ಪ್ರಿಯಾಂಕಾ ಸೆಕೆಂಡ್‌ ಹಾಫ್ ಮಾತು

Team Udayavani, May 22, 2018, 11:10 AM IST

priyanka.jpg

“ಸೆಕೆಂಡ್‌ ಹಾಫ್’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾದಾಗ ಅನೇಕರು ಅಚ್ಚರಿಪಟ್ಟಿದ್ದರು. ಅದಕ್ಕೆ ಕಾರಣ ಪ್ರಿಯಾಂಕಾ ಉಪೇಂದ್ರ ಅವರ ಗೆಟಪ್‌. ಕಾನ್ಸ್‌ಟೇಬಲ್‌ ಆಗಿ ಟಿವಿಎಸ್‌ ಓಡಿಸಿಕೊಂಡು ಬರುವ ಗೆಟಪ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದರು. ಈಗ “ಸೆಕೆಂಡ್‌ ಹಾಫ್’ ಚಿತ್ರ ಬಿಡುಗಡೆಯಾಗಿದೆ. ಯೋಗಿ ದೇವಗಂಗೆ ಈ ಚಿತ್ರದ ನಿರ್ದೇಶಕರು. ಚಿತ್ರ ಜೂನ್‌ ಮೊದಲ ವಾರ ತೆರೆಕಾಣುತ್ತಿದೆ. ಇಡೀ ಸಿನಿಮಾ ಪ್ರಿಯಾಂಕಾ ಸುತ್ತವೇ ಸುತ್ತಲಿದೆ. ವಿಭಿನ್ನ ಪಾತ್ರ ಮಾಡಿರುವ ಖುಷಿಯಲ್ಲಿರುವ ಪ್ರಿಯಾಂಕಾ ಉಪೇಂದ್ರ ಅವರು “ಸೆಕೆಂಡ್‌ ಹಾಫ್’ ಬಗ್ಗೆ ಮಾತನಾಡಿದ್ದಾರೆ ….

* ನಿಮ್ಮ “ಸೆಕೆಂಡ್‌ಹಾಫ್’ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ವಿಶೇಷತೆಯೇನು?
ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲ ಬಾರಿಗೆ ನಾನು ಪೊಲೀಸ್‌ ಪೇದೆಯಾಗಿ ನಟಿಸಿದ್ದೇನೆ. ಉಪ್ಪಿ ಅಣ್ಣನ ಮಗ ನಿರಂಜನ್‌ ಈ ಚಿತ್ರದ ಮೂಲಕ ಲಾಂಚ್‌ ಆಗುತ್ತಿದ್ದಾನೆ. ತುಂಬಾ ಫ್ರೆಶ್‌ ಆದ ಕಥೆ ಇದೆ. ಚಿತ್ರದಲ್ಲಿ ಸಿಸಿಟಿವಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾವನ್ನು ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುವ ವಿಶ್ವಾಸವಿದೆ. 

* ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ಅನುರಾಗ ಎಂಬ ಪಾತ್ರ ಮಾಡಿದ್ದೇನೆ. ಪೊಲೀಸ್‌ ಕಾನ್ಸ್‌ಟೇಬಲ್‌ ಪಾತ್ರ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕಾನ್ಸ್‌ಟೇಬಲ್‌ಗ‌ಳ ಕೆಲಸ ಹೇಗಿರುತ್ತದೆ, ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅವರ ಶ್ರಮ ಏನು ಎಂಬ ಅಂಶವನ್ನು ತೋರಿಸಿದ್ದೇನೆ. ಅದರಲ್ಲೂ ಮಹಿಳಾ ಕಾನ್ಸ್‌ಟೇಬಲ್‌ಗ‌ಳ ಬಗ್ಗೆ ಹೆಚ್ಚು ಫೋಕಸ್‌ ಮಾಡಲಾಗಿದೆ. ಇದು ಪೊಲೀಸ್‌ ಇಲಾಖೆ ಸೇರುವ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಬಹುದು. 

* ಪಾತ್ರಕ್ಕಾಗಿ ನಿಮ್ಮ ತಯಾರಿ?
ಮುಖ್ಯವಾಗಿ ನಾನು ಟಿವಿಎಸ್‌ ಓಡಿಸಬೇಕಿತ್ತು. ಅದನ್ನು ಕಲಿತೆ. ಈ ಪಾತ್ರಕ್ಕೆ ಬಾಡಿ ಲಾಂಗ್ವೇಜ್‌ ಕೂಡಾ ಮುಖ್ಯ. ಹಾಗಾಗಿ, ಬಾಡಿ ಲಾಂಗ್ವೇಜ್‌ ಮೇಲೆ ಹೆಚ್ಚು ಗಮನಹರಿಸಿದ್ದೇನೆ. ಮೇಕಪ್‌ ಇಲ್ಲದೇ ನಟಿಸಿದ್ದೇನೆ. ಇಡೀ ಪಾತ್ರಕ್ಕೆ ಬೇರೆ ತರಹದ ಲುಕ್ಸ್‌ ಬೇಕಿತ್ತು. ಪಾತ್ರ ಏನು ಬಯಸಿತ್ತೋ, ಅವೆಲ್ಲವನ್ನು ನೀಡಲು ನಾನಿಲ್ಲಿ ಪ್ರಯತ್ನಿಸಿದ್ದೇನೆ. 

* ಕಾನ್ಸ್‌ಟೇಬಲ್‌ಗ‌ಳ ಬಗ್ಗೆ ಏನು ಹೇಳಲು ಹೊರಟಿದ್ದೀರಿ?
ಮೊದಲೇ ಹೇಳಿದಂತೆ ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗ‌ಳ ಪಾತ್ರ ಕೂಡಾ ಮಹತ್ವದ್ದಾಗಿರುತ್ತದೆ. ಆದರೆ, ಕೆಲವೊಮ್ಮೆ ಅವರ ಶ್ರಮ ಬೆಳಕಿಗೆ ಬರೋದಿಲ್ಲ. ಒಳ್ಳೆಯ ಕೆಲಸ ಮಾಡಲು ಹುದ್ದೆ ಮುಖ್ಯವಾಗುವುದಿಲ್ಲ, ಜಾಣ್ಮೆ ಹಾಗೂ ಕೆಲಸದ ಮೇಲಿನ ಶ್ರದ್ಧೆ ಸಾಕು ಎಂಬ ಅಂಶವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಇದೊಂದು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ. ಒಂದು ಘಟನೆಯ ಸುತ್ತ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಸ್ವಲ್ಪ ಮಟ್ಟಿನ ಆ್ಯಕ್ಷನ್‌ ಕೂಡಾ ಇದೆ. 

* ಈ ಚಿತ್ರವನ್ನು ಪೊಲೀಸ್‌ ಇಲಾಖೆ ನೋಡಬೇಕು ಅಂತೀರಾ?
ನೋಡಿದ್ರೆ ಒಳ್ಳೆಯದು. ಸಾಕಷ್ಟು ಸೂಕ್ಷ್ಮ ವಿಚಾರಗಳನ್ನು ಇಲ್ಲಿ ಹೇಳಿದ್ದೇವೆ. ಇಡೀ ಸಿನಿಮಾ ನೈಜವಾಗಿ ಮೂಡಿಬಂದಿದೆ. ನಿರ್ದೇಶಕ ಯೋಗಿ ದೇವಗಂಗೆ ಅವರು ಹೊಸ ಕಾನ್ಸೆಪ್ಟ್ನೊಂದಿಗೆ ಚಿತ್ರ ಮಾಡಿದ್ದಾರೆ. 

* ಮೊದಲ ಬಾರಿಗೆ ಒಂದೇ ಮನೆಯ ಇಬ್ಬರು ಒಟ್ಟಿಗೆ ನಟಿಸಿದ್ದೀರಿ?
ಹೌದು, ಉಪ್ಪಿ ಅಣ್ಣನ ಮಗ ನಿರಂಜನ್‌ ಈ ಚಿತ್ರದ ಮೂಲಕ ಲಾಂಚ್‌ ಆಗುತ್ತಿದ್ದಾರೆ. ನಾನು ಮದುವೆಯಾಗಿ ಉಪ್ಪಿ ಮನೆಗೆ ಬರುವಾಗ ಆತ ಪುಟ್ಟ ಪಾಪು. ಈಗ ಹೀರೋ ಆಗಿದ್ದೇನೆ. ಖುಷಿಯಾಗುತ್ತದೆ. ಈ ಚಿತ್ರದಲ್ಲಿ ಆತ ಪಾತ್ರ ಮಾಡುತ್ತಾನೆಂದು ನನಗೆ ಗೊತ್ತಿರಲಿಲ್ಲ. ಅದೊಂದು ದಿನ ಮನೆಗೆ ಬಂದ ನಿರ್ದೇಶಕರು ನಿರಂಜನ್‌ ನೋಡಿ, ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆಂದು ಅವಕಾಶ ಕೊಟ್ಟಿದ್ದಾರೆ. ನಿರಂಜನ್‌ ಕೂಡಾ ಚೆನ್ನಾಗಿ ನಟಿಸಿದ್ದಾನೆ. ಆತನಿಗೆ ರಂಗಭೂಮಿಯ ಹಿನ್ನೆಲೆಯೂ ಇದೆ. 

* ನಿಮ್ಮ ಪಾತ್ರದ ಬಗ್ಗೆ ಉಪ್ಪಿ ಏನಂತ್ತಾರೆ?
ಅವರಿಗೆ ನಾನು ಯೂನಿಫಾರಂನಲ್ಲಿರುವ ಗೆಟಪ್‌ ಇಷ್ಟವಾಗಿದೆ. “ಆ ಗೆಟಪ್‌ನಲ್ಲಿ ತುಂಬಾ ಕ್ಯೂಟ್‌ ಆಗಿ ಕಾಣುತ್ತೀಯಾ’ ಅಂತಾರೆ.

* ಬೇರೆ ಸಿನಿಮಾಗಳ ಬಗ್ಗೆ ಹೇಳಿ?
ಸದ್ಯ “ಸೆಕೆಂಡ್‌ ಹಾಫ್’ ಬಿಡುಗಡೆಗೆ ರೆಡಿಯಾಗಿದೆ. ಅದು ಬಿಟ್ಟರೆ “ಹೌರಾ ಬ್ರಿಡ್ಜ್’ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದಿಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಮನರಂಜನೆ ಜೊತೆಗೆ ಸಣ್ಣ ಸಂದೇಶವಿರುವ ಸಿನಿಮಾಗಳನ್ನು ಮಾಡುವ ಆಸೆ ಇದೆ. 

ಟಾಪ್ ನ್ಯೂಸ್

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

12

ʼಟಾಕ್ಸಿಕ್ʼ ಅಪ್ಡೇಟ್‌ಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.