ನಿರ್ದೇಶಕ ಪವನ್‌ ಒಡೆಯರ್‌ ನಿಶ್ಚಿತಾರ್ಥ | Udayavani - ಉದಯವಾಣಿ
   CONNECT WITH US  
echo "sudina logo";

ನಿರ್ದೇಶಕ ಪವನ್‌ ಒಡೆಯರ್‌ ನಿಶ್ಚಿತಾರ್ಥ

ನಿರ್ದೇಶಕ ಪವನ್‌ ಒಡೆಯರ್‌ ನಟಿ ಆಪೇಕ್ಷಾ ಪುರೋಹಿತ್‌ ಅವರ ಕೈ ಹಿಡಿಯಲಿದ್ದಾರೆ ಹಾಗೂ ಸದ್ಯದಲ್ಲೇ ಅವರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಪವನ್‌ ಒಡೆಯರ್‌ ನಿಶ್ಚಿತಾರ್ಥ ನಡೆದಿದೆ. ಗುರುವಾರ ಪವನ್‌ ಒಡೆಯರ್‌ ನಿಶ್ಚಿತಾರ್ಥ ಬಾಗಲಕೋಟೆಯಲ್ಲಿ ನಡೆದಿದೆ.

ಎರಡು ಕುಟುಂಬಗಳ ಆಪ್ತೆಷ್ಟರಷ್ಟೇ ಭಾಗಿಯಾಗಿದ್ದ ಈ ಸರಳ ಸಮಾರಂಭದಲ್ಲಿ ಅಪೇಕ್ಷಾ ಅವರಿಗೆ ಪವನ ಉಂಗುರು ತೊಡಿಸಿದರು. ಅಪೇಕ್ಷಾ ಪುರೋಹಿತ್‌ ಅವರದು ಮೂಲತಃ ಬಾಗಲಕೋಟೆ. ಫ್ಯಾಷನ್‌ ಡಿಸೈನರ್‌ ಆಗಿರುವ ಅಪೇಕ್ಷಾ, ಸೀತಾರಾಮ್‌ ನಿರ್ದೇಶನದ "ಕಾಫಿ ತೋಟ' ಚಿತ್ರದ ನಾಯಕಿಯಾಗಿ ನಟಿಸಿದ್ದರು.

ಇಬ್ಬರು ಉತ್ತರ ಕರ್ನಾಟಕದವರಾಗಿದ್ದು, ಪವನ್‌ಗೆ ಉತ್ತರ ಕರ್ನಾಟಕದ ಹುಡುಗಿಯನ್ನೇ ಮದುವೆಯಾಗಬೇಕೆಂಬ ಆಸೆ ಇತ್ತಂತೆ. ಅದರಂತೆ ಈಗ ಅಪೇಕ್ಷಾ ಅವರ ಕೈ ಹಿಡಿಯುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್‌ನಲ್ಲಿ ಇವರ ಮದುವೆ ನಡೆಯಲಿದೆ. 

Trending videos

Back to Top