Mahalingapura: ಘಟಪ್ರಭಾ ಎಡದಂಡೆ ಕಾಲುವೆಗೆ ಸಚಿವ ಸತೀಶ ಜಾರಕಿಹೋಳಿ ಭೇಟಿ

ಘಟಪ್ರಭಾ ಮುಖ್ಯಕಾಲುವೆ ಕೊನೆ ಹಂತದವರೆಗೆ ನೀರು ಹರಿಸಲು ಅಧಿಕಾರಿಗಳಿಗೆ ನಿರ್ದೇಶನ

Team Udayavani, Jan 7, 2024, 7:59 PM IST

stsh

ಮಹಾಲಿಂಗಪುರ: ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದ ಹತ್ತಿರದ ಘಟಪ್ರಭಾ ಎಡದಂಡೆ ಕಾಲುವೆಯ ಚಿಮ್ಮಡ ಚೌಕಿಗೆ ರವಿವಾರ ಘಟಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು, ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬಿಎಲ್‌ಬಿಸಿಯ ಘಟಪ್ರಭಾ, ಜಮಖಂಡಿ, ಬೀಳಗಿ ವಿಭಾಗದ ಅಧಿಕಾರಿಗಳೊಂದಿಗೆ ಮತ್ತು ರೈತರೊಂದಿಗೆ ಮಾತನಾಡಿದ ಅವರು ಈ ವರ್ಷ ಬರಗಾಲ ಇರುವ ಕಾರಣ ಪ್ರತಿವರ್ಷದಂತೆ ಹಿಡಕಲ್ ಜಲಾಶಯದಿಂದ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದೇ ಜನವರಿ 1 ರಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಘಟಪ್ರಭಾ ಎಡದಂಡೆ ಕಾಲುವೆಗೆ ಸಂಬಂಧಿಸಿದ ಅಕಾರಿಗಳು ಆದ್ಯತೆಯ ಮೇರೆಗೆ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮಗಳಲ್ಲಿನ ಕೆರೆಗಳನ್ನು ತುಂಬಿಸುವದರ ಜೊತೆಗೆ ಘಟಪ್ರಭಾ ಎಡದಂಡೆ ಮುಖ್ಯಕಾಲುವೆಯ ಕೊನೆಯ ಹಂತ (ಬೀಳಗಿ ವಿಭಾಗ) ದವರೆಗೂ ನೀರನ್ನು ಹರಿಸಲು ಅಧಿಕಾರಿಗಳೊಂದಿಗೆ ರೈತರು ಸಹಕಾರ ನೀಡಬೇಕಾಗಿದ್ದು ಅವಶ್ಯವಾಗಿದೆ ಎಂದರು.

ಸದ್ಯ ಹಿಡಕಲ್ ಜಲಾಶಯದಲ್ಲಿ 34 ಟಿಎಂಸಿ ನೀರು ಲಭ್ಯವಿದ್ದು, ಬೆಳಗಾವಿ ನಗರ ಸೇರಿದಂತೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನ-ಜಾನುವಾರುಗಳಿಗೆ ಬೆಸುಗೆ ಕಾಲದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕಾಗಿದೆ. ಸಾರ್ವಜನಿಕರು ಸಹ ಅನಾವಶ್ಯಕವಾಗಿ ನೀರು ಪೋಲಾಗದಂತೆ ನೀರನ್ನು ಮಿತವಾಗಿ ಬಳಸುವದು ಅನಿವಾರ್ಯವಾಗಿದೆ ಎಂದರು.
ಕುಡಿಯುವ ಉದ್ದೇಶಕ್ಕಾಗಿ ಈಗ ಘಟಪ್ರಭಾ ಎಡದಂಡೆ ಹರಿಸುತ್ತಿರುವ ನೀರನ್ನು ಜ.15 ರವರೆಗೆ ಹರಿಸಲಾಗುವದು. ಜಿಎಲ್‌ಬಿಸಿ ಜಮಖಂಡಿ ವೃತ್ತದ ಅಡಿಯಲ್ಲಿ ಬರುವ ಎಲ್ಲಾ ವಿಭಾಗದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಬೀಳಗಿ ಕೊಣೆಯ ಭಾಗದವರೆಗೆ ಸಮರ್ಪಕ ನೀರು ಪೋರೈಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳಬೇಕು ಅವಶ್ಯವೆನಿಸಿದರೆ ಇತರೆ ಇಲಾಖೆಗಳ ಸಹಕಾರ ಪಡೆದು ಎಲ್ಲ ಭಾಗಗಳ ಕೆರೆ, ಬಾಂದಾರ, ಚೆಕ್ ಡ್ಯಾಂಗಳು ಭರ್ತಿಯಾಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಈ ಭಾಗದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ ಇನ್ನು ಕೆಲವು ಕೆರೆಗಳಿಗೆ ನೀರು ಪೋರೈಕೆಯಾಗುತ್ತಿಲ್ಲ ರಾಯಭಾಗ ಭಾಗದಿಂದ ಈ ಕೆಳಗಿನ ಭಾಗಕ್ಕೆ ನೀರು ಸಮರ್ಪಕವಾಗಿ ಬರುತ್ತಿಲ್ಲ ಹೀಗಾಗಿ ಬೀಳಗಿ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಹಲವು ರೈತರು ಅಧಿಕಾರಿಗಳು ಸಚಿವರಿಗ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ ನೀರು ತಲುಪಿದ ಭಾಗದಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ, ತಲುಪದ ಕಡೆ ಮಾತ್ರ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತೇರದಾಳ ಮತಕ್ಷೇತ್ರದ ಮುಖಂಡ ಸಿದ್ದು ಕೊಣ್ಣುರ, ಬೆಳಗಾವಿಯ ನೀರಾವರಿ ಉತ್ತರ ವಲಯದ ಮುಖ್ಯ ಅಭಿಯಂತರ ಬಿ.ಆರ್.ರಾಠೋಡ, ಜಿಎಲ್‌ಬಿಸಿ ಜಮಖಂಡಿ ವೃತ್ತದ ಅಧಿಕ್ಷಕ ಅಭಿಯಂತರ ಪ್ರಶಾಂತ ಗಿಡಪ್ಪನವರ, ಜಮಖಂಡಿ ಕಾರ್ಯನಿರ್ವಾಹಕ ಅಭಿಯಂತರ ಶ್ರೀಶೈಲ ಕಲ್ಯಾಣಿ, ರಬಕವಿ ಜಿಎಲ್‌ಬಿಸಿ ಎಇಇ ಚೇತನ ಅಬ್ಬಿಗೇರಿ, ಮಹಾಲಿಂಗಪುರ ಜಿಎಲ್‌ಬಿಸಿ ಎಇಇ ವೆಂಕಟೇಶ ಬೆಳಗಲ್, ಬೀಳಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಚ್.ಆರ್.ಮಾರಡ್ಡಿ, ಘಟಪ್ರಭಾ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ ಕೋಲಕರ, ರಬಕವಿ ಎಇ ಶ್ರೀಧರ ನಂದಿಹಾಳ, ಕಾಂಗ್ರೆಸ್ ಮುಖಂಡರಾದ ಮಲ್ಲಪ್ಪಾ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಉಮೇಶ ಪೂಜಾರಿ, ಅಶೋಕ ಧಡೂತಿ, ಭೀಮಸಿ ಸಸಾಲಟ್ಟಿ, ಕಿರಣ ಕರಲಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತ ಮುಖಂಡರು, ಜಿಎಲ್‌ಬಿಸಿ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

1-kanwar

UP Police;ಕನ್ವರ್‌ ಯಾತ್ರೆ ಮಾರ್ಗದ ಹೊಟೇಲ್‌ ಮಾಲಕರ ಹೆಸರು ಪ್ರದರ್ಶನ ಕಡ್ಡಾಯ!

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

modi (4)

J&K ಉಗ್ರ ನಿಗ್ರಹಕ್ಕೆ ಹೆಚ್ಚು ಪಡೆ ನಿಯೋಜಿಸಿ: ಪ್ರಧಾನಿ ಮೋದಿ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahalingapur: ತಾಯಿ ಮಗಳ ಸಜೀವ ದಹನ ಪ್ರಕರಣ… ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Mahalingapur: ತಾಯಿ ಮಗಳ ಸಜೀವ ದಹನ ಪ್ರಕರಣ… ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Road Mishap: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ… ಓರ್ವ ಬಾಲಕಿ ಸ್ಥಳದಲ್ಲಿಯೇ ಮೃತ್ಯು

Road Mishap: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ… ಓರ್ವ ಬಾಲಕಿ ಸ್ಥಳದಲ್ಲಿಯೇ ಮೃತ್ಯು

Muharram Celebrations ಸಂಭ್ರಮ ಸಡಗರದಿಂದ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ

Muharram Celebrations ಸಂಭ್ರಮ ಸಡಗರದಿಂದ ನಡೆದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ

8-rabakavi

Rabakavi-Banahatti: ಹಿಪ್ಪರಗಿ ಜಲಾಶಯಕ್ಕೆ 75460 ಕ್ಯೂಸೆಕ್ ನೀರು

1-ranna

Mahalingpur; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಮರಿದ ಶಬಾನಾಳ ಖಾಕಿ ಕನಸು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-wqewqewq

Mauritius ನಲ್ಲಿಯೂ ಭಾರತದ ಜನೌಷಧ ಕೇಂದ್ರ

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Suicide 3

Temple; ತಮಟೆ ಬಾರಿಸಲು ಹೋಗದ್ದಕ್ಕೆ ದಲಿತರಿಗೆ ಬಹಿಷ್ಕಾರ!

Suspended

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

Bhagavant mann

AAP; ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.