Theatre: ಥಿಯೇಟರ್‌ಗೆ ಜನರನ್ನು ಸೆಳೆಯುವ ಕಥೆ ಹೇಳುವುದೇ ಸವಾಲು

ಚಿತ್ರನಟ ರಮೇಶ್‌ ಅರವಿಂದ್‌ ಅವರ ವಿಶೇಷ ಅಂಕಣ

Team Udayavani, Nov 3, 2023, 11:47 PM IST

THEATRE

ನಾವೆಲ್ಲ ಚಿತ್ರರಸಿಕರಾಗಿ ಚಿತ್ರಮಂದಿರಕ್ಕೆ ಹೋಗುತ್ತಿದ್ದಾಗ ಒಂದು ಜಾಗಕ್ಕೆ ಒಂದು ಸ್ಕ್ರೀನ್‌ ಇರೋದು, ಒಂದು ಸಮಯ ಇರೋದು.. ಮ್ಯಾಟ್ನಿ ಅಥವಾ ಮಾರ್ನಿಂಗ್‌ ಶೋ. ನಾವೆಲ್ಲ ಪ್ಲ್ರಾನ್‌ ಮಾಡಿಕೊಂಡು ಒಂದು ಗಂಟೆ ಮುಂಚೆನೇ ಹೋಗಿ ಹೌಸ್‌ಫ‌ುಲ್‌ ಆಗಬಾರದಪ್ಪ ಎಂದು ಪ್ರಾರ್ಥನೆ ಮಾಡಿ ಕ್ಯೂನಲ್ಲಿ ನಿಂತು ಟಿಕೆಟ್‌ ತಗೋತಾ ಇದ್ದೀವಿ. ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ನಲ್ಲಿ ಲಕ್ಷಾಂತರ ವೀಡಿಯೋಗಳು… 30 ಸೆಕೆಂಡ್‌ಗಳಲ್ಲಿ ನಿಮಗೆ ಖುಷಿ ಕೊಡಬಲ್ಲ, ನಿಮ್ಮನ್ನು ಯೋಚನೆ ಹಚ್ಚುವಂತಹ ವೀಡಿಯೋಗಳು ನಿಮಗೆ ಸಿಗುತ್ತಿವೆ. ಅಷ್ಟೊಂದು ಆಯ್ಕೆಗಳಿರಬೇಕಾದರೆ, ಇಷ್ಟೊಂದು ತರಹ ಮನೋರಂಜನೆಗಳಿರಬೇಕಾದರೆ ದೂರದಲ್ಲಿ ಇರುವ ಥಿಯೇಟರ್‌ಗೆ ನಿಮ್ಮನ್ನು ಎಳೆದುಕೊಂಡು ಬಂದು, ನಿಮ್ಮ ಗಮನವನ್ನು ಎರಡೂವರೆ ಗಂಟೆ ಕಾಲ ಸೆಳೆಯಬಲ್ಲಂತಹ ಒಂದು ಕಥೆಯನ್ನು ಹೇಳುವುದೇ ಇವತ್ತು ಬಹಳ ದೊಡ್ಡ ಸವಾಲು.

ಎರಡನೇ ಸವಾಲು ಕನ್ನಡ ಚಿತ್ರಕ್ಕಿಂತ ಹತ್ತರಷ್ಟು ಪ್ರೊಡಕ್ಷನ್‌ ಬಜೆಟ್‌, ಮಾರ್ಕೆಂಟಿಂಗ್‌ ಬಜೆಟ್‌ ಇರುವಂತಹ ಬೇರೆ ಬೇರೆ ಭಾಷೆಯ ಚಿತ್ರಗಳ ಮುಂದೆ ಬರೀ ನಮ್ಮ ಐಡಿಯಾಗಳು, ಸೃಜನಶೀಲತೆಗಳು ನಮ್ಮ ಹತ್ತರಷ್ಟು ಬಜೆಟ್‌ ಇರುವವರ ಜತೆ ಗುದ್ದಾಡಬೇಕಾಗುತ್ತದೆ.

ಮೂರನೇ ಸವಾಲು ಸೋಶಿಯಲ್‌ ಮೀಡಿಯಾಕ್ಕೆ ಇರುವ ಅಪಾರವಾದ ಶಕ್ತಿಯಿಂದ ಬಹಳ ಸುಮಾರಾದ ಚಿತ್ರವನ್ನು ಕೂಡ ಬಹಳ ಅದ್ಭುತ ಚಿತ್ರ ಎಂದು ಜನ ಒಪ್ಪುವ ಹಾಗೆ ಒಂದು ಚಿತ್ರಣವನ್ನು ಸೃಷ್ಟಿ ಮಾಡಬಹುದಾದ ಕಾಲಘಟ್ಟದಲ್ಲಿದ್ದೀವಿ. ಹಾಗಾಗಿ ನಮ್ಮನ್ನು ನಾವೇ ಯಾಮಾರಿಸಿಕೊಳ್ಳುತ್ತಿದ್ದೀವಾ ಅಂತ ಅನ್ನಿಸುತ್ತಿದೆ. ಈಗ ನಾವೆಲ್ಲರೂ ಒಂದು ನೈಜ ಹಿಟ್‌, ಮನಸ್ಸಿನಿಂದ ರಸಿಕ ಒಪ್ಪುವಂತಹ, ಶಾಶ್ವತವಾಗಿ ಅವರ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರವನ್ನು ಕೊಡಬೇಕು ಅನ್ನಿಸುತ್ತೆ. ನಮ್ಮ ಗಮನವೆಲ್ಲ ಒಂದು ಪ್ರಾಮಾಣಿಕವಾದ ಒಂದು ಹಿಟ್‌ ಕೊಡುವಂತ ಚಿತ್ರವನ್ನು ಮಾಡುವ ಕಡೆ ಹರಿಸಬೇಕಾಗಿದೆ. ಸದ್ಯಕ್ಕಂತೂ ಇಡೀ ಭಾರತದ ಗಮನವನ್ನು ಕನ್ನಡ ಚಿತ್ರರಂಗ ಸೆಳೆದಿದೆ. ಅಮೋಘವಾದ ಯಶಸ್ಸನ್ನು ನೋಡಿದ್ದೇವೆ. ಆದರೂ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಇನ್ನೂ ಒಳ್ಳೆಯ ರೀತಿಯಲ್ಲಿ, ಇನ್ನೂ ಕಡಿಮೆ ಸಮಯದಲ್ಲಿ, ಇನ್ನೂ ಸೃಜನಶೀಲವಾಗಿ, ಇನ್ನೂ ವೃತ್ತಿಪರವಾಗಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ನಾವೆಲ್ಲರೂ ಯೋಚನೆ ಮಾಡಬಹುದು.

ರಮೇಶ್‌ ಅರವಿಂದ್‌, ಚಿತ್ರನಟ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.