CONNECT WITH US  

ಶಿವಣ್ಣ ರುಸ್ತುಂನಲ್ಲಿ ಬಾಲಿವುಡ್‌ ನಟ

ನಾಲ್ವರಲ್ಲಿ ಯಾರು ಬರ್ತಾರೆ?

ಶಿವರಾಜಕುಮಾರ್‌ ಅವರು "ರುಸ್ತುಂ' ಎಂಬ ಸಿನಿಮಾ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ಶುರುವಾಗಲಿದೆ. ಈಗ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್‌ ನಟರೊಬ್ಬರನ್ನು ಕರೆತರುವ ಪ್ರಯತ್ನದಲ್ಲಿದೆ ಚಿತ್ರತಂಡ.

ಹಾಗಾದರೆ ಯಾರು ಆ ಬಾಲಿವುಡ್‌ ನಟ ಎಂದರೆ ಸದ್ಯಕ್ಕೆ ಉತ್ತರವಿಲ್ಲ. ಸಂಜಯ್‌ ದತ್‌, ಅನಿಲ್‌ ಕಪೂರ್‌, ಸುನೀಲ್‌ ಶೆಟ್ಟಿ ಹಾಗೂ ಮನೋಜ್‌ ಬಾಜ್‌ಪೇಯಿ ಅವರಲ್ಲಿ ಒಬ್ಬರನ್ನು "ರುಸ್ತುಂ'ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಈ ನಾಲ್ವರಲ್ಲೂ ಮಾತುಕತೆ ನಡೆಯುತ್ತಿದ್ದು, ಅವರ ಡೇಟ್ಸ್‌ ಸೇರಿದಂತೆ ಇತರ ವಿಷಯಗಳು ಪಕ್ಕಾ ಆದರೆ ಈ ನಾಲ್ವರಲ್ಲಿ ಒಬ್ಬರು ಬರೋದು ಪಕ್ಕಾ. 

ಇನ್ನು, "ಮಫ್ತಿ' ನಂತರ ಜಯಣ್ಣ, ಮುರಳಿ ನಟನೆಯ ಮತ್ತೂಂದು ಸಿನಿಮಾವನ್ನು ನಿರ್ಮಿಸಲಿದ್ದಾರೆನ್ನಲಾಗಿತ್ತು. ಸದ್ಯಕ್ಕೆ ಆ ಸಿನಿಮಾ ಮುಂದಕ್ಕೆ ಹೋಗಿದ್ದು, ನರ್ತನ್‌ ನಿರ್ದೇಶನದಲ್ಲಿ ಯಶ್‌ ಸಿನಿಮಾವನ್ನೂ ಜಯಣ್ಣ ಮಾಡಲಿದ್ದಾರೆ. ಸದ್ಯ ಹರ್ಷ, ನಿಖೀಲ್‌ ಸಿನಿಮಾದಲ್ಲಿ ಬಿಝಿ ಇರುವುದರಿಂದ "ರಾಣಾ' ಕೂಡಾ ಮುಂದಕ್ಕೆ ಹೋಗಿದೆ. ಈ ಚಿತ್ರದ ನಿರ್ಮಾಣ ಕೂಡಾ ಜಯಣ್ಣ ಅವರದ್ದೇ. 

Trending videos

Back to Top