CONNECT WITH US  
echo "sudina logo";

ಮರುಭೂಮಿಯಲ್ಲಿ ರೋರಿಂಗ್ ಸ್ಟಾರ್

ರಾಜಸ್ತಾನದಲ್ಲಿ "ಭರಾಟೆ' ಫೋಟೋಶೂಟ್

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ "ಭರಾಟೆ' ಚಿತ್ರದ ಫೋಟೋಶೂಟ್ ರಾಜಸ್ತಾನದ ಮರುಭೂಮಿಯ ಸುಡುಬಿಸಿಲಿನಲ್ಲಿ ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಫೋಟೋ ಶೂಟ್ ಮಾಡಲಾಗುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ. ಅಲ್ಲದೇ ಶ್ರೀಮುರಳಿಯವರಿಗೆ ಜೋಡಿಯಾಗಿ "ಕಿಸ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಲೀಲಾ ಅವರು ನಟಿಸುತ್ತಿದ್ದಾರೆ. 

ಚಿತ್ರದ ಫೋಟೋ ಶೂಟ್ ಭುವನ್ ಗೌಡ ಮಾಡುತ್ತಿದ್ದು, ಚಿತ್ರ ತಂಡದ ಹಲವರು ಈಗಾಗಲೇ ರಾಜಸ್ತಾನದ ಮರುಭೂಮಿಗೆ ತೆರಳಿದ್ದಾರೆ. ಮತ್ತು ಚಿತ್ರದ ಫೋಟೋಗಳು ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತವೆ ಎಂಬುದು ಚಿತ್ರತಂಡದ ಮಾತು.

ಚಿತ್ರವನ್ನು ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳ ಮೂಲಕ ಸ್ಯಾಂಡಲ್‍ವುಡ್ ನಲ್ಲಿ ಬಹುಬೇಡಿಕೆಯಲ್ಲಿರುವ ನಿರ್ದೇಶಕ ಚೇತನ್ ಕುಮಾರ್‌ ನಿರ್ದೇಶಿಸುತ್ತಿದ್ದು, ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ರಾಜಸ್ತಾನದಲ್ಲಿ 20 ದಿನಗಳ ಶೂಟಿಂಗ್‍ಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಇದರ ಪೂರ್ವಭಾವಿಯಾಗಿ ಹಲವು ತಂತ್ರಜ್ಞರು ರಾಜಸ್ತಾನವನ್ನು ಸೇರಿಕೊಂಡಿದ್ದಾರೆ.

Trending videos

Back to Top