ನಗರಸಭೆ ಶೇ. 15ರಷ್ಟು ತೆರಿಗೆ ಹೆಚ್ಚಳ

ಆನ್‌ಲೈನ್‌ ತೆರಿಗೆ ಪಾವತಿಗೆ ಅವಕಾಶ

Team Udayavani, Apr 19, 2020, 5:44 AM IST

ನಗರಸಭೆ ಶೇ. 15ರಷ್ಟು ತೆರಿಗೆ ಹೆಚ್ಚಳ

ಸಾಂದರ್ಭಿಕ ಚಿತ್ರ..

ಉಡುಪಿ: ಉಡುಪಿ ನಗರಸಭೆ 2020-21ನೇ ಸಾಲಿನ ತೆರಿಗೆ ಪರಿಷ್ಕೃತಗೊಳಿಸಿದ್ದು, ಶೇ. 15ರಷ್ಟು ತೆರಿಗೆ ಏರಿಕೆ ಮಾಡಿದೆ. ಸಾರ್ವಜನಿಕರಿಗೆ ಆನ್‌ಲೈನ್‌ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ.

3 ವರ್ಷಕ್ಕೊಮ್ಮೆ ಪರಿಷ್ಕರಣೆ‌
ಮೂರು ವರ್ಷಕ್ಕೊಮ್ಮೆ ನಗರಸಭೆ ತೆರಿಗೆಯನ್ನು ಪರಿಷ್ಕೃತಗೊಳಿಸುತ್ತದೆ. ಅದರ ಅನ್ವಯ ಕನಿಷ್ಠ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಬಹುದಾಗಿದೆ. ನಗರಸಭೆ 2008-09, 2011-12, 2014-15, 2017-18ರಲ್ಲಿ ತೆರಿಗೆಯನ್ನು ಪರಿಷ್ಕೃತಗೊಳಿಸಿತ್ತು. ಇದೀಗ ನಗರಸಭೆ ತೆರಿಗೆ ಪರಿಷ್ಕೃತಗೊಳಿಸಲಾಗಿದ್ದು, ಅದರ ಅನ್ವಯ ನಗರಸಭೆ 2020-21ನೇ ಸಾಲಿನಲ್ಲಿ ತೆರಿಗೆಯನ್ನು ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿದಾರರು ಪ್ರಸಕ್ತ ಸಾಲಿನ ಶೇ.15ರಷ್ಟು ಹೆಚ್ಚಳ ದೊಂದಿಗೆ ತೆರಿಗೆ ಪಾವತಿ ಮಾಡಬೇಕಾಗಿದೆ.

ಆನ್‌ಲೈನ್‌ ತೆರಿಗೆ ಪಾವತಿಗೆ ಹೇಗೆ?
ಕೋವಿಡ್‌-19 ಭೀತಿಯಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದುಗೊಳಿಸಲಾಗಿದ್ದು, ಉಡುಪಿ ನಗರಸಭೆ ವ್ಯಾಪ್ತಿಯ ಜನರು ಮನೆಯಲ್ಲಿ ಕುಳಿತುಕೊಂಡು ತೆರಿಗೆಯನ್ನು ಪಾವತಿ ಮಾಡ ಬಹುದಾಗಿದೆ. ನಗರಸಭೆಯ ವೈಬ್‌ ಸೆೈಟ್‌ http://www.udupicity.mrc.gov.in/ನಲ್ಲಿ ಆಸ್ತಿ ತೆರಿಗೆ ಗಣಕ ತಂತ್ರಾಂಶವನ್ನು ಆಯ್ಕೆ ಮಾಡಬೇಕು. ಆಸ್ತಿ ವಿವರವನ್ನು ಭರ್ತಿ ಮಾಡಿದ ಬಳಿಕ ತೆರಿಗೆ ಲೆಕ್ಕ ಹಾಕುವ ಆಯ್ಕೆಯನ್ನು ಒತ್ತಬೇಕು. ಅನಂತರ ಸಾರ್ವಜನಿಕರಿಗೆ ಆಫ್‌ಲೈನ್‌ ಹಾಗೂ ಆನ್‌ಲೈನ್‌ ಪಾವತಿಗೆ ಅವಕಾಶ ನೀಡಲಾಗಿರುತ್ತದೆ. ಆಫ್‌ಲೈನ್‌ ಪಾವತಿದಾರರು ಚಲನ್‌ ಡೌನ್‌ಲೋಡ್‌ ಮಾಡಿ ನಿಗದಿತ ಬ್ಯಾಂಕ್‌ಗೆ ಹೋಗಿ ಹಣ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್‌ ಪಾವತಿದಾರರು ಬ್ಯಾಂಕ್‌ ಖಾತೆಯ ಮೂಲಕ ನೇರವಾಗಿ ಹಣವನ್ನು ಕಡಿತಮಾಡಲಾಗುತ್ತದೆ.

ಗುರಿ ಸಂಗ್ರಹದಲ್ಲಿ ಸಾಧನೆ!
ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ನಗರಸಭೆ 2020-21ನೇ ಸಾಲಿನ ಆಸ್ತಿ ತೆರಿಗೆ ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆಯಾಗಿದೆ. 2019-20ನೇ ಸಾಲಿನಲ್ಲಿ 12.28 ಕೋ.ರೂ. ಗುರಿ ನೀಡಿದ್ದು, ನಗರಸಭೆ 11.97 ಕೋ.ರೂ. ಸಂಗ್ರಹಿಸಿದೆ. 2018-19ನೇ ಸಾಲಿನಲ್ಲಿ 12.09 ಕೋ.ರೂ. ಗುರಿನೀಡಿದ್ದು 11.45 ಕೋ.ರೂ. ಸಂಗ್ರಹಿಸಿದೆ. 2017-18ನೇ ಸಾಲಿನಲ್ಲಿ 11.77 ಕೋ.ರೂ. ಗುರಿ ನೀಡಿದ್ದು 10.73 ಕೋ.ರೂ. ಸಂಗ್ರಹಿಸಿದ್ದು, 2016-17 ಸಾಲಿನಲ್ಲಿ 9.50 ಕೋ.ರೂ. ಗುರಿ ನೀಡಿದ್ದು, 9.08 ಕೋ.ರೂ. ಸಂಗ್ರಹಿಸಲಾಗಿದೆ.

ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆ
ಜನರು ಮನೆಯಲ್ಲಿ ಕೊಳಿತುಕೊಂಡು ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ. ಸ್ವಯಂ ಆಸ್ತಿ ತೆರಿಗೆ ಶೇ. 5 ರಿಯಾಯಿತಿ ಅವಧಿಯನ್ನು ಮೇ 31ರ ವರೆಗೆ ವಿಸ್ತರಣೆಯಾಗಿದೆ.
-ಧನಂಜಯ ಡಿ.ಬಿ.,ಕಂದಾಯ ಅಧಿಕಾರಿ, ಉಡುಪಿ ನಗರಸಭೆ

ತೆರಿಗೆ ಸಂಗ್ರಹಕ್ಕೆ ಹಿನ್ನಡೆ
ನಗರಸಭೆ ವ್ಯಾಪ್ತಿಯಲ್ಲಿ ಎಪ್ರಿಲ್‌ ತಿಂಗಳಲ್ಲಿ ವಾರ್ಷಿಕ ಶೇ.40ರಿಂದ ಶೇ.60 ತೆರಿಗೆ ಸಂಗ್ರಹ ವಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌-19 ಭೀತಿಯಿಂದ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಕುಸಿತಗೊಂಡಿದ್ದು, ಆನ್‌ಲೈನ್‌ನಲ್ಲಿ ಪಾವತಿ ಅವಕಾಶವಿದ್ದರೂ ಪಾವತಿ ಮಾಡಿದವರು ಶೇಕಡಾವಾರು ಒಂದಂಕಿ ದಾಟಿಲ್ಲ. ಹಿಂದೆ ಎಪ್ರಿಲ್‌ ಅಂತ್ಯದೊಳಗೆ ಪಾವತಿಸುವವರಿಗೆ ಮಾತ್ರ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಈಗಲೂ ಈ ಸೌಲಭ್ಯ ಮುಂದುವರಿದಿದೆ. ಈ ಬಾರಿ ಕೋವಿಡ್‌-19 ಭೀತಿಯಿಂದ ಮೇ ಅಂತ್ಯಕ್ಕೆ ವಿಸ್ತರಿಸುವ ಮೂಲಕ ಕೋವಿಡ್‌-19 ಭೀತಿಯಿಂದ ಮನೆಯೊಳಗೆ ಬಂಧಿ ಯಾಗಿರುವ ಜನರಲ್ಲಿ ನಿರಾಳತೆ ಮಾಡಿಸಿದೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.