ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಕೊಠಡಿಯಲ್ಲಿ ಹಾವು ಪ್ರತ್ಯಕ್ಷ
Team Udayavani, Jan 21, 2022, 5:21 PM IST
ಮುಂಬಯಿ : ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರ ಕೊಠಡಿಯಲ್ಲಿ ಶುಕ್ರವಾರ ಬೆಳಗ್ಗೆ ಹಾವೊಂದು ಪತ್ತೆಯಾಗಿದೆ.
ಮೂರು ಅಂತಸ್ತಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿರುವ ನ್ಯಾಯಮೂರ್ತಿ ಎನ್ ಆರ್ ಬೋರ್ಕರ್ ಅವರ ಚೇಂಬರ್‌ನಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ 4.5 ರಿಂದ 5 ಅಡಿ ಉದ್ದದ ಹಾವು ನ್ಯಾಯಾಲಯದ ಸಿಬ್ಬಂದಿಗೆ ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ವೇಳೆ ನ್ಯಾಯಾಧೀಶರು ಕೊಠಡಿಯಲ್ಲಿರಲಿಲ್ಲ.
ಸರೀಸೃಪಗಳನ್ನು ರಕ್ಷಿಸುವಲ್ಲಿ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಮರುಪರಿಚಯಿಸುವಲ್ಲಿ ಪರಿಣತಿ ಹೊಂದಿರುವ ಎನ್‌ಜಿಒ ‘ಸರ್ಪಮಿತ್ರ’ ಸಂಸ್ಥೆಯ ಸದಸ್ಯರನ್ನು ಪೊಲೀಸರು ಸ್ಥಳಕ್ಕೆ ಕರೆಸಿದ್ದಾರೆ. ವಿಷರಹಿತ ಹಾವನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದಿಂದಾಗಿ ಹೈಕೋರ್ಟ್ ಪ್ರಸ್ತುತ ವರ್ಚುಯಲ್ ಆಗಿ ವಿಚಾರಣೆಗಳನ್ನು ನಡೆಸುತ್ತಿದೆ, ಇದು ಆವರಣದಲ್ಲಿ ಜನ ಸಂಚಾರ ಕಡಿಮೆ ಯಾಗಲು ಕಾರಣವಾಗಿದ್ದು, ಹಾವು ಪ್ರವೇಶಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀರಿನ ಸಮಸ್ಯೆ ಇದ್ದರೂ ಡೆವಲಪರ್ಗಾಗಿ ನೀರು ಕಾಯ್ದಿರಿಸಿದ ಸರಕಾರ
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ