ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಉಳಿದಿರುವುದು ಇದೊಂದೆ ಮಾರ್ಗ: ಕೊಹ್ಲಿಗೆ ಗೌತಮ್ ‘ಗಂಭೀರ’ ಸಲಹೆ
Team Udayavani, Nov 7, 2020, 11:50 AM IST
ಅಬುಧಾಬಿ: ‘ಈ ಸಲ ಕಪ್ ನಮ್ಮದೇ’ ಎಂದು ಪ್ರತಿ ಬಾರಿಯಂತೆ ಈ ಸಲವೂ ಹೇಳಿಕೊಂಡು ಟೂರ್ನಿ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಮುಗ್ಗರಿಸಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಕೂಟದಿಂದಲೇ ಹೊರಬಿದ್ದಿದೆ.
ಕಳಪೆ ಆಟದ ಕುರಿತಂತೆ ಆರ್ ಸಿಬಿ ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಭಾರಿ ಅಸಮಾಧಾನ ಕೇಳಿಬಂದಿದೆ. ಅಭಿಮಾನಿಗಳು ವಿರಾಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದರ ಮಧ್ಯೆ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಕೊಹ್ಲಿಗೆ ‘ಗಂಭೀರ’ ಸಲಹೆ ನೀಡಿದ್ದಾರೆ.
ಐಪಿಎಲ್ ಕೂಟದಲ್ಲಿ ಇದುವರೆಗೆ ಎಂಟು ಬಾರಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಇದುವರೆಗೂ ಒಂದೂ ಕಪ್ ಗೆದ್ದಿಲ್ಲ. ಹೀಗಾಗಿ ಆರ್ ಸಿಬಿಯ ನಾಯಕತ್ವವನ್ನು ವಿರಾಟ್ ತ್ಯಜಿಸಬೇಕು ಎಂದು ಗಂಭೀರ್ ಹೇಳಿದ್ದಾರೆ.
ಎಂಟು ಬಾರಿ ನಾಯಕನಾಗಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದಾದರೆ ನಾಯಕನೇ ಜವಾಬ್ದಾರಿ ಹೊರಬೇಕು. ಎಂಟು ವರ್ಷದಷ್ಟು ದೊಡ್ಡ ಸಮಯವನ್ನೇ ಫ್ರಾಂಚೈಸಿ ನೀಡಿದೆ. ಬೇರೆ ಯಾವ ನಾಯಕನಿದ್ದಾನೆ? ಯಾವ ಆಟಗಾರ ಕಪ್ ಗೆಲ್ಲಲಾಗದೇ ಇಷ್ಟು ಸಮಯ ಒಂದೇ ತಂಡದಲ್ಲಿದ್ದಾನೆ? ಎಂದು ಗಂಭೀರ್ ಖಾಸಗಿ ಕ್ರೀಡಾ ಕಾರ್ಯಕ್ರಮದಲ್ಲಿ ಹೇಳಿದರು.
ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಆರ್ ಸಿಬಿ ಆರು ವಿಕೆಟ್ ಅಂತರದ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಏಳು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದ್ದರೆ, ಗುರಿ ಬೆನ್ನಟ್ಟಿದ ಹೈದರಾಬಾದ್ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಪಾಕ್ ಗೆ ಸರಣಿ ಸೋಲಿನ ಅವಮಾನ: ಐತಿಹಾಸಿಕ ಸಾಧನೆ ಮಾಡಿದ ಅಫ್ಘಾನಿಸ್ಥಾನ
ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ
ಐಪಿಎಲ್ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ
ಶೂಟಿಂಗ್: ಭಾರತದ ಭವಿಷ್ಯದ ಶೂಟರ್ ಸಿಫ್ಟ್ ಕೌರ್ ಸಮ್ರಾಗೆ ಕಂಚು
MUST WATCH
ಹೊಸ ಸೇರ್ಪಡೆ
ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್
ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ
’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ