CONNECT WITH US  

ಆ್ಯಂಗ್ರಿ ಯಂಗ್‍ಮ್ಯಾನ್ ಲುಕ್‍ನಲ್ಲಿ ನವರಸ ನಾಯಕ: Watch

"8 ಎಂಎಂ' ಚಿತ್ರದಲ್ಲಿ ವಿಭಿನ್ನ ಪಾತ್ರ

"ನೀರ್‌ ದೋಸೆ' ನಂತರ ನವರಸ ನಾಯಕ ಜಗ್ಗೇಶ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ "8 ಎಂಎಂ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವಿಭಿನ್ನ ಗೆಟಪ್‍ನಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಕಾಲದಲ್ಲಿ ಕೈಯಲ್ಲಿ ಹಣ ಇಲ್ದೇ ಇದ್ದರೆ ಏನಾಗುತ್ತೆ ಅನ್ನುವ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದ್ದು, ಟೀಸರ್ ನಲ್ಲಿ " ಕಾದೋನ್ ಮೇಧಾವಿ, ನುಗ್‍ದೋನ್ ಮೂರ್ಖ, ಕಾಯೋಣ... ಎಂದು ಜಗ್ಗೇಶ್ ಹೇಳುವ ಡೈಲಾಗ್‍ಗೆ ಸಿನಿರಸಿಕರು ಫಿದಾ ಆಗಿದ್ದಾರೆ. 

ಹಿಂದೆಂದೂ ಕಾಣದ ಅವತಾರದಲ್ಲಿ ಇಲ್ಲಿ ಜಗ್ಗೇಶ್ ಕಾಣಸಿಗಲಿದ್ದಾರೆ. ಹೌದು, ಆ್ಯಂಗ್ರಿ ಯಂಗ್‍ಮ್ಯಾನ್ ರೂಪದಲ್ಲಿ ಅಖಾಡಕ್ಕಿಳಿದಿರುವ ಜಗ್ಗೇಶ್ ಮುಖದಲ್ಲಿನ ಹಾವಭಾವಗಳು ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸಿದೆ. ಇನ್ನು ಚಿತ್ರಕ್ಕಾಗಿ ಹಾಗೂ ಪಾತ್ರಕ್ಕೆ ನ್ಯಾಯ ಸಲ್ಲಿಸುವದಕ್ಕಾಗಿ ತಮ್ಮ ದೇಹವನ್ನು ದಂಡಿಸಿರುವ ನವರಸನಾಯಕ ಇಲ್ಲಿ ಇನ್ನಷ್ಟು ಫಿಟ್ ಆಗಿದ್ದಾರೆ. 

ಅಂದ ಹಾಗೇ "8 ಎಂಎಂ' ತಮಿಳಿನ 8 ತೊಟಕಲ್ ಚಿತ್ರದ ಕನ್ನಡ ಅವತರಣಿಕೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಹರಿಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. 


Trending videos

Back to Top