ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ
Team Udayavani, Apr 6, 2020, 5:40 AM IST
ಬೆಂಗಳೂರು: ಒಂದೆಡೆಯಿಂದ ರಾಜ್ಯ ಕೋವಿಡ್ 19 ವೈರಸ್‌ನಿಂದ ಮುಕ್ತಿ ಪಡೆಯಲು ಹೋರಾಟ ನಡೆಸುತ್ತಿದ್ದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ.ಸುಧಾಕರ್ ನಡುವಣ ಮುಸುಕಿನ ಗುದ್ದಾಟ ತೀವ್ರಗೊಂಡಿದೆ ಎಂಬ ವರದಿಗಳ ನಡುವೆಯೇ ಇವರೀರ್ವರೂ ನಮ್ಮ ನಡುವೆ ಯಾವುದೇ ಪ್ರತಿಷ್ಠೆ ಅಥವಾ ವೈಮನಸ್ಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ 19 ವೈರಸ್ ನಿಯಂತ್ರಣ ಕಾರ್ಯದಲ್ಲಿ ತಮ್ಮ ಮತ್ತು ಸಚಿವ ಡಾ| ಸುಧಾಕರ್ ಮಧ್ಯೆ ಪ್ರತಿಷ್ಠೆ ಇಲ್ಲ ಎಂದು ಪುನರುಚ್ಚರಿಸಿರುವ ಬಿ. ಶ್ರೀರಾಮುಲು, ಇಂಥ ಸಂಕಷ್ಟದ ಸಂದರ್ಭದಲ್ಲಿ ಕಿತ್ತಾಡಲು ನಮಗೇನು ಹುಚ್ಚೇ ಎಂದು ಪ್ರಶ್ನಿಸಿದ್ದಾರೆ. ಸಚಿವ ಡಾ| ಸುಧಾಕರ್ ನನ್ನ ಸಹೋದರರಿದ್ದಂತೆ. ನಮ್ಮಿಬ್ಬರ ನಡುವೆ ವೈಮನಸ್ಸಿದೆ ಎಂಬುದು ವದಂತಿ. ಇಂಥ ಆಧಾರರಹಿತ ಸುದ್ದಿಗಳಿಗೆ ಕಿವಿಗೊಡದೆ ನಾವು ಬಡವರ ಸೇವೆ ಮಾಡಲಿದ್ದೇವೆ. ಸರಕಾರದ ಕೆಲಸ ದೇವರ ಕೆಲಸ ಎಂದರು.
ನನ್ನ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೋವಿಡ್ 19 ವಿರುದ್ಧ ಟೊಂಕಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಬಿ. ಶ್ರೀರಾಮುಲು ಅಣ್ಣತಮ್ಮಂದಿರಿದ್ದಂತೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮ್ಮದೇ ಆದ ಜವಾ ಬ್ದಾರಿಗಳಿವೆ ಎಂದು ಡಾ|ಕೆ.ಸುಧಾಕರ್ ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳಲಿ ಮಸೀದಿಯಲ್ಲಿ ದೇವಳ ರಚನೆ ಪತ್ತೆ ವಿಚಾರ: ಡಿಸಿ ಸಭೆ; ಶಾಂತಿ, ಸುವ್ಯವಸ್ಥೆಗೆ ಮನವಿ
ಫೈನಲ್ಗೆ ಗುಜರಾತ್ ಟೈಟನ್ಸ್; ಮಿಲ್ಲರ್ ಆಕ್ರಮಣಕಾರಿ ಆಟಕ್ಕೆ ಸೋತ ರಾಜಸ್ಥಾನ ರಾಯಲ್ಸ್
ದಟ್ಟ ಮಂಜು ಹಿನ್ನೆಲೆ: ವಿಮಾನ ಸಂಚಾರದಲ್ಲಿ ವ್ಯತ್ಯಯ
ಲಾರಿಯಿಂದ ದ್ರವ ಪದಾರ್ಥ ಸೋರಿಕೆ: ವರ್ತಕರು,ವಿದ್ಯಾರ್ಥಿಗಳು ಅಸ್ವಸ್ಥ
ಪೊಲೀಸ್ ಕಸ್ಟಡಿಯಿಂದ ಆರೋಪಿ ಪರಾರಿ ; ಮೂವರು ಪೊಲೀಸರ ಅಮಾನತು