CONNECT WITH US  

ಧ್ವಜ ಹಾರಿಸಿದ ಅಶೋಕ್‌ ಕಶ್ಯಪ್‌

"ಲಿಫ್ಟ್ ಕೊಡ್ಲ' ನಂತರ ಮತ್ತೂಮ್ಮೆ ನಿರ್ದೇಶನಕ್ಕೆ

ಜಗ್ಗೇಶ್‌ ಅಭಿನಯದ "ಲಿಫ್ಟ್ ಕೊಡ್ಲ' ಚಿತ್ರ ನಿರ್ದೇಶಿಸಿದ್ದ ಅಶೋಕ್‌ ಕಶ್ಯಪ್‌ ಅವರು ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡು ಮುಗಿಸಿದ್ದಾರೆ. ಆ ಚಿತ್ರಕ್ಕೀಗ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದೆ. ಅಂದಹಾಗೆ, ಅಶೋಕ್‌ ಕಶ್ಯಪ್‌ ನಿರ್ದೇಶನದ ಚಿತ್ರಕ್ಕೆ "ಧ್ವಜ' ಎಂದು ನಾಮಕರಣ ಮಾಡಲಾಗಿದೆ. ಸಿಬಿಜೆ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸುಧಾ ಬಸವೇಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದಾರೆ.

ರವಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರಿಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಶೋಕ್‌ ಕಶ್ಯಪ್‌ ನಿರ್ದೇಶನದ ಜತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಇದೊಂದು ರಾಜಕೀಯ, ಲವ್‌ಸ್ಟೋರಿ ಮತ್ತು ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು, ಮೈಸೂರು ಮತ್ತು ಮೇಲುಕೋಟೆಯಲ್ಲಿ ಸುಮಾರು 80 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ.

ಚಿತ್ರದಲ್ಲಿ ದಿವ್ಯಾ ಉರುಡುಗ, ಟಿ.ಎನ್‌. ಸೀತಾರಾಂ, ವೀಣಾಸುಂದರ್‌, ತಬಲನಾಣಿ, ಬಲ, ಮಂಡ್ಯ ರವಿ, ಸುಂದರರಾಜ್‌ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರದ ಐದು ಹಾಡುಗಳಿಗೆ "ಕಬಾಲಿ' ಚಿತ್ರಕ್ಕೆ ಸಂಗೀತ ನೀಡಿದ್ದ ಸಂತೋಷ್‌ ನಾರಾಯಣನ್‌ ಸಂಗೀತ ನೀಡಿದ್ದಾರೆ.

ಕೆ.ಕಲ್ಯಾಣ್‌, ಕವಿರಾಜ್‌, ರವಿ, ಚಂದನ್‌ ಹಾಗೂ ಮಂಜು ಮಾಂಡವ್ಯ ಗೀತೆಗಳನ್ನು ರಚಿಸಿದ್ದಾರೆ. ರವಿಚಂದ್ರನ್‌ ಸಂಕಲನ ಮಾಡಿದರೆ, ಕಲೈ, ತ್ರಿಭುವನ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಾಸ್‌ ಮಾದ, ಜಾಲಿ ಬಾಸ್ಟಿನ್‌ ಸಾಹಸ ನಿರ್ದೇಶನವಿದೆ. ಪ್ರಕಾಶ್‌ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

Trending videos

Back to Top