ಅಂತರಿಕ್ಷದಲ್ಲಿ ದೀರ್ಘ ಅವಧಿ: ಕ್ರಿಸ್ಟಿನಾ ದಾಖಲೆ
Team Udayavani, Feb 7, 2020, 7:46 AM IST
ಅಲ್ಮಾಟಿ (ಕಜಕಿಸ್ಥಾನ್): ಕಾರ್ಯನಿಮಿತ್ತವಾಗಿ ಬಾಹ್ಯಾಕಾಶಕ್ಕೆ ಹೋಗಿದ್ದ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮಹಿಳಾ ಖಗೋಳ ವಿಜ್ಞಾನಿ ಕ್ರಿಸ್ಟಿನಾ ಕೋ, 11 ತಿಂಗಳ ಅನಂತರ ಭೂಮಿಗೆ ಹಿಂದಿರುಗಿದ್ದಾರೆ. ಈ ಮೂಲಕ, ಅಂತರಿಕ್ಷದಲ್ಲಿ ಅತಿ ಹೆಚ್ಚು ದಿನಗಳ ಕಾಲ ಉಳಿದ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ವಿಜ್ಞಾನಿ ಲೂಕಾ ಪರ್ಮಿಟಾನೊ, ರಷ್ಯಾದ ಖಗೋಳ ವಿಜ್ಞಾನಿ ಅಲೆಕ್ಸಾಂಡರ್ ಸ್ವೋರ್ತ್ಸೊವ್ ಅವರೊಂದಿಗೆ ಕಳೆದ ವರ್ಷ ಮಾ. 14ರಂದು ಅಂತರಿಕ್ಷಕ್ಕೆ ತೆರಳಿದ್ದ ಅವರು, ಭೂಮಿಯಿಂದ 350 ಕಿ.ಮೀ. ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದಿದ್ದರು.