Udayavni Special

ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ


Team Udayavani, Jan 20, 2021, 4:41 PM IST

ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ

ಧಾರವಾಡ: ಒಂದು ವರ್ಷ ಬರೀ ತೆರವು, ನೆಲ ಅಗೆಯುವುದರಲ್ಲೇ ಕಾಲಹರಣ…ಇದಾದ ಬಳಿಕ ಅನುದಾನದ ಕೊರತೆ.. ಬದಲಾಗುತ್ತಲೇ ಇರುವ ನಿರ್ಮಾಣ ಯೋಜನೆ…ಈಗ ಅನುದಾನ ಕೊರತೆ ನೀಗಿದ ಬಳಿಕವೂ ಆಮೆಗತಿಯಲ್ಲಿ ಸಾಗಿರುವ ಕಾಮಗಾರಿ ಪೂರ್ಣ ಆಗಲು ಕನಿಷ್ಠ ಇನ್ನೂ ಎರಡು ವರ್ಷ ಬೇಕಂತೆ…ಗರಿಷ್ಠ ಎಷ್ಟು ವರ್ಷವೋ ದೇವರಿಗೆ ಗೊತ್ತು!

ಹೌದು, ಬೇಸಿಗೆ ಬಿರು ಬಿಸಿಲಿನಲ್ಲಿ ಮತ್ತು ಶಾಲೆಯ ರಜೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೊಂಚ ಈಜುಕೊಳಕ್ಕೆ ಹೋಗಿ ಹಾಯಾಗಿ ಈಜಿ ಮಜಾ ಪಡೆಯಲು ಬಹುವರ್ಷಗಳಿಂದ ಕಾದಿದ್ದ ಧಾರವಾಡದ ಏಕೈಕ ಈಜುಕೊಳದ ಕಥೆ ಮತ್ತು ವ್ಯಥೆ ಇದು. ನಗರದ ಜಿಲ್ಲಾಧಿಕಾರಿ ನಿವಾಸದ ಸನ್ನಿಹಿತದಲ್ಲಿಯೇ ನಿರ್ಮಾಣ ಆಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣದ ಕಾಮಗಾರಿ ಪರಿ ನೋಡಿದರೆ ನಿಜಕ್ಕೂ ಬೇಸರ ತರಿಸುತ್ತದೆ. ಕ್ರೀಡಾಪಟುಗಳು, ತರಬೇತುದಾರರ
ಸಲಹೆಗಳ ಅನ್ವಯ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಸಲು ಅಗತ್ಯವಿರುವ ಈಜುಕೊಳ ಸೇರಿ ಕೆಲ ಬದಲಾವಣೆ ಮಾಡಿದ್ದರಿಂದ ಯೋಜನಾ ವೆಚ್ಚ 13.5 ಕೋಟಿಯಿಂದ 35 ಕೋಟಿಗೇರಿದೆ. ಪಾಲಿಕೆಯ ವ್ಯಾಪ್ತಿಯ ಈಜುಕೊಳವನ್ನು ತೆರವುಗೊಳಿಸಿ, ನೆಲ ಅಗೆದು ಈ ಕಾಮಗಾರಿ ಆರಂಭವಾಗಿ ಬರೋಬ್ಬರಿ 2 ವರ್ಷವಾದರೂ ನಿರೀಕ್ಷಿತಮಟ್ಟದಲ್ಲಿ ಕಾಮಗಾರಿ ಆಗದೇ ಇರುವುದೇ ಕ್ರೀಡಾಸಕ್ತರ ಬೇಸರಕ್ಕೆ ಕಾರಣವಾಗಿದೆ.

ನಿರ್ಮಾಣ ಯೋಜನೆ ಬದಲಾವಣೆಯಿಂದ ವೆಚ್ಚವೂ ಹೆಚ್ಚಳವಾಗಿ ಅನುದಾನದ ಕೊರತೆ ಎದುರಿಸುವಂತಾಗಿತ್ತು. ಆದರೆ ಈಗ ಅನುದಾನ ಕೊರತೆ ನೀಗಿದ್ದರೂ ಕಾಮಗಾರಿಗೆ ಮಾತ್ರ ವೇಗ ಸಿಕ್ಕಿಲ್ಲ.

ಇದನ್ನೂ ಓದಿ:ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ

ಇನ್ನೆರಡು ವರ್ಷದಲ್ಲಾದರೂ ಮುಗಿಯುತ್ತಾ?
ಒಎನ್‌ಜಿಸಿ ಕಂಪನಿಯ ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್‌) ಮೂಲಕ ಒಟ್ಟು 13.5 ಕೋಟಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಒಎನ್‌ಜಿಸಿ 13.5 ಕೋಟಿ ರೂ. ನೀಡಲು ಒಪ್ಪಿ ಮೊದಲ ಹಂತವಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಬಳಿಕ ಬದಲಾವಣೆಗಳ ಬಳಿಕ ಎದುರಾಗಿರುವ ಅನುದಾನ ಕೊರತೆ ನೀಗಿಸಲು ಕಂಪನಿ ಹಿಂದೇಟು ಹಾಕಿತ್ತು. ಹೀಗಾಗಿ ಉಳಿದ ಅನುದಾನಕ್ಕಾಗಿ ವಿವಿಧ ಕಂಪನಿಗಳ ಮೊರೆ ಹೋಗುವಂತಾಗಿತ್ತು. ನೀಲನಕ್ಷೆಯಲ್ಲಿ ಕೆಲ ಬದಲಾವಣೆ ಹಾಗೂ ವೈಶಿಷ್ಟ್ಯಗಳಲ್ಲಿ ಬದಲಾವಣೆ ಮಾಡಿದ ಪರಿಣಾಮ ಯೋಜನಾ ವೆಚ್ಚ 35 ಕೋಟಿಗೆ ಏರಿತ್ತು. ಅನುದಾನದ ಕೊರತೆ ಎದುರಾಗಿತ್ತು. ಸದ್ಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು
ವಿವಿಧ ಕಂಪನಿಗಳ ಜೊತೆ ಮಾತುಕತೆ ಕೈಗೊಂಡು ಅನುದಾನದ ಕೊರತೆ ನಿವಾರಿಸಿದ್ದಾರೆ. ಆದರೂ ಕಾಮಗಾರಿ ಮುಗಿಯಲು ಇನ್ನೆರಡು ವರ್ಷ ಬೇಕಂತೆ. ಈ ಅವಧಿಯೊಳಗೆಯಾದರೂ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಸಂಕೀರ್ಣ ಮುಕ್ತಗೊಳ್ಳಲಿ ಎಂಬುದೇ ಕ್ರೀಡಾಸಕ್ತರ ಅಭಿಲಾಷೆ.

ಕ್ರೀಡಾಪಟುಗಳ ಅಸಮಾಧಾನ
ಜಿಲ್ಲಾಧಿಕಾರಿ ನಿವಾಸದ ಸನ್ನಿಹಿತದಲ್ಲಿಯೇ ಇದ್ದ ಪಾಲಿಕೆಯ ಈಜುಕೊಳ ಸೂಕ್ತ ನಿರ್ವಹಣೆ ಕೊರತೆ ಇಲ್ಲದೆ ಸೊರಗಿತ್ತು. ಇದಕ್ಕೆ ಹೈಟೆಕ್‌ ಸ್ಪರ್ಶದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸಲು 2018ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲದೇ ಈ ನಿರ್ಮಾಣಕ್ಕೆ ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್‌ ಆಫ್‌ ಪ್ಲ್ಯಾನಿಂಗ್‌ ಆ್ಯಂಡ್‌ ಆರ್ಕಿಟೆಕ್ಟನ್‌ ತಾಂತ್ರಿಕ ಸಲಹೆ ಇದೆ. ಆದರೆ ಕ್ರೀಡಾ ಸಂಕೀರ್ಣ ನಿರೀಕ್ಷಿತ ಮಟ್ಟದಲ್ಲಿ ಮೇಲೇಳದಿರುವುದು ಕ್ರೀಡಾಪಟುಗಳ ಅಸಮಾಧಾನಕ್ಕೂ ಕಾರಣವಾಗಿದೆ.

ನೆಲಬಿಟ್ಟು ಮೇಲೆದ್ದಿಲ್ಲ ಸಂಕೀರ್ಣ
ಇದು ಬಹುಪಯೋಗಿ ಕ್ರೀಡಾ ಸಂಕೀರ್ಣವಾಗಿದ್ದು, ನೆಲಮಹಡಿಯಲ್ಲಿ ಪ್ರತ್ಯೇಕವಾಗಿ ಪಾಕಿಂìಗ್‌ ವ್ಯವಸ್ಥೆ ಇರಲಿದೆ. ಉಳಿದ ಕಡೆಗಳಲ್ಲಿ ಕ್ರೀಡಾ ಸಾಮಗ್ರಿಗಳ ಮಳಿಗೆಗಳು, ಕ್ಯಾಂಟೀನ್‌, ವೀಕ್ಷಕರ ಗ್ಯಾಲರಿ, ತರಬೇತುದಾರರು ಮತ್ತು ವೈದ್ಯರಿಗೆ ಕೊಠಡಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್‌, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಜಿಮ್‌ ಹಾಗೂ ಇತರ ವಿಶಿಷ್ಟ ವ್ಯವಸ್ಥೆ ಇರಲಿದೆ. ಜಿ+3 ಮಹಡಿಗಳಲ್ಲಿ ಸಂಕೀರ್ಣ ನಿರ್ಮಾಣಗೊಳ್ಳಲಿದ್ದು, ಈವರೆಗೂ ಸಂಕೀರ್ಣ ನೆಲಬಿಟ್ಟು ಮೇಲೆದ್ದಿಲ್ಲ. ಆಮೆಗತಿಯಲ್ಲಿ ಸಾಗಿರುವ ಕಾಮಗಾರಿಗೆ ವೇಗ ನೀಡುವ ಕೆಲಸ ಆಗಬೇಕಿದೆ.

ಟಾಪ್ ನ್ಯೂಸ್

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಪೊಲೀಸ್ ಸಿಬ್ಬಂದಿ

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

Facebook BARS App Launched to Give TikTok-Like Experience to Budding Rappers

ಟಿಕ್ ಟಾಕ್ ಅನುಭವ ನೀಡಲಿದೆ ಫೇಸ್ ಬುಕ್ BARS App..!

Kabja movie

ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!

Teen Stabbed By Sister’s Stalkers Near South Delhi, Taken To AIIMS: Cops

ಸಹೋದರಿಯ ರಕ್ಷಣೆಗೆ ನಿಂತವನ ಮೇಲೆ ಪುಂಡರಿಂದ ಹಲ್ಲೆ ..!

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

ಕೆಆರ್ ಎಸ್ ಡ್ಯಾಂ ಮೇಲೆ ಯುವಕನ ಕಾರುಬಾರು! ಪೊಲೀಸ್ ಜೀಪು ಚಲಾಯಿಸಿದ ಯುವಕ: ವಿಡಿಯೋ ವೈರಲ್

ಕೆಆರ್ ಎಸ್ ಡ್ಯಾಂ ಮೇಲೆ ಯುವಕನ ಕಾರುಬಾರು! ಪೊಲೀಸ್ ಜೀಪು ಚಲಾಯಿಸಿದ ಯುವಕ: ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

b-s-y

ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ

ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?

ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?

ತಮಿಳುನಾಡು ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ

ತಮಿಳುನಾಡು ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ

MUST WATCH

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

ಹೊಸ ಸೇರ್ಪಡೆ

ರಂಗಭೂಮಿ ಸೌಂದರ್ಯ ಕಟ್ಟಿ  ಬೆಳೆಸೋಣ

ರಂಗಭೂಮಿ ಸೌಂದರ್ಯ ಕಟ್ಟಿ ಬೆಳೆಸೋಣ

ಠಾಣೆಗಳಲ್ಲಿ ಮಾನವ ಹಕ್ಕು ಹರಣ

ಠಾಣೆಗಳಲ್ಲಿ ಮಾನವ ಹಕ್ಕು ಹರಣ

TeruMalleswar swami Fair

ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ

Davanagere police

100ಕ್ಕೂ ಅಧಿಕ ಮನೆಗಳ ಹಸ್ತಾಂತರ ಶೀಘ್ರ

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಪೊಲೀಸ್ ಸಿಬ್ಬಂದಿ

ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.