ಮಗನನ್ನು ಲಾಂಚ್ ಮಾಡಲು ವಿಜಯ್ ಸಿದ್ಧತೆ
Team Udayavani, Nov 1, 2017, 4:20 PM IST
“ದುನಿಯಾ’ ವಿಜಯ್ ಅವರ “ಕನಕ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಅವರದ್ದೇ ನಿರ್ಮಾಣದ “ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರೀಕರಣವಾಗುತ್ತಿದೆ. ಈ ನಡುವೆಯೇ ವಿಜಿ “ಕುಸ್ತಿ’ ಕನಸು ಕಾಣುತ್ತಿದ್ದಾರೆ. ಹೌದು, ವಿಜಯ್ ಅವರಿಗೆ ಕುಸ್ತಿಯನ್ನಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆ ಇದೆ. ಆ ಆಸೆಯನ್ನು ಅವರು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ ಕೂಡಾ. ಹಾಗಾಗಿಯೇ ಅವರ ಮುಂದಿನ ಸಿನಿಮಾ ಕುಸ್ತಿ ಕುರಿತಾಗಿದ್ದು, ಚಿತ್ರಕ್ಕೆ “ಕುಸ್ತಿ’ ಎಂದೇ ಟೈಟಲ್ ಇಡಲಿದ್ದಾರೆ.
ಈ ಚಿತ್ರದ ನಿರ್ದೇಶಕ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ. ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸುವ ಯೋಚನೆ ವಿಜಯ್ಗಿದೆ. “ನನಗೆ ಕುಸ್ತಿ ಕುರಿತು ಸಿನಿಮಾ ಮಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇದೆ. ಈಗ ಆ ಆಸೆ ಈಡೇರುವ ಸಮಯ ಬಂದಿದೆ. ಕುಸ್ತಿ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಕಥೆ ಸಿದ್ಧವಾಗುತ್ತಿದೆ.
“ಕುಸ್ತಿ’ ಅಂದಾಕ್ಷಣ ಕೇವಲ ಕುಸ್ತಿಯನ್ನಷ್ಟೇ ತೋರಿಸುತ್ತಿಲ್ಲ. ಇಂದಿನ ಟ್ರೆಂಡ್ಗೆ ತಕ್ಕಂತೆ, ಕಮರ್ಷಿಯಲ್ ಆಗಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ವಿಜಯ್. ಈ ಚಿತ್ರದ ಮತ್ತೂಂದು ವಿಶೇಷವೆಂದರೆ “ಕುಸ್ತಿ’ ಮೂಲಕ ವಿಜಯ್ ಅವರ ಮಗ ಸಾಮ್ರಾಟ್ ಕೂಡಾ ಲಾಂಚ್ ಆಗುತ್ತಿದ್ದಾರೆ. ಈ ಚಿತ್ರದಲ್ಲಿ ಸಾಮ್ರಾಟ್ ಬಾಲನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಯಾವ ಪಾತ್ರ ಎಂದರೆ ವಿಜಯ್ ಅವರ ಬಾಲ್ಯದ ದಿನಗಳ ಪಾತ್ರ.
ಹೌದು, “ಕುಸ್ತಿ’ ಚಿತ್ರದಲ್ಲಿ ವಿಜಯ್ ಅವರ ಬಾಲ್ಯದ ಪಾತ್ರ, ಬಾಲ್ಯದಿಂದಲೇ ಕುಸ್ತಿ ತರಬೇತಿ ಪಡೆಯುವ ಅಂಶಗಳನ್ನು ಸಾಮ್ರಾಟ್ ಮೂಲಕ ಚಿತ್ರೀಕರಿಸುವ ಉದ್ದೇಶ ವಿಜಯ್ ಅವರಿಗಿದೆ. ಈಗಾಗಲೇ ವಿಜಯ್ ಪುತ್ರ ಕೂಡಾ ಎಲ್ಲಾ ರೀತಿಯ ತರಬೇತಿ ಪಡೆಯುತ್ತಿದ್ದು, ಸಖತ್ ಆ್ಯಕ್ಟೀವ್ ಆಗಿದ್ದಾರೆ. “ಕುಸ್ತಿ ಮೂಲಕ ಮಗನನ್ನು ಲಾಂಚ್ ಮಾಡುವ ಉದ್ದೇಶವಿದೆ. ಅವನಿಗೂ ಆ್ಯಕ್ಷನ್ನಲ್ಲೇ ಆಸಕ್ತಿ. ಈಗಾಗಲೇ ಒಂದಷ್ಟು ಪೂರ್ವತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾನೆ’ ಎನ್ನುವುದು ವಿಜಯ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು