ಪವನ ಒಡೆಯರ್-ಅಪೇಕ್ಷಾ ಮದುವೆ
Team Udayavani, Aug 21, 2018, 11:23 AM IST
“ಗೂಗ್ಲಿ’, “ರಣವಿಕ್ರಮ’ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ “ನಟಸಾರ್ವಭೌಮ’ ಚಿತ್ರಗಳ ನಿರ್ದೇಶಕ ಪವನ ಪಡೆಯರ್ ಹಾಗೂ ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟ ನಟಿ ಅಪೇಕ್ಷಾ ಪುರೋಹಿತ್ ವಿವಾಹ ಕಾರ್ಯಕ್ರಮ ಸೋಮವಾರ ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿತು.
ಕುಣಿಗಲ್ ಮೂಲದ ಪವನ್ ಹಾಗೂ ಬಾಗಲಕೋಟೆಯ ನಟಿ ಅಪೇಕ್ಷಾ ಪುರೋಹಿತ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಪೇಕ್ಷಾ ಹಾಗೂ ಪವನ್ ಒಡೆಯರ್ ಕುಟುಂಬದ ಸದಸ್ಯರು, ಕೆಲವೇ ಕೆಲವು ಆಪ್ತ ಸಂಬಂಧಿಕರೊಂದಿಗೆ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನೆರವೇರಿತು.