ಬಿಡುಗಡೆಯಾಯ್ತು “ಚಂಬಲ್’ ಚಿತ್ರದ ಮೊದಲ ಪೋಸ್ಟರ್
Team Udayavani, Mar 27, 2018, 2:44 PM IST
ಸತೀಶ್ ನೀನಾಸಂ “ಚಂಬಲ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಹೊಸ ಸುದ್ದಿಯೇನಲ್ಲ. “ಅಯೋಗ್ಯ’ ಮತ್ತು “ಗೋಧ್ರಾ’ಗಿಂಥ ಮುಂಚೆಯೇ ಒಪ್ಪಿಕೊಂಡ ಚಿತ್ರವಿದು. ಆದರೆ, ಅದ್ಯಾಕೋ ಚಿತ್ರದ ನಿರ್ದೇಶಕ ಜೇಕಬ್ ವರ್ಗೀಸ್, ಇದುವರೆಗೂ ಚಿತ್ರದ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ಈಗ ಅವರು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕೆಲಸ ಶುರು ಮಾಡಿದ್ದಾರೆ.
ಹೌದು, “ಚಂಬಲ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಹೆಸರು ಕೇಳಿದರೆ, ಇದು ಚಂಬಲ್ ಕಣಿವೆಯ ದರೋಡೆಕಾರರ ಕಥೆ ಅಂತ ಭಾವಿಸಬಹುದು. ಆದರೆ, ಪೋಸ್ಟರ್ ನೋಡಿದರೆ ನಿಮ್ಮ ಅಂದಾಜು ತಲೆ ಕೆಳಗಾಗುತ್ತದೆ. ಇಲ್ಲೊಂದು ನಗರ ಮತ್ತು ಸೂಟು-ಬೂಟು ತೊಟ್ಟಿರುವ ಸತೀಶ್ ನೀನಾಸಂ ಅವರನ್ನು ನೋಡಬಹುದು. ಹಾಗಾದರೆ, ಈ ಚಿತ್ರದ ಮೂಲಕ ನಿರ್ದೇಶಕ ಜೇಕಬ್ ವರ್ಗೀಸ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಬರಬಹುದು. ಆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಉತ್ತರ ಬೇಕಿದ್ದರೆ, ಇನ್ನೂ ಒಂದಿಷ್ಟು ದಿನ ಕಾಯಬೇಕು.
ಅಂದಹಾಗೆ, ಈ ಚಿತ್ರವನ್ನು ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗೀಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸತೀಧ್ ಜೊತೆಗೆ ಸೋನು ಗೌಡ, ಕಿಶೋರ್, ರೋಜರ್ ನಾರಾಯಣ್, ಅಚ್ಯುತ್ ಕುಮಾರ್, ಸರ್ದಾರ್ ಸತ್ಯ, ಪವನ್ ಕುಮಾರ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಪೂರ್ಣಚಂದ್ರ ತೇಜಸ್ವಿ ಮತ್ತು ಜೂಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಶಶಿಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು