CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉಪ್ಪಿಯ ದೇಶ ಬದಲಿಸೋ ಐಡಿಯಾ; ಡಿ.2016ರ ರೂಪತಾರಾದಲ್ಲಿ ಉಪ್ಪಿ

ಕಳೆದೆರೆಡು ದಿನಗಳಿಂದ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಹಾಗೆ ನೋಡಿದರೆ, "ಸೂಪರ್‌' ಚಿತ್ರದ ದಿನಗಳಿಂದಲೂ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತಾರೆ, ಸದ್ಯದಲ್ಲೇ ರಾಜಕೀಯ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಇದ್ದೇ ಇದೆ. ಆದರೆ,
ಉಪೇಂದ್ರ ಇಷ್ಟು ದಿನಗಳಲ್ಲಿ ರಾಜಕೀಯ ಸೇರಿಲ್ಲ. ಬದಲಿಗೆ ಹೊರಗಿದ್ದುಕೊಂಡೇ, ಹೇಗೆ ವ್ಯವಸ್ಥೆಯನ್ನು ಬದಲಾಯಿಸಬಹುದು, ದೇಶ ಉದ್ಧಾರಕ್ಕೆ ಏನೆಲ್ಲಾ ಮಾಡಬಹುದು ಎಂಬುದನ್ನು ಆಗಾಗ ಹೇಳುತ್ತಲೇ ಬಂದಿದ್ದಾರೆ.

ಅದರ ಮುಂದುವರೆದ ಭಾಗವಾಗಿ, ಶುಕ್ರವಾರ ರಾತ್ರಿ ಉಪೇಂದ್ರ ಸುಮಾರು 15 ನಿಮಿಷಗಳ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ವಿಶೇಷವೆಂದರೆ, ಈ ಕುರಿತು ಉಪೇಂದ್ರ ಅವರು ಕಳೆದ ವರ್ಷದ ನವೆಂಬರ್‌ನಲ್ಲೇ ಮಾತನಾಡಿದ್ದರು ಮತ್ತು ಉಪೇಂದ್ರ ಅವರ ದೇಶ ಬದಲಿಸುವ ಐಡಿಯಾಗಳಿರುವ ಲೇಖನವೊಂದು 2016ರ ಡಿಸೆಂಬರ್‌ನಲ್ಲೇ ಪ್ರಕಟವಾಗಿತ್ತು. ಈ ಸಂದರ್ಶನದಲ್ಲಿ ಉಪೇಂದ್ರ ಏನು ಹೇಳಿದ್ದಾರೆ ಗೊತ್ತಾ? ವಿವರ ಇಲ್ಲಿದೆ.

ನನ್ನ ಮನಸ್ಸಲ್ಲೊಂದು ಐಡಿಯಾ ಇದೆ. ಡೀಪಾಗ್‌ ಸ್ಕ್ರಿಪ್ಟ್ ಮಾಡಬೇಕು. ಈಗ ಇರೋದು ಒನ್‌ ಡೇ ಡೆಮಾಕ್ರಸಿ. ಅಲ್ವೇ? ಓಟ್‌ ಹಾಕೋ ದಿನ ನಾವು ರಾಜರು. ಉಳಿದ ದಿನ ಅವರೇ ರಾಜರು. ನಾವು ಸೇವಕರು. ಇದು ಮೊದ್ಲು ಚೇಂಜಾಗಬೇಕು. ಪ್ರಜಾಪ್ರಭುತ್ವ ಅಂದ್ರೆ ಪ್ರಜೆಗಳೇ ಪ್ರಭುಗಳು. ಅಲ್ವಾ? ಹಾಗಾದ್ರೆ 365 ದಿನ ಪ್ರಜೆಗಳು ಪ್ರಭುಗಳಾಗಿರೋಕೆ ಏನ್‌ ಮಾಡಬೇಕು? ಕರಪ್ಷನ್‌ ಅದೂ ಇದೂ ಏನೂ ಇರಬಾರದು?

ನಾವೊಂದು ಕೆಲ್ಸ ಮಾಡ್ತಿದೀವಿ. ಹಾಗಾಗಿ ನಮ್ಮ ಏರಿಯಾದ ಪಬ್ಲಿಕ್‌ ಕೆಲ್ಸಗಳನ್ನು ಮಾಡೋಕೆ ಟೈಮಿಲ್ಲ. ಕಸದ ಸಮಸ್ಯೆ, ನೀರಿನ ಸಮಸ್ಯೆ ಹೀಗೆ ಯಾವುದೇ ಕೆಲಸ ಮಾಡೋಕೆ ಸಮಯವಿಲ್ಲ. ಹಾಗಾಗಿ ಈ ಕೆಲ್ಸಗಳನ್ನ ಮಾಡೋಕೆ ನಾವು ಯಾರೋ ಒಬ್ಬರನ್ನು ಅಪಾಯಿಂಟ್‌ ಮಾಡ್ಕೊàತೀವಿ. ಅವರು ಎಂಎಂಲ್‌ಎ ಇರಬಹುದು. ಕಾರ್ಪೋರೇಟರ್‌ ಇರಬಹುದು.  ಅಂದ್ರೆ ನಮಗೆ ಬೇಕಿರೋದು ಕೆಲಸಗಾರರು. ಕೆಲ್ಸ
ಮಾಡು. ಸಂಬಳ ತಗೋ. ಅಂಥಾದ್ದರಲ್ಲಿ ನಾಯಕ ಹೆಂಗಾಗ್ತಿಯ ನೀ? ಮನೆಯಿಂದ ದುಡ್‌ ತಂದು ಜನರಿಗೆ ಸಹಾಯ ಮಾಡಿದ್ರೆ ಆಗ ನೀನು ನಾಯಕ. ನೀ ಹಾಗೇನೂ ಮಾಡ್ತಿಲ್ಲವಲ್ಲ. ನಮ್‌ ದುಡ್ಡಲ್ಲಿ ಕೆಲ್ಸ ಮಾಡ್ತಿದ್ದಿ. ಅಲ್ವೇ? ನೀನೊಬ್ಬ ವರ್ಕರ್‌. ಸರಿನಾ? ನಮಗೆ ಕೆಲಸಗಾರರು ಬೇಕು. ಎಂಥಾ ಕೆಲಸಗಾರರು ಬೇಕು? ಎಲಿಜಿಬಲ್‌ ಕೆಲಸಗಾರರು. ಯೋಗ್ಯ ಕೆಲಸಗಾರರು ಅಂದ್ರೆ ಯಾರು? ಅದಕ್ಕೊಂದು ಐಡಿಯಾ ಇದೆ. ಈಗ ನಾನೊಂದು ಕಂಪನಿ ಮಾಡ್ತೀನಿ.

ಪೊಲಿಟಿಕಲ್‌ ಪಾರ್ಟಿ ಥರ ಅಥವಾ ಕಾರ್ಪೋರೇಟ್‌ ಕಂಪನಿ ಥರ. ಮೊದಲು ನಾನು ಒಂದೊಂದು ಏರಿಯಾದ ಆಸಕ್ತರಿಗೆ ಒಂದು ಆಡಿಯಾ ಹೇಳ್ತೀನಿ. ಅವರು ಮಾಡಬೇಕಾದ್ದು ಇಷ್ಟೇ- ಹಾಗೆ ಬಂದವರು ಅವರವರ ಏರಿಯಾದ ಸಂಪೂರ್ಣ ಮಾಹಿತಿ ಕೊಡಬೇಕು. ಆ ಏರಿಯಾದ ಸಮಸ್ಯೆಗಳೇನು? ಉದಾಹರಣೆಗೆ ಕಸದ ಸಮಸ್ಯೆ, ನೀರಿನ ಸಮಸ್ಯೆ, ಸ್ಕೂಲಿನ ಸಮಸ್ಯೆ ಹೀಗೆ. ಈ ಸಮಸ್ಯೆಗಳನ್ನು ಹೇಗ್‌  ಪರಿಹರಿಸ್ತೀಯಾ ಅಂತ ಬರೆಯಬೇಕು. ಎಷ್ಟು ದಿನಗಳಲ್ಲಿ ಸಾಲ್ವ ಮಾಡಕಾಗತ್ತೆ? ಅದಕ್ಕಾಗಿ ಎಷ್ಟು ಬಜೆಟ್‌ ಬೇಕು ನಿಂಗೆ. ಈ ಎಲ್ಲವನ್ನೂ ವಿವರವಾಗಿ
ಬರೆದು ಕಳಿಸಬೇಕು.

ಸರಿ, ಅದನ್ನು ಮಾಡಲು ಏನೇನ್‌ ಬೇಕು. ಒಂದು ಗಾಡಿ ಬೇಕು. ಇಂತಿಷ್ಟು ಜನ ಬೇಕು. ಕಸವನ್ನು ಡಂಪ್‌ ಮಾಡ್ಬೇಕು. ರೀಸೈಕ್ಲಿಂಗ್‌ ಪ್ಲಾಂಟ್‌ ಬೇಕು. ಇಷ್ಟ್ ದುಡ್ಡು ಬೇಕು. ಹೀಗೆ ಪರಿಹಾರ ಮತ್ತು ಏನೇನ್‌ ಬೇಕು ಅನ್ನೋದನ್ನೆಲ್ಲಾ ಬರೀಬೇಕು. ಯಾರಿಗೆ ಇಂಟರೆಸ್ಟ್‌ ಇದೆಯೋ ಅವರು ಬರೆದು ಕಳಿಸ್ಬೇಕು. ಈ ಥರ ಒಂದು ಏರಿಯಾದಲ್ಲಿ ಹತ್ತತ್ತು ಜನಾನೋ ಮೂರ್‌ಮೂರು ಜನಾನೋ ಬರೆದು ಕಳಿಸ್ತಾರೆ. ಅದರಲ್ಲಿ ನಾನು ಬೆಸ್ಟ್‌ ಅಂತನ್ನಿಸಿದವರನ್ನು ಆರಿಸ್ತೀನಿ. ಕೊನೆಗೆ ಪರ್ಸನಲ್ಲಾಗಿ ಇಂಟವ್ಯೂ ಮಾಡ್ತೀನಿ. ಅದರಲ್ಲಿ ಬೆಸ್ಟ್‌ ಅನ್ನಿಸಿದವರಿಗೆ ಸೀಟ್‌ ಕೊಡ್ತೀವಿ. ಸುಮ್ನೆ ಬಾಯಿಗ್‌ ಬಂದಂತೆ ಬರೆಯೋದಲ್ಲ. ಅವನು ಅದನ್ನು ಅನಲೈಸ್‌ ಮಾಡಿರಬೇಕು. ಅವರು ಅಲ್ಲೆಲ್ಲಾ ಓಡಾಡಿ, ಜನರ ಹತ್ತಿರ ಮಾತಾಡಿ, ಅಧ್ಯಯನ ಮಾಡಿ, ಸಂಶೋಧನೆ ಮಾಡಿ, ಪರಿಣತರ ಸಲಹೆ ಪಡ್ಕೊಂಡು ಎಷ್ಟ್ ಬಜೆಟ್‌ ಬೇಕು ಅಂತ ಬರೀಬೇಕು.

ಆಮೇಲೆ ಅವನು ಹೇಗ್‌ ವರ್ಕ್‌ ಮಾಡಬೇಕು ಅನ್ನೋದು. ನಮ್ಮ ನಿಮ್ಮೆಲ್ಲರ ಥರ ಒಂಭತ್ತರಿಂದ ಐದು ಗಂಟೆವರೆಗೆ ಮಾಡಿದ್ರೆ ಸಾಕು. ಏರಿಯಾದಲ್ಲೆಲ್ಲಾ ಸುತ್ತಾಡಿ ಎಲ್ಲಾದರೂ ಕಸದ ರಾಶಿ ಇದ್ದರೆ ಫೋಟೋ ತೆಗೆದು ಅವನ ಫೇಸ್‌ಬುಕ್ಕಲ್ಲಿ, ವೆಬ್‌ಸೈಟಲ್ಲಿ ಅವನ ಟ್ವಿಟ್ಟರಲ್ಲಿ ಮತ್ತು ಟೀವಿಲಿ ಕೂತು ಮಾತಾಡಿ ಇಲ್ಲಿ ಹೀಗಿತ್ತು ಅಂತ ಹೇಳಿ ಅದನ್ನು ಹೇಗೆ ಸರಿ ಮಾಡಿದೆ ಅನ್ನೋ ವಿವರವನ್ನೂ ಕೊಡಬೇಕು.

ಜಾಸ್ತಿ ಬೇಡ. ಎರಡು ಏರಿಯಾ ಕೊಡಿ. ಮೊದಲು ನಾನದನ್ನು ಮಾಡಿ ತೋರಿಸ್ತೀನಿ. ಇದನ್ನು ಹೇಳಬೇಕು ಜನಕ್ಕೆ. ಇದು ನನ್ನ ಮೈಂಡಲ್ಲಿರೋದು. ಸ್ವಲ್ಪ ಸ್ಟಡಿ ಮಾಡ್ತಾ ಇದ್ದೀನಿ. ಡೀಟೇಲ್‌ ಒಟ್ಟು ಗೂಡಿಸ್ತಾ ಇದೀನಿ. ಆಮೇಲೆ ಜನಕ್ಕೆ ಹೇಳಬೇಕು. 

Back to Top