- Saturday 07 Dec 2019
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಪರಿಕರಗಳು
Team Udayavani, Jun 20, 2019, 3:07 AM IST
ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-2ಕ್ಕೆ ಇಸ್ರೋ ಸಜ್ಜಾಗಿದ್ದು, ಬೆಂಗಳೂರಿನ ಇಸ್ರೋ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್(ಐಸೈಟ್)ನಲ್ಲಿ ಸಿದ್ಧಗೊಂಡ ಆರ್ಬಿಟ್, ಲ್ಯಾಂಡರ್ ಹಾಗೂ ರೋವರ್, ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಲುಪಿವೆ.
ಚಂದ್ರಯಾನ -2 ಪರಿಕರಗಳಾದ ಆರ್ಬಿಟ್ (ಕಕ್ಷೆಗಾಮಿ), ವಿಕ್ರಂ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ), ಪ್ರಗ್ಯಾನ್ ಹೆಸರಿನ ರೋವರ್ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ರೋಬೋಟ್ ಸಾಧನ)ಗಳನ್ನು ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್(ಐಸೈಟ್)ನಲ್ಲಿಯೇ ಸಿದ್ಧಪಡಿಸಲಾಗಿದೆ. ಈ ಎರಡೂ ಉಪಕರಣಗಳನ್ನು ಸಾಕಷ್ಟು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಸ್ರೋ ಚಂದ್ರಯಾನ-2ಕ್ಕೆ ದಿನಾಂಕ ನಿಗದಿ ಮಾಡಿದ ಬಳಿಕ ಅವುಗಳನ್ನು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜೂ.14ಕ್ಕೆ ಆರ್ಬಿಟ್ (ಕಕ್ಷೆಗಾಮಿ), ಜೂ.18ರ ಮಂಗಳವಾರ ವಿಕ್ರಂ ಲ್ಯಾಡರ್, ಪ್ರಜ್ಞಾನ್ ರೋವರ್ ಬಾಹ್ಯಾಕಾಶ ಕೇಂದ್ರ ತಲುಪಿವೆ. ಈ ಮೂರೂ ಪರಿಕರಗಳನ್ನು ಜುಲೈ 15ರಂದು ಅಂತರಿಕ್ಷ ವಾಹನ ಜಿಎಸ್‌ಎಲ್‌ವಿ ಮಾರ್ಕ್-3 ಚಂದ್ರನಲ್ಲಿ ಹೊತ್ತೂಯ್ಯಲಿದ್ದು, ಸೆಪ್ಟಂಬರ್ 6 ರಂದು ಚಂದ್ರನ ಅಂಗಳ ತಲುಪಲಿವೆ.
ಚಂದ್ರನಲ್ಲಿ ಕಾರ್ಯಾಚರಣೆ ಹೇಗೆ?: ಸೆ.6ರಂದು ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೆ„ ತಲುಪಲಿದ್ದು, ಆರ್ಬಿಟ್ ಚಂದ್ರನ ಕಕ್ಷೆಯನ್ನು ಮೇಲ್ಮೆ„ನಿಂದ 100 ಕಿ.ಮೀ. ಅಂತರದಲ್ಲಿ ಸುತ್ತಾಟ ನಡೆಸುತ್ತದೆ. ಇನ್ನೊಂದೆಡೆ, ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ರೋವರ್‌ನ್ನು ಇಳಿಸಲಿದೆ. ನಂತರ ರೋವರ್ ಚಂದ್ರನ ಮೇಲ್ಮೆ„ ಮೇಲೆ ಪ್ರತಿ ಸೆಕೆಂಡಿಗೆ 1 ಸೆಂ.ಮೀ.ನಷ್ಟು ವೇಗದಲ್ಲಿ ಚಲಿಸುತ್ತಾ ವಿವಿಧ ಪ್ರಯೋಗಗಳನ್ನು ನಡೆಸಲಿದೆ. ಆ ಪ್ರಯೋಗಗಳ ಮಾಹಿತಿಯನ್ನು ಲ್ಯಾಂಡರ್ ಮೂಲಕ ಚಂದ್ರನ ಕಕ್ಷೆ ಸುತ್ತುತ್ತಿರುವ ಆರ್ಬಿಟ್‌ಗೆ ತಲುಪಿಸುತ್ತದೆ. ನಂತರ ಆರ್ಬಿಟ್ ಭೂಮಿಯ ಇಸ್ರೋ ಕೇಂದ್ರಕ್ಕೆ ಮಾಹಿತಿಯನ್ನು ವರ್ಗಾಯಿಸುತ್ತದೆ.
ಚಂದ್ರಯಾನದ ಉದ್ದೇಶವೇನು?: ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸುವುದು, ನೀರಿನ ನಿಖರತೆಯನ್ನು ಇನ್ನಷ್ಟು ಖಚಿತ ಪಡಿಸಿಕೊಳ್ಳುವುದು, ಖನಿಜ ಸೇರಿ ಇತರ ಧಾತುಗಳನ್ನು ಪತ್ತೆ ಹಚ್ಚುವುದು ಯಾನದ ಉದ್ದೇಶ.
ಅಶೋಕ ಚಕ್ರ ಅಚ್ಚೊತ್ತಲಿದೆ: ಪ್ರಗ್ಯಾನ್ ರೋವರ್‌ನಲ್ಲಿ ಒಟ್ಟು ಆರು ಚಕ್ರಗಳಿದ್ದು, ಅವುಗಳಲ್ಲಿ ಎರಡೂ ಚಕ್ರಗಳಲ್ಲಿ ಒಂದು ಬದಿಯ ಚಕ್ರದಲ್ಲಿ ಅಶೋಕ ಚಕ್ರ, ಮತ್ತೂಂದರಲ್ಲಿ ಇಸ್ರೋ ಲಾಂಛನ ಹಾಕಲಾಗಿದೆ. ಲ್ಯಾಡರ್‌ನಲ್ಲಿ ತ್ರಿವರ್ಣ ಧ್ವಜ ಹಾಕಲಾಗಿದೆ. ಚಂದ್ರನ ಮೇಲೆ ರೋವರ್ ಸಂಚರಿಸುವಾಗ ಅಶೋಕ ಚಕ್ರ, ಇಸ್ರೋ ಲಾಂಛನವನ್ನು ಅಚ್ಚೊತ್ತಲಿದೆ. ಈ ಅಚ್ಚು ಚಂದ್ರನ ಮೇಲ್ಮೆ„ನಲ್ಲಿ ನೂರಾರು ವರ್ಷ ಉಳಿಯಲಿದೆ. ಈ ಕಾರ್ಯಾಚರಣೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಒಟ್ಟು 1 ಚಂದ್ರಮಾನ ದಿನ (14 ಭೂಮಿ ದಿನ) ಅಂದರೆ, ಸೆ.6 ರಿಂದ 20ರವರೆಗೆ ನಡೆಯಲಿದೆ.
* 2019ರ ಜುಲೈ 15ರಂದು ಜಿಎಸ್‌ಎಲ್‌ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಮೂಲಕ ಉಡಾವಣೆ. (3.8 ಟನ್ ತೂಕ) 14 ಪೇಲೋಡ್ಸ್ ಬಳಕೆ.
* ಜುಲೈ 15 ನಸುಕು 2 ಗಂಟೆ 51 ನಿಮಿಷಕ್ಕೆ ಉಡಾವಣೆ. ಆ.1ರಂದು ಚಂದ್ರನ ಕಕ್ಷೆ ಪ್ರವೇಶ. ಸೆ. 6ರಂದು ಚಂದ್ರನ ಮೇಲ್ಮೆ„ ಸ್ಪರ್ಶ. ಸೆ.6 ರಿಂದ 20ರವರೆಗೆ ಕಾರ್ಯಾಚರಣೆ.
* ಆರ್ಬಿಟ್ ಆಯಸ್ಸು – 1 ವರ್ಷ. ತೂಕ – 2,378 ಕೆ.ಜಿ. ಚಂದ್ರನ ಮೇಲ್ಮೆ„ನಿಂದ 100 ಕಿ.ಮೀ ಅಂತರದಲ್ಲಿ ಸುತ್ತಾಟ.
* ಲ್ಯಾಂಡರ್ ಆಯಸ್ಸು – 14 ದಿನ, 1,471 ಕೆ.ಜಿ. (1 ಚಂದ್ರಮಾನ ದಿನ).
*ರೋವರ್ ಆಯಸ್ಸು – 14 ದಿನ. 27 ಕೆ.ಜಿ. (1 ಚಂದ್ರಮಾನ ದಿನ).
* ಚಂದ್ರಯಾನದ ಒಟ್ಟು ದೂರ – 3.84 ಲಕ್ಷ ಕಿ.ಮೀ.
* ಚಂದ್ರಯಾನ-2ರ ವೆಚ್ಚ – 603 ಕೋಟಿ ರೂ. ಬಾಹ್ಯಾಕಾಶ ನೌಕೆಯ ವೆಚ್ಚ – 375 ಕೋಟಿ ರೂ. ಒಟ್ಟು ವೆಚ್ಚ – 978 ಕೋಟಿ ರೂ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ...
-
ಬೆಂಗಳೂರು: ನಾಲ್ವರು ಆರೋಪಿಗಳು ಮಹಜರು ಕಾರ್ಯದ ವೇಳೆ ಪೊಲೀಸ್ ಸಿಬಂದಿಯ ಮೇಲೆ ತಿರುಗಿಬಿದ್ದು ಕೊಲೆಗೆ ಯತ್ನಿಸಿದರು... ಈ ವೇಳೆ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ...
-
ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ...
-
ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ ಸುಭದ್ರ ಸರ್ಕಾರದ ಭರವಸೆ ಮೂಡಿಸಿದ್ದು, ಜೆಡಿಎಸ್ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ...
-
ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....
ಹೊಸ ಸೇರ್ಪಡೆ
-
"ಅರ್ಜುನ್ ನೀನು ಹೇಳಿದಂಗೆ ಈ ಕಾರನ್ನ ತಗೊಂಡ್ ಹೋದ್ರೆ ಹತ್ತುಕೋಟಿ ಸಿಗುತ್ತಾ... ' - ಸನಾ ಅಲಿಯಾಸ್ ಸೃಷ್ಟಿ ಆ ದಟ್ಟ ಕಾಡಿನ ನಡುವೆ ಈ ಡೈಲಾಗ್ ಹೇಳುವ ಹೊತ್ತಿಗೆ,...
-
ಅದೊಂದು ಶ್ರೀಮಂತ ಕುಟುಂಬದ ಮನೆ. ಒಮ್ಮೆ ವಾರಾಂತ್ಯದಲ್ಲಿ ಆ ಮನೆಯಲ್ಲಿರುವವರೆಲ್ಲರೂ ಬೇರೆ ಬೇರ ಕಾರಣಗಳಿಂದ ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬರುತ್ತದೆ....
-
ನವದೆಹಲಿ: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳು ಪೊಲೀಸರ ಎನ್ ಕೌಂಟರ್ ಗೆ ಶುಕ್ರವಾರ ಮುಂಜಾನೆ...
-
ಸದಭಿರುಚಿ ಸಿನಿಮಾ ಮಾಡೋದಕ್ಕೆ ಒಂದು ಒಳ್ಳೆಯ ಕಥೆಯನ್ನು ಹುಡುಕಿ, ಆಯ್ಕೆ ಮಾಡಿಕೊಳ್ಳುವುದು, ಅದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ಕಟ್ಟಿಕೊಡೋದೇ...
-
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮದಕರಿ ನಾಯಕನ ಕುರಿತ ಐತಿಹಾಸಿಕ ಚಿತ್ರಕ್ಕೆ "ಗಂಡುಗಲಿ ಮದಕರಿ ನಾಯಕ' ಎಂದು ಹೆಸರಿಡಲಾಗಿತ್ತು. ಕಳೆದ ಕೆಲ ತಿಂಗಳಿನಿಂದ...