
ಗೇಲ್ ರನ್ನು ನಮಗೆ ಕೊಡಿ, ಅಥವಾ ಕೊಹ್ಲಿ, ಎಬಿಡಿಯನ್ನು ಪಂಜಾಬ್ ಗೆ ಸೇರಿಸಿಕೊಳ್ಳಿ
ಸದ್ದು ಮಾಡುತ್ತಿದೆ ವಿರಾಟ್ ಅಭಿಮಾನಿಯ ಟ್ವೀಟ್
Team Udayavani, Apr 25, 2019, 5:27 PM IST

ಬೆಂಗಳೂರು: ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರ ರಾತ್ರಿ ನಡೆದ ಆರ್ ಸಿಬಿ- ಪಂಜಾಬ್ ವಿರುದ್ಧದ ಪಂದ್ಯ ಹಲವು ಕಾರಣಗಳಿಗೆ ಸದ್ದು ಮಾಡಿತ್ತು. ಈಗ ವಿರಾಟ್ ಕೊಹ್ಲಿ ಅಭಿಮಾನಿಯೋರ್ವ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
ಪಂಜಾಬ್ ಮತ್ತು ಬೆಂಗಳೂರು ನಡುವಿನ ಪಂದ್ಯ ಒಂಥರಾ ಆರ್ ಸಿಬಿ ಮತ್ತು ಮಿನಿ ಆರ್ ಸಿಬಿ ಪಂದ್ಯದಂತಿತ್ತು. ಯಾಕೆಂದರೆ ಪಂಜಾಬ್ ತಂಡದಲ್ಲಿ ಇರುವ ಹೆಚ್ಚಿನವರು ಈ ಮೊದಲು ಬೆಂಗಳೂರು ತಂಡಕ್ಕೆ ಆಡಿದವರೇ. ಗೇಲ್, ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಮನದೀಪ್ ಸಿಂಗ್ ಹೀಗೆ ಪಂಜಾಬ್ ತಂಡದಲ್ಲಿರುವ ಆರ್ ಸಿಬಿ ಮಾಜಿ ಆಟಗಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ತಾನು ಏಳು ವರ್ಷ ಆಡಿದ ಪಂದ್ಯದ ವಿರುದ್ಧವೇ ಕಣಕ್ಕಿಳಿದ ಕ್ರಿಸ್ ಗೇಲ್ ಉತ್ತಮ ಆರಂಭ ಪಡೆದಿದ್ದರು. ಕೇವಲ ಹತ್ತು ಎಸೆತ ಎದುರಿಸಿದ್ದ ಗೇಲ್ 23 ರನ್ ಗಳಿಸಿದ್ದರು. ಅಂತಿಮವಾಗಿ ಪಂಜಾಬ್ ತಂಡ 17 ರನ್ ಅಂತರದಿಂದ ಬೆಂಗಳೂರಿಗೆ ಶರಣಾಗಿತ್ತು.
ಪಂದ್ಯದ ನಂತರ ಟ್ವೀಟ್ ಮಾಡಿದ್ದ ಕಿಶೋರ್ ರೆಡ್ಡಿ ಎಂಬಾತ, ‘ನಮಗೆ ಕ್ರಿಸ್ ಗೇಲ್ ರನ್ನು ಕೊಟ್ಟುಬಿಡಿ, ಪ್ರೀತಿ ಜಿಂಟಾ ಮ್ಯಾಮ್, ನಮಗೆ ಗೇಲ್ ಕೊಡಿ ಇಲ್ಲವೇ ಕೊಹ್ಲಿ ಮತ್ತು ಡಿ’ವಿಲಿಯರ್ಸ್ರನ್ನು ನೀವೇ ಖರೀದಿಸಿ, ಈ ಮೂವರು ಒಂದೇ ತಂಡದಲ್ಲಿರಬೇಕು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
@lionsdenkxip please give back our Gayle to @RCBTweets we have so many please give that man to us @realpreityzinta mam give Gayle or take kohli n abd to your team #RCBvKXIP
— Kishore Reddy (@Kishore29999098) April 25, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
