ಯಶ್ “ಕೆಜಿಎಫ್’ಗೆ ಸುದೀಪ್ ಮೆಚ್ಚುಗೆ: ಟ್ವೀಟ್
Team Udayavani, Nov 10, 2018, 12:58 PM IST
ಭಾರಿ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ “ಕೆಜಿಎಫ್’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಶುಕ್ರವಾರವಷ್ಟೇ ಚಿತ್ರದ ಟ್ರೈಲರ್ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಸಿನಿಪ್ರಿಯರು ಟ್ರೈಲರ್ ವೀಕ್ಷಣೆ ಮಾಡಿದ್ದು, ಸ್ಯಾಂಡಲ್ವುಡ್ನಲ್ಲಿ “ಕೆಜಿಎಫ್’ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಏತನ್ಮಧ್ಯೆ ಚಿತ್ರದ ಟ್ರೈಲರ್ ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲ, ಕನ್ನಡ ಚಿತ್ರರಂಗದ ಸ್ಚಾರ್ ನಟ ಕಿಚ್ಚ ಸುದೀಪ್ ಕೂಡ ಬೆರಗಾಗಿದ್ದು, ಚಿತ್ರ ತಂಡದ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹೌದು! ಕಿಚ್ಚ ಸುದೀಪ ಚಿತ್ರದ ರಾಕಿಂಗ್ ಟ್ರೈಲರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಟ್ರೈಲರ್ ಲಾವಾರಸ ಉಕ್ಕಿ ಬಂದಂತಿಂದೆ ಎಂದು ಹೇಳಿದ್ದಾರೆ. ಅಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಈ ಚಿತ್ರವನ್ನು ಬೇರೆಯದ್ದೇ ಲೆವಲ್ಗೆ ಕೊಂಡೊಯ್ದಿದ್ದು, ಯಶ್ ಲುಕ್ಕಿಗೆ ಫಿದಾ ಆಗಿರೋದಾಗಿಯೂ ಟ್ವಿಟ್ಟರ್ ಮೂಲಕ ಬರೆದುಕೊಂಡಿದ್ದಾರೆ.
Seems like a valcano about to erupt. My best wshs to th team of #KGF .
Hats of to Prashanth for his mind boggling vision. He along with team has taken it to another level… Yash looks splendid. Kudos to @hombalefilms for their passion. https://t.co/OV0VtFHLTd— Kichcha Sudeepa (@KicchaSudeep) November 9, 2018
ಇನ್ನು ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ “ಕೆಜಿಎಫ್’, ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 80ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.ಅವರ ಅಭಿನಯ ಕೂಡ ಈ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಎನ್ನಲಾಗುತ್ತಿದೆ.
ಇನ್ನು ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.