಗಿ ಲಾಕ್‌ಡೌನ್‌ ಮಾಡಲಾಗಿತ್ತು. ಇದರಿಂದ ಇದ್ದ ಬೆಳೆಯನ್ನು ಸಾಗಿಸಲೂ ಆಗದೇ, ಮಾರುಕಟ್ಟೆಗೂ ಒಯ್ಯಲಾಗದೇ ರೈತರು ನಷ್ಟ ಅನುಭವಿಸಿದ್ದರು. ಈ ಸಲವಾದರೂ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿರುವ ರೈತರಿಗೆ ಅನಿರೀಕ್ಷಿತ ಮಳೆ ನಷ್ಟಕ್ಕೆ ನೂಕಿದೆ.

5,700 ಹೆಕ್ಟೇರ್‌ ಪ್ರದೇಶದಲ್ಲಿ ಮಾವು
ಜಿಲ್ಲೆಯ 5,700 ಹೆಕ್ಟೇರ್‌ ಪ್ರದೇಶದಲ್ಲಿ ಗುಣಮಟ್ಟದ ಮಾವು ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳೆಗಾರರ ಸಂಖ್ಯೆ ಹೆಚ್ಚಿದ್ದು, ಇಲ್ಲಿಯ ಆಪೂಸು ತಳಿಯ ಮಾವಿನ ಹಣ್ಣಿಗೆ ವಿವಿಧೆಡೆ ಹೆಚ್ಚಿನ ಬೇಡಿಕೆಯೂ ಇದೆ. ಇಲ್ಲಿಯ ಮಾವಿಗೆ ಬ್ರಾಂಡ್‌
ನೀಡಲಾಗಿದ್ದು, ವರದಾ ನದಿ ತೀರದ ಆಪೂಸು ಜಾತಿಯ ಮಾವಿಗೆ ವರದಾ ಗೋಲ್ಡ್‌ ಎಂದು ಬ್ರಾಂಡ್‌ ಮಾಡಿ ಮಾರುಕಟ್ಟೆ ಮಾಡಲಾಗುತ್ತಿದೆ. ಹಾನಗಲ್ಲ ಭಾಗದ ರೈತರು ಮಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಪಕ್ಕದ ಮಹಾರಾಷ್ಟ್ರದ
ಜ್ಯೂಸ್‌ ಫ್ಯಾಕ್ಟರಿಗಳಿಗೆ ಇಲ್ಲಿಯ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.

ಟಾಪ್ ನ್ಯೂಸ್

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಜಾಲತಾಣಗಳಿಂದ ಭಜರಂಗ್‌ ದೂರ

ಜಾಲತಾಣಗಳಿಂದ ಭಜರಂಗ್‌ ದೂರ

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ

yatnal

ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್‌

shidlaghata

ಶಿಡ್ಲಘಟ್ಟ: ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ ; ಕ್ಲೀನರ್ ಸಾವು, ದೇಗುಲಕ್ಕೆ ಹಾನಿ

ಚಿಕ್ಕಬಳ್ಳಾಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಕೆರೆಗೆ ಹಾರಿ ಆತ್ಮಹತ್ಯೆ

ಅನಾರೋಗ್ಯ : ಮನನೊಂದ ಯುವಕ ಕಂದವಾರ ಕೆರೆಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

ಹೊಸ ಸೇರ್ಪಡೆ

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕೊಳತ್ತೂರಿನಿಂದ ಸ್ಟಾಲಿನ್‌, ಚೆಪಾಕ್‌ನಿಂದ ಉದಯನಿಧಿ ಸ್ಪರ್ಧೆ?

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ರಾಜ್ಯ ನಾಯಕರಿಗೆ ತಮಿಳುನಾಡು ಹೊಣೆ : AIADMK ಮೈತ್ರಿ ಕೂಟ ಅಧಿಕಾರಕ್ಕೆ ತರಲು ಬಿಜೆಪಿ ಶ್ರಮ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.